23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯಾಟ : ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

ಉಜಿರೆ: ಮಹಿಳೆಯರ ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಪಂದ್ಯಾಟದಲ್ಲಿ ಪ್ರಕೃತಿ ಚಿಕಿತ್ಸಾ ಕಾಲೇಜು ಸಾಧನೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಮಂಡ್ಯ ವೈದ್ಯಕೀಯ ಕಾಲೇಜು, ಮಂಡ್ಯ ಇವರ ಸಹಯೋಗದಲ್ಲಿ ಡಿ.10 ಮತ್ತು 11 ರಂದು ಆಯೋಜಿಸಲಾದ ರಾಜ್ಯಮಟ್ಟದ ಮಹಿಳೆಯರ ಹ್ಯಾಂಡ್‌ಬಾಲ್ ಪಂದ್ಯಾಟದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ, ಉಜಿರೆ ಕಾಲೇಜು ತಂಡವು ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ಗಳಿಸಿದೆ.

ಸೆಮಿಫೈನಲ್ ಪಂದ್ಯಾಟದಲ್ಲಿ ಎಸ್‌ಎಸ್‌ಐಎಂಎಸ್, ದಾವಣಗೆರೆ ತಂಡವನ್ನು 4–2 ಗೋಲುಗಳ ಅಂತರದಲ್ಲಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಕಾಲೇಜು ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.

ಕಾಲೇಜಿನ ವಿದ್ಯಾರ್ಥಿನಿಯರಿಗೆ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ಹ್ಯಾಂಡ್‌ಬಾಲ್ ತರಬೇತಿದಾರರಾದ ಸುದೀನ್ ಅವರು ತರಬೇತಿ ನೀಡಿದ್ದು, ಕಾಲೇಜಿನ ದೈಹಿಕ ನಿರ್ದೇಶಕ ಧರ್ಮೇಂದ್ರ ಕುಮಾರ್ ಅವರು ಸಮಗ್ರ ಮಾರ್ಗದರ್ಶನ ನೀಡಿದರು.

Related posts

ಕುತ್ಲೂರು ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ವಕ್ಫ್ ಜಾಗೃತಿ ಸಭೆ ಕಾರ್ಯಕ್ರಮ

Suddi Udaya

ಮಡಂತ್ಯಾರು ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವ

Suddi Udaya

ಬಳಂಜ ವಾಲಿಬಾಲ್ ಪಂದ್ಯಾಟ, ಕೋಟ್ಯಾನ್ ರಾಕರ್ಸ್ ತಂಡಕ್ಕೆ ಪ್ರಶಸ್ತಿ

Suddi Udaya

ಕುತ್ಲೂರು: ಅಡಿಕೆ ಬೆಳೆ ಕೊಳೆರೋಗ ನಿಯಂತ್ರಣ, ಎಲೆಚುಕ್ಕಿ ರೋಗದ ಬಗ್ಗೆ ಹಾಗೂ ಬಯೊಗ್ಯಾಸ್ ಅಳವಡಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ವಾಣಿ ಆಂ.ಮಾ. ಶಾಲೆಯ ಕು. ಶಾನ್ವಿ ಕುಲಾಲ್ ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ

Suddi Udaya
error: Content is protected !!