July 24, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಮನೆಮನೆ ಸಂಪರ್ಕ ದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯದ ಅಂಗವಾಗಿ ಮನೆಮನೆ ಸಂಪರ್ಕ ದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನು ಸಂಘದ ಕರ್ನಾಟಕ ದಕ್ಷಿಣ ದ ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್, ಪುತ್ತೂರು ಜಿಲ್ಲಾ ಸಂಘಚಾಲಕ್ ವಿನಯಚಂದ್ರ, ಬೇಟಿಮಾಡಿ ಸಂಘಟನೆ ಮತ್ತು ಸೇವೆಯ 100ವರ್ಷಗಳ ಸಂಘ ಯಾತ್ರೆಯ ಬಗ್ಗೆ ತಿಳಿಸಿದರು.

ಮತ್ತು ಸ್ವಯಂಸೇವಕರು ಸಮಾಜದ ಸಜ್ಜನಶಕ್ತಿಯ ಸಹಕಾರದೊಂದಿಗೆ ಪಂಚ ಪರಿವರ್ತನೆ ಯ ಐದು ವಿಷಯಗಳ ಕುರಿತಾಗಿ ಮನೆ ಮನೆ ಸಂಪರ್ಕದ ಸಂದರ್ಭ ಸಾಹಿತ್ಯಗಳನ್ನು ನೀಡುವ ಮೂಲಕ ಜನಜಾಗೃತಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಪಂಚ ಪರಿವರ್ತನೆ1)ಸಾಮಾಜಿಕ ಸಾಮರಸ್ಯ,2)ಪರಿಸರ ಸಂರಕ್ಷಣೆ ,3) ಕುಟುಂಬ ಪ್ರಬೋಧನ, 4)’ ಸ್ವ’ ಆಧಾರಿತ ಜೀವನ, 5)ನಾಗರಿಕ ಕರ್ತವ್ಯಪ್ರಜ್ಞೆ ಯ ಬಗ್ಗೆ ವಿವರಿಸಿದರು.ಈ ಸಂದರ್ಭ ಘುಮಂತು ಕಾರ್ಯ ವಿಭಾಗ ಸಹ ಸಂಯೋಜಕ ಸುದರ್ಶನ್ ಕನ್ಯಾಡಿ ಮತ್ತು ಮಂಡಲ ಕಾರ್ಯವಾಹ ಸತ್ಯಪ್ರಸಾದ್ ಕಲ್ಮಂಜ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಸುಧಾಕರ ನಾಯಕ್ ನಿಧನ

Suddi Udaya

ಡಿ.25-26: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಪರಿವಾರ ದೈವಗಳ ನರ್ತನ ಸೇವೆ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯಿಂದ ಸೇವಾ ಯೋಜನೆ ಹಸ್ತಾಂತರ

Suddi Udaya

ಎಕ್ಸೆಲ್‌ನ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಗಳಿಗೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಕಾಲೇಜಿಗೆ ಪ್ರಾಜೆಕ್ಟರ್ ಹಸ್ತಾಂತರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ನ.7 ರಂದು ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯಲಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆ

Suddi Udaya
error: Content is protected !!