September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಣಿಯೂರು ಗ್ರಾ.ಪಂ.ನಲ್ಲಿ ವಿಶೇಷ ಚೇತನ ಸಮನ್ವಯ ಗ್ರಾಮ ಸಭೆ ಮತ್ತು ಸಾಧನ ಸಲಕರಣೆ ವಿತರಣೆ

ಕಣಿಯೂರು : ವಿಶ್ವ ವಿಶೇಷ ಚೇತನರ ದಿನಾಚರಣೆಯ ಪ್ರಯುಕ್ತ ಕಣಿಯೂರು ಗ್ರಾಮ ಪಂಚಾಯತ್ 2025 – 26 ನೇ ಸಾಲಿನ ವಿಶೇಷ ಚೇತನ ಸಮನ್ವಯ ಗ್ರಾಮ ಸಭೆಯನ್ನು ಡಿ.18 ರಂದು ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯ ಪ್ರಸ್ತಾವನೆ ಮತ್ತು 2024 25 ನೇ ಸಾಲಿನ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಚಿರಂಜೀವಿ ಶೆಟ್ಟಿ ವಾಚಿಸಿದರು .

ತಾಲೂಕು ಪಂಚಾಯತ್ ನ ವಿವಿಧೋದ್ದೇಶ ಪುನರ್ ವಸತಿ ಸಂಯೋಜಕ ಜಾನ್ ಇವರು ವಿಶೇಷ ಚೇತನರಿಗೆ ಸರಕಾರದಿಂದ ಸಿಗುವ ಹಲವಾರು ಸೌಲಭ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ವಿವರಿಸಿದರು. ಹಾಗೂ ಕೆಲವೊಂದು ವಿಶೇಷ ಚೇತನರ ಬೇಡಿಕೆಯನ್ನು ತಕ್ಷಣವೇ ಸ್ಪಂದಿಸುವಂತೆ ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್ ಮಾತಾಡಿ ವಿಶೇಷ ಚೇತನರಿಗೆ ಪಂಚಾಯತ್ ನಲ್ಲಿ ಶೇಕಡ 5% ಅನುದಾನದ ಸಿಗಬೇಕಾದ ಸೌಲಭ್ಯವನ್ನು ತಮಗೆ ಒದಗಿಸುತ್ತೇನೆಂದು ಭರವಸೆ ನೀಡಿದರು.

ವಿಶೇಷ ಚೇತನರ ಬೇಡಿಕೆಗಳ ಅರ್ಜಿಯನ್ನು ಸಭೆಯಲ್ಲಿ ಸ್ವೀಕರಿಸಲಾಯಿತು. ನಾರಾಯಣ ಪೂಜಾರಿ ಉರುವಾಲು ಗ್ರಾಮ ಇವರಿಗೆ ಪಂಚಾಯಿತಿನ ಶೇಕಡ 5% ಅನುದಾನದಲ್ಲಿ ವಾಕರ್ ಅನ್ನು ಅಧ್ಯಕ್ಷರ ಮೂಲಕ ನೀಡಲಾಯಿತು. ಮಹಮದ್ ಲತೀಫ್ ಇವರಿಗೆ ವಾಟರ್ ಬೆಡ್ ನೀಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ , ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಚಿರಂಜೀವಿ, ಗ್ರಾಮ ಪಂಚಾಯತ್ ಬೆಳಾಲು ಪುನರ್ ವಸತಿ ಕಾರ್ಯಕರ್ತ ಹೀರಣ್ಣ, ಉಜಿರೆ ಗ್ರಾಮ ಪಂಚಾಯತ್ ಪುನರ್ವಸತಿ ಕಾರ್ಯಕರ್ತ ವಿಪುಲ್ ಪೂಜಾರಿ, ಇಳಂತಿಲ ಗ್ರಾಮ್ ಪಂಚಾಯತ್ ಪುನರ್ವಸತಿ ಕಾರ್ಯಕರ್ತರಾದ ಶ್ರೀಮತಿ ರಾಧಿಕಾ, ಕೊಯ್ಯುರು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಕೀರ್ತನ್ , ಇಂದಬೆಟ್ಟು ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವವಸತಿ ಕಾರ್ಯಕರ್ತರಾದ ಜೋಸೆಫ್ , ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ರೇವತಿ, ಸಂಜೀವಿನಿ ಎಮ್.ಬಿ.ಕೆ ಶ್ರೀಮತಿ ರತ್ನಾವತಿ, ವಿಶೇಷ ಚೇತನ ಬಂಧುಗಳು ಮತ್ತು ಅವರ ಪೋಷಕರು , ಹಾಗೂ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಆರ್ ಸಾಲಿಯಾನ್ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಮೀನು ಮರಿಗಳ ಬಿತ್ತನೆ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಸಿದ್ದರಾಮಯ್ಯ ಮಿಸ್ಟರ್ ಕ್ಲೀನ್ ಅಲ್ಲ, ಮಿಸ್ಟರ್ ಕರಪ್ಟ್, 100% ಹಗರಣ ಕಾಂಗ್ರೇಸ್ ಸರಕಾರದ ಸಾಧನೆ: ಬಿಜೆಪಿ ಅಭ್ಯರ್ಥಿಗೆ ಎರಡು ಸಾವಿರ ಮತದ ಅಂತರದ ಗೆಲುವು: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

Suddi Udaya

ಮಂಗಳೂರು ಕೃಷಿಕರ ಸಹಕಾರಿ ಸಂಘದ ನಿರ್ದೇಶಕರಾಗಿ ಬಾಲಕೃಷ್ಣ ಗೌಡ ಕೇರಿಮಾರು ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರ

Suddi Udaya

ಅಳದಂಗಡಿ ಸತ್ಯದೇವತೆ ದೈವಸ್ಥಾನದ ಕಾರ್ಣಿಕ: ಕಳೆದುಹೋದ ಚಿನ್ನದ ಬ್ರಾಸ್ ಲೆಟ್ ಪತ್ತೆ

Suddi Udaya

ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ

Suddi Udaya
error: Content is protected !!