September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ವಲಯ 15 ರ ತರಬೇತಿ ವಿಭಾಗಕ್ಕೆ ಜೆಸಿಐ ಬೆಳ್ತಂಗಡಿಯ ಆಶಾಲತಾ ಪ್ರಶಾಂತ್ ಸಂಯೋಜಕರಾಗಿ ನಿಯೋಜನೆ

ಬೆಳ್ತಂಗಡಿ: ವಿಟ್ಲದಲ್ಲಿ ನಡೆದ ಜೆಸಿಐ ಭಾರತದ ವಲಯ 15 ರ ಪದಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಇದರ ಈ ವರ್ಷದ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಇವರು 2026 ರ ವಲಯಾಧ್ಯಕ್ಷ ಇವರಿಂದ ಪ್ರಮಾಣಚನ ಸ್ವೀಕರಿಸಿದರು.

ಇವರು 2026 ನೇ ಸಾಲಿನ ವಲಯಾಡಳಿತ ಮಂಡಳಿಯ ತರಬೇತಿ ವಿಭಾಗದ ‘ಎಫೆಕ್ಟೀವ್ ಪಬ್ಲಿಕ್ ಸ್ಪೀಚ್, ಔಟ್‌ ಬಾಂಡಿಂಗ್ ಟ್ರೈನಿಂಗ್ ಪ್ರೋಗ್ರಾಂ, ಹಾಗೂ ಸ್ಪೀಚ್ ಕ್ರಾಫ್ಟ್’ ಇದರ ವಲಯ ಸಂಯೋಜಕರಾಗಿ ನಿಯೋಜನೆಗೊಂಡಿರುತ್ತಾರೆ. ಜೆಸಿಐ ಬೆಳ್ತಂಗಡಿಯ 48 ವರ್ಷ ಇತಿಹಾಸದಲ್ಲಿ ಪ್ರಥಮವಾಗಿ ಮಹಿಳಾ ಅಧ್ಯಕ್ಷರನ್ನು ಕಂಡ ಬೆಳ್ತಂಗಡಿ ಜೇಸಿ ಈ ವರ್ಷ ಜೇಸಿ ಆಶಾಲತಾ ಪ್ರಶಾಂತ್ ನಾಯಕತ್ವದಲ್ಲಿ ಜೇಸಿ ಸದಸ್ಯರಿಗೆ ಹಾಗೂ ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ಹಲವಾರು ವಿಭಾಗದಲ್ಲಿ ತರಬೇತಿ ಆಯೋಜಿಸಿರುತ್ತಾರೆ. ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವವದ ಮೂಲಕ ತಾಲೂಕಿನ ಯುವ ಪ್ರತಿಭೆಗಳಿಗೆ ವೇದಿಕೆ ಅವಕಾಶ ಹಾಗೂ ಸಾಧಕರಿಗೆ ಸಾಧನ ಶ್ರೀ ಪ್ರಶಸ್ತಿ ಮುಂತಾದ ಕಾರ್ಯಕ್ರಮ ನಡೆಸಿ ಯಶಸ್ವಿ ಅಧ್ಯಕ್ಷರಾಗಿ ಹೊರಹೊಮ್ಮಿದವರು.

Related posts

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಕೇಂದ್ರ ಕಮಿಟಿಯ ನೂತನ ಸಮಿತಿ ರಚನೆ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ವತಿಯಿಂದ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಖಂಡಿಸಿ ಪಂಜಿನ ಮೆರವಣಿಗೆ

Suddi Udaya

ಎಸ್.ಡಿ.ಎಂ ಪ.ಪೂ‌ ಕಾಲೇಜಿನ‌ ಕನ್ನಡ ಸಂಘ ಉದ್ಘಾಟನೆ

Suddi Udaya

ಧರ್ಮಸ್ಥಳ: ಭಕ್ತಿಯ ನಡಿಗೆಯಲ್ಲಿ ಭಕ್ತರ ಮನಸೆಳೆದ ಆನೆ- ದೊಡ್ಡ ಗಾತ್ರದ ಶಿವನ ಮೂರ್ತಿ: ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉದ್ಯಮಿ ಮೋಹನ್ ಕುಮಾರ್ ರವರ ಸೇವೆಗೆ ಮೆಚ್ಚುಗೆ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಂದಂತಹ ಗ್ರಾಹಕರಿಗೆ ಗಿಡಗಳನ್ನು ನೀಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

Suddi Udaya
error: Content is protected !!