July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದ.ಕ ಹಾಲು ಒಕ್ಕೂಟದ ವತಿಯಿಂದ ಹೆಣ್ಣು ಕರುಗಳ ಪ್ರದರ್ಶನ

ಬೆಳ್ತಂಗಡಿ : ಕರಾಯ ಶ್ರೀ ಮಹಾಲಿಂಗೇಶ್ವರ ದೇವರ ಗದ್ದೆಯಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಸ್ಪರ್ಧೆಯು ಡಿ.೨೦ರಂದು ನಡೆಯಿತು.

ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆಯುವರು ಗೋಪೂಜೆ ನಡೆಸುವ ಮುಖಾಂತರ ಕರುಪ್ರದರ್ಶನವನ್ನು ಉದ್ಘಾಟಿಸಿದರು. ಬಳಿಕ ಒಕ್ಕೂಟದ ಉಪವ್ಯವಸ್ಥಾಪಕ ಡಾ|| ಕೆ ಚಂದ್ರಶೇಖರ ಭಟ್ ಕರು ಸಾಕಾಣಿಕೆಯ ಕುರಿತು ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆಯವರು ಮಾತನಾಡುತ್ತ ಒಕ್ಕೂಟದ ವ್ಯಾಪ್ತಿಯಲ್ಲಿ ಲಿಂಗ ವರ್ಗೀಕೃತ ವೀರ್ಯ ನಳಿಕೆಯ ಬಳಕೆ, ಭ್ರೂಣ ವರ್ಗಾವಣೆ, ರಾಸುಗಳಲ್ಲಿ ಪೋಷಕಾಂಶ ನಿರ್ವಹಣೆಯ ಕುರಿತು ಮೊಬೈಲ್ ಆಪ್ ಬಿಡುಗಡೆ ಇತ್ಯಾದಿ ಕಾರ್ಯಕ್ರಮಗಳ ಅನುಷ್ಠಾನದ ಮುಖಾಂತರ ಹಾಲು ಸಂಗ್ರಹಣೆ ಹೆಚ್ಚಳದ ಪ್ರಯತ್ನಗಳಾಗುತ್ತಿರುವುದನ್ನು ತಿಳಿಸಿದರು.

ಕ.ಹಾ.ಮ.ದ ನಿರ್ದೇಶಕರಾದ ಡಾ| ಬಸವರಾಜ್ ಮಾತನಾಡುತ್ತಾ ದ.ಕ ಹಾಲು ಒಕ್ಕೂಟವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಲಾಭದಾಯಕವಾಗಿ ವ್ಯವಹರಿಸುತ್ತಿರುವ ಬಗ್ಗೆ ಶ್ಲಾಘಿಸಿದರು. ಕರ್ನಾಟಕ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳ ಪೈಕಿ ರೈತರಿಗೆ ಅತಿ ಹೆಚ್ಚಿನ ದರವನ್ನು ದ.ಕ ಹಾಲು ಒಕ್ಕೂಟವು ನೀಡಿ ರೈತರನ್ನು ಪ್ರೋತ್ಸಾಹಿಸುತ್ತಿದೆ. ಎಂದು ಸಭೆಯ ಗಮನಕ್ಕೆ ತಂದರು. ಕ.ಹಾ.ಮ.ವು ದ.ಕ ಹಾಲು ಒಕ್ಕೂಟಕ್ಕೆ ಎಲ್ಲಾ ರೀತಿಯ ಸಹಾಯ ನೀಡಲು ಸಿದ್ಧವಿರುವುದಾಗಿ ಈ ಸಂದರ್ಭದಲ್ಲಿ ತಿಳಿಸುತ್ತಾ ದ್ರವಸಾರಜನಕ ಸೈಲೋವನ್ನು ಕ.ಹಾ.ಮ ದಿಂದ ಒದಗಿಸುವುದಾಗಿಯೂ ಭರವಸೆಯನ್ನಿತ್ತರು. ಹಾಲು ಸಂಗ್ರಹಣೆಯನ್ನು ದಿನವಹಿ 5.5 ಲಕ್ಷ, ಲೀಟರ್ ಗಳಿಗೆ ಹೆಚ್ಚಿಸಿದಲ್ಲಿ ಒಕ್ಕೂಟವು ಸ್ವಾವಲಂಬನೆಯನ್ನು ಸಾಧಿಸಬಹುದಾಗಿದೆ ಎಂದು ನೆರೆದ ಹೈನುಗಾರ ರೈತ ಬಾಂಧವರಲ್ಲಿ ಮನವಿ ಮಾಡಿದರು. ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್ ಕೋಟ್ಯಾನ್, ಒಕ್ಕೂಟದ ವ್ಯವಸ್ಥಾಪಕ ನೀರ್ದೇಶಕ ವಿವೇಕ್ ಡಿ, ಮಾಜಿ ಅಧ್ಯಕ್ಷರಾದ ಸುಚರಿತ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರತಿನಿಧಿ ಮನೋಜ್ ಮಿನೇಜಸ್ ಸಾಂದರ್ಭಿಕವಾಗಿ ಮಾತನಾಡಿದರು.

