September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಮಕ್ಕಳ ಗ್ರಾಮಸಭೆ

ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ಸ್ಥಿತಿಗತಿ, ಅವರುಗಳ ಅಭಿವೃದ್ಧಿ, ಹಾಗೂ ಸಂವಿಧಾನಾತ್ಮಕವಾಗಿ ಒದಗಿಸಿರುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಲು ಮಕ್ಕಳ ಹೆತ್ತವರು ಹಾಗೂ ಮಕ್ಕಳಿಗೆ ಮಕ್ಕಳ ಹಕ್ಕಿನ ವಿಶೇಷ ಗ್ರಾಮ ಸಭೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಬಗ್ಗೆ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಆಟ ಪಾಠಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ರೂಪಿಸುವ ಕುರಿತು, ಪ್ರತಿ ಮೂರು ವರ್ಷದಿಂದ ಆರು ವರ್ಷದ ಎಲ್ಲಾ ಮಕ್ಕಳು ಅಂಗನವಾಡಿ ಹಾಗೂ ಶಾಲೆಗಳಲ್ಲಿ ದಾಖಲಾತಿ ಶಿಕ್ಷಣವನ್ನು ಪ್ರಾರಂಭಿಸುವ ಕುರಿತು, ಜೀತ ಪದ್ಧತಿ ಹಾಗೂ ಕೃಷಿ ಕಾರ್ಮಿಕ ವೃತ್ತಿಯಲ್ಲಿ ಮಕ್ಕಳನ್ನು ತೊಡಗಿಸುವವರ ವಿರುದ್ಧ ಜಾಗೃತಿ ಮೂಡಿಸುವ, ಹೆಣ್ಣು ಮಕ್ಕಳ ಪೋಷಣೆ ಹಾಗೂ ರಕ್ಷಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಧರ್ಮಸ್ಥಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಒಟ್ಟು ಆರು ಶಾಲೆಗಳ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಮಂಡಿಸಿದರು. ಮಕ್ಕಳ ಜಾಗೃತಿ ಶಿಸ್ತು, ಸಮಾಜದಲ್ಲಿ ಮಕ್ಕಳ ಪಾತ್ರ ಮಕ್ಕಳ ಜವಾಬ್ದಾರಿಯಲ್ಲಿ ಹೆತ್ತವರ ಪಾತ್ರ, ಪರಿಸರ ಜಾಗೃತಿಯ ಸ್ವಚ್ಛತೆಯ ಬಗ್ಗೆ ಪಂಚಾಯತ್ ಉಪಾಧ್ಯಕ್ಷ ಪಿ ಶ್ರೀನಿವಾಸ್ ರಾವ್ ಸಭೆಯಲ್ಲಿ ತಿಳಿಸಿದರು. ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀ ಮಧು ಬಿ. ರವರು ಮಕ್ಕಳ ಹಕ್ಕುಗಳ ಒಡಂಬಡಿಕೆ, ಬಾಲ ನ್ಯಾಯ ಮಂಡಳಿ, ಮಕ್ಕಳ ನ್ಯಾಯ ಕಾಯ್ದೆ, ಅಪರಾಧ ವಿಭಾಗ, ಪಾಲನೆ ಪೋಷಣೆ ರಕ್ಷಣೆ ಹಕ್ಕುಗಳ ಉಲ್ಲಂಘನೆ ಇವುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಧರ್ಮಸ್ಥಳ ಗ್ರಂಥಾಲಯ ಅರಿವು ಕೇಂದ್ರದ ಶ್ರೀಮತಿ ಮಂಜುಳಾ ಇವರು ಓದುವ ಬೆಳಕು ಮಕ್ಕಳ ಭಾಗವಹಿಸುವಿಕೆ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರವಾಗಿ ಪೋಸೋಲಿಕೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಬಿಂದು ಇವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ತಿಳಿಸಿದರು. ಧರ್ಮಸ್ಥಳ ಗ್ರಾಮ ಪಂಚಾಯತ್ ಪಂಚಾಯತಿ ಅಭಿವೃದ್ಧಿ ಶ್ರೀಮತಿ ಗಾಯತ್ರಿ ಸ್ವಾಗತಿಸಿ ಮಕ್ಕಳ ಗ್ರಾಮ ಸಭೆಯ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಸದಸ್ಯರಾದ ಮುರಳಿದರ ದಾಸ್, ಶ್ರೀಮತಿ ಸುನಿತಾ ಡಿಕೆ. 6 ಶಾಲೆಯ ನಾಯಕ ನಾಯಕಿಯರು, ಸಾಲ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ ಅಂಗನವಾಡಿ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಧನ್ಯವಾದ ನೀಡಿದರು.

Related posts

ಗಾಳಿ ಮಳೆಗೆ ಕುಸಿದು ಬಿದ್ದ ಮನೆ : ಉಜಿರೆ ಗ್ರಾ.ಪಂ. ನಿಂದ ರೂ.10 ಸಾವಿರ ಪರಿಹಾರ ಮಂಜೂರು

Suddi Udaya

ಶೌರ್ಯ ಇಂಟರ್ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ನಿಶಾನ್ ಎಚ್ ಪೂಜಾರಿ ಗೆ ಚಿನ್ನದ ಪದಕ

Suddi Udaya

ದ್ವಿಚಕ್ರ ವಾಹನ-ಕಾರು ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

Suddi Udaya

ಉಜಿರೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಶ್ರೀ ಮಂಜುನಾಥ ಬನ್ನಿಸ್ ಟಂಟೋಲ’ ಘಟಕಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: ಪಿಎಲ್‌ಡಿ ಬ್ಯಾಂಕ್ ಹಿರಿಯ ಲೆಕ್ಕಾಧಿಕಾರಿ ಆಶಾಲತಾ ಡಿ. ನಿವೃತ್ತಿ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಕ್ಷೇಮ ನಿಧಿ ಯೋಜನೆ ಸಹಾಯಧನ ವಿತರಣೆ

Suddi Udaya
error: Content is protected !!