25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬಜಿರೆ: ಹೊಸಪಟ್ಣ ಪರಿಸರದಲ್ಲಿ ಚಿರತೆ ಓಡಾಟ-ಜನರಲ್ಲಿ ಆತಂಕ: ಬೋನ್ ಅಳವಡಿಸಲು ಗ್ರಾಮಸ್ಥರ ಆಗ್ರಹ

ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಗೆ ಒಳಪಡುವ ಬಜಿರೆ ಗ್ರಾಮದ ಹೊಸಪಟ್ಣ ಪರಿಸರದಲ್ಲಿ ಕಳೆದ ೪-೫ ದಿನಗಳಿಂದ ಎರಡು ಚಿರತೆಗಳು ಹಗಲಿನಲ್ಲೇ ಓಡಾಟ ನಡೆಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಡಿ.೧೭ ರಂದು ಸಂಜೆ ವೇಳೆಗೆ ದಾರಿ ಮಧ್ಯೆ ಚಿರತೆ ಇರುವುದನ್ನು ವ್ಯಕ್ತಿಯೊಬ್ಬರು ಕಂಡಿದ್ದಾರೆ. ಬಂಟ್ವಾಳದ ಅಜ್ಜಿಬೆಟ್ಟು ಹಾಗೂ ಬೆಳ್ತಂಗಡಿಯ ಹೊಸಪಟ್ಣದಲ್ಲಿ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೆ ರಾತ್ರಿ ವೇಳೆ ಚಿರತೆ ಕೂಗುವ ಶಬ್ದ ಕೇಳಿ ಜನರು ಭಯಭೀತರಾಗಿದ್ದಾರೆ.


ಹೊಸಪಟ್ಣವಾಗಿ ವಿವಿಧ ಶಾಲಾ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಹೋಗುತ್ತಿದ್ದು ಪೊಷಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ದಾರಿ ಮಧ್ಯೆ ಗಿಡಗಂಟಿಗಳು ಬೆಳೆದಿದ್ದು ಇನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ ಚಿರತೆ ಎಲ್ಲಿ ಇದರಲ್ಲಿ ಅವಿತುಕೊಳ್ಳುತ್ತದೆ ಎಂಬ ಭಯ ಜನರಲ್ಲಿದೆ. ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿದೆ. ಆದರೆ ಬೋನ್ ಅಳವಡಿಸುವ ಕಾರ್ಯ ಆಗಿಲ್ಲ. ಚಿರತೆ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಕಾಣಸಿಗುತ್ತಿದ್ದು ನಿತ್ಯ ಕೆಲಸಕ್ಕೆ ಹೋಗುವ ಮಂದಿ ಜೀವಭಯದಿಂದ ಸಂಚರಿಸುತ್ತಿದ್ದಾರೆ. ಸುತ್ತಮುತ್ತಲಿನ ಜನರು ಪಟಾಕಿ ಸಿಡಿಸಿ ಕಾಡಿಗೆ ಹಟ್ಟಿದರು, ಚಿರತೆ ಮತ್ತೆ ನಾಡಿನತ್ತ ಬರುತ್ತಿದೆ. ಕಳೆದ ರಾತ್ರಿ ಬೈಕ್ ಸವಾರೊಬ್ಬರು ಚಿರತೆ ಹಾವಳಿಯಿಂದ ಭಯಭೀತರಾಗಿ ಮನೆ ಸೇರಿದ ಘಟನೆ ನಡೆದಿದೆ. ಯಾವುದೇ ಅನಾಹುತ ಸಂಭವಿಸಿಸುವ ಮೊದಲು ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಊರವರು ಆಗ್ರಹಿಸಿದ್ದಾರೆ.

Related posts

ಪಟ್ರಮೆ ಗ್ರಾ.ಪಂ. ಪ್ರಥಮ ಹಂತದ ಗ್ರಾಮ ಸಭೆ

Suddi Udaya

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಹಾಗೂ ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವತಿಯಿಂದ ಹರೀಶ್ ಮೂಲ್ಯ ರವರಿಗೆ ಆರ್ಥಿಕ ಧನಸಹಾಯ

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಾದ ಜೈದೀಪ್ ಗೌಡ ಹಾಗೂ ರಕ್ಷಣ್ ಶೆಟ್ಟಿ ತೇರ್ಗಡೆ

Suddi Udaya

ಸುಲ್ಕೇರಿ: ನಾವರ ಗ್ರಾಮದ ಪ್ರತಿ ಮನೆಗೂ ದಿನದ 24 ಗಂಟೆಯೂ ಪೂರ್ತಿ ನೀರು ಸರಬರಾಜು

Suddi Udaya

ಜ.14-18: ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya
error: Content is protected !!