ಒಕ್ಕೂಟದ ನಿರ್ದೇಶಕರುಗಳಾದ ಜಯರಾಮ ರೈ ಬಳಜ್ಜ, ಸವಿತಾ ಶೆಟ್ಟಿ, ಪ್ರಭಾಕರ ಆರಂಬೋಡಿ, ನಂದರಾಮ ರೈ, ಭರತ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ|| ಅರುಣ್ ಕುಮಾರ್ ಶೆಟ್ಟಿ, ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷೆ ಹೇಮಾವತಿ ಚಂದ್ರಶೇಖರ್, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅನಂತಕೃಷ್ಣ ಕೆ., ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ಒಕ್ಕೂಟದ ವ್ಯವಸ್ಥಾಪಕರಾದ ಡಾ| ರವಿರಾಜ ಉಡುಪ ಸ್ವಾಗತಿಸಿ, ಉಪವ್ಯವಸ್ಥಾಪಕ ಡಾ| ಸತೀಶ್‌ರಾವ್ ವಂದಿಸಿದರು. ವಿಸ್ತರಣಾಧಿಕಾರಿ ಶ್ರೀಮತಿ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು. ಹೆಣ್ಣು ಕರುಗಳ ಪ್ರದರ್ಶನದಲ್ಲಿ ದ.ಕ ಜಿಲ್ಲೆಯ ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸದಸ್ಯ ರೈತರು ಒಟ್ಟು 150ಕ್ಕೂ ಮಿಕ್ಕಿ ಕರುಗಳನ್ನು ತಂದು ಭಾಗವಹಿಸಿದರು. ಜರ್ಸಿ, ಹೆಚ್.ಎಫ್, ದೇಸೀ ತಳಿ ಮತ್ತು ಎಮ್ಮೆ ಕರುಗಳ ವಿಭಾಗದಲ್ಲಿ ವಿವಿಧ ವಯೋಗುಂಪುಗಳಲ್ಲಿ ಸ್ಪರ್ಧೆ ನಡೆದು ವಿಜೇತರಿಗೆ ಪ್ರತಿ ಗುಂಪಿನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ಕರುಗಳಿಗೆ ಬಕೆಟ್ ಮತ್ತು ನಂದಿನಿ ಪಶು ಆಹಾರಗಳನ್ನು ಪ್ರೋತ್ಸಾಹಕ ಬಹುಮಾನವಾಗಿ ಕೊಡಲಾಯಿತು. ಹಲವು ವಸ್ತು ಪ್ರದರ್ಶನ ಮಳಿಗೆಗಳಿದ್ದು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಕರುಪ್ರದರ್ಶನವನ್ನು ವೀಕ್ಷಿಸಿದರು.

Related posts

ಕೊಯ್ಯೂರು ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್:ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ

Suddi Udaya

ಪಡಂದಡ್ಕ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಎಸ್.ಡಿ.ಪಿ.ಐ ಮನವಿ

Suddi Udaya

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಭೇಟಿ

Suddi Udaya

ನಾಡಕಚೇರಿಗಳಲ್ಲಿ ಸರ್ವರ್ ಸಮಸ್ಯೆ-ಜನರು ಹೈರಾಣು

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಹಿಳಾ ಶಕ್ತಿ ಸಂಘ ರಚನೆ

Suddi Udaya
error: Content is protected !!