September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

ಉಜಿರೆ: ಕರ್ನಾಟಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವ, ಎನ್.ಪಿ ಪ್ರೊಡಕ್ಷನ್ ನಲ್ಲಿ ಸ್ಪಂದನ ಟಿ.ವಿ. ಪ್ರಸ್ತುತಪಡಿಸುವ ರಾಜ್ಯದ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಕರುನಾಡು Got ಟ್ಯಾಲೆಂಟ್ ನ ಸೀಸನ್ 2 ಕ್ಕೆ ಉಜಿರೆಯ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ತಂಡವು ಆಯ್ಕೆಯಾಗುವ ಮೂಲಕ ಸ್ಥಳೀಯ ಹೆಗ್ಗಳಿಕೆಯನ್ನು ಹೆಚ್ಚಿಸಿದೆ.

ಇತ್ತೀಚೆಗೆ ನಡೆದ ಮೆಗಾ ಆಡಿಷನ್‌ನಲ್ಲಿ ಈ ತಂಡದ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ.ಡಿ.6ರಂದು ನಡೆದ ಮೆಗಾ ಆಡಿಷನ್‌ನಲ್ಲಿ HIPBOYZ ಡಾನ್ಸ್ ಕ್ರೀವ್‌ನ ನೃತ್ಯಗಾರ್ತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ತಂಡದಲ್ಲಿ ಸನ್ಮಿತಾ ಕುಕ್ಕಾವು, ಆಂಜೆಲಿನ್ ಡಿಸೋಜಾ, ದೀಕ್ಷಾ, ಧನ್ವಿ ಭಂಡಾರಿ, ಆಪ್ತ, ಅನ್ವಿತಾ, ರೇಖಾ, ಮನ್ವಿತಾ ಪ್ರಭು, ಧೃತಿ ಮತ್ತು ಸಮನ್ವಿ ಸೇರಿ ಒಟ್ಟು ಹತ್ತು ಪ್ರತಿಭಾವಂತ ನೃತ್ಯಗಾರ್ತಿಯರು ಭಾಗವಹಿಸಿದ್ದರು.

ಅವರ ಆಕರ್ಷಕ ನೃತ್ಯವು ಎಲ್ಲರ ಗಮನ ಸೆಳೆಯಿತು.ತಂಡದ ಈ ಯಶಸ್ಸಿಗೆ ಉಜಿರೆಯ ನೃತ್ಯ ಗುರುಗಳಾದ ಸಹನ್ ಎಮ್.ಎಸ್. ಉಜಿರೆ ಅವರು ಕಾರಣಕರ್ತರಾಗಿದ್ದಾರೆ. ಅವರ ಸೃಜನಾತ್ಮಕ ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ಈ ತಂಡವು ರಿಯಾಲಿಟಿ ಶೋನ ಎರಡನೇ ಹಂತಕ್ಕೆ ಆಯ್ಕೆಯಾಗಿದೆ. ಕರ್ನಾಟಕದ ಪ್ರತಿಷ್ಠಿತ ವೇದಿಕೆಯಲ್ಲಿ ಉಜಿರೆಯ ಪ್ರತಿಭೆಗಳು ಪ್ರಕಾಶಿಸಲು ಸಹನ್ ಅವರ ಪರಿಶ್ರಮ ಬೆನ್ನೆಲುಬಾಗಿದೆ.

Related posts

ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

Suddi Udaya

ಕೊಯ್ಯೂರು : ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರ ಎಳೆದು ಪರಾರಿ

Suddi Udaya

ನೈನಾಡು ಶ್ರೀ ರಾಮ ಯುವಕ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದ ರಿಕ್ಷಾ ಮೇಲೆ ಕಾಡುಕೋಣ ದಾಳಿ: ರಿಕ್ಷಾದಲ್ಲಿದ್ದ ಪುತ್ರ ದಿಲ್ಸನ್ ಗೆ ಗಾಯ ತಂದೆ ಡೆನ್ನಿಸ್ ಅಪಾಯದಿಂದ ಪಾರು

Suddi Udaya

ಬೆಳ್ತಂಗಡಿ :ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯ

Suddi Udaya

ವಿದ್ವತ್ ಭರವಸೆ: ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ

Suddi Udaya
error: Content is protected !!