July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಶಾಸಕರಿಂದ ಆಗಿದೆಯೇ; ಅಳದಂಗಡಿ ಜನಸ್ಪಂದನ ಸಭೆಯಲ್ಲಿ ಶಾಸಕರಿಗೆ ಗ್ರಾಮಸ್ಥರ ಪ್ರಶ್ನೆ

ಅಳದಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಅಳದಂಗಡಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಡಿ. 20 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮಾಳಿಗೆಬೈಲು ವಿದ್ಯುತ್ ಸಂಪರ್ಕ ಶಾಸಕರಿಂದ ಆಗಿದೆಯೇ ಅಲ್ಲಿ ಬೇರೆಯವರು ನಾವು ಮಾಡಿದ್ದು ಎಂದು ಬ್ಯಾನರ್ ಹಾಕಿದ್ದಾರೆ. ಈ ಯೋಜನೆ ಬೇರೆಯವರಿಂದ ಆಗಿದಿಯೋ ಎಂದು ಗ್ರಾಮಸ್ಥರು ಶಾಸಕರನ್ನು ಪ್ರಶ್ನಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು 2018 ರಲ್ಲಿ ವನ್ಯಜೀವಿ ಅರಣ್ಯ ಇಲಾಖೆಗೆ ಕಡತ‌ ವಿಲೇಗೆ ಮನವಿ ಮಾಡಿದ್ದು ಎಫ್ ಸಿ ಕಾಯಿದೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು, 2023 ರಲ್ಲಿ ಎಳನೀರು ಮತ್ತು ಶಿರ್ಲಾಲು ಆಗಿದೆ. ಆ ಸಂದರ್ಭ ಸುಲ್ಕೇರಿಮೊಗ್ರು ಪ್ರಸ್ತಾವನೆ ಬಿಟ್ಟು ಹೋದ ಕಾರಣ ಆಗಲಿಲ್ಲ ಬಳಿಕ ಸಂಸದರ ಬ್ರಿಜೇಶ್ ಚೌಟರ ಅವಧಿಯಲ್ಲಿ ಮತ್ತೆ ಅಪ್ಲೋಡ್ ಮಾಡಲು ಮಾಡಿ ಕ್ಲಿಯರೆನ್ಸ್ ಮಾಡಿ ಈಗಾಗಲೇ ಟೆಂಡರ್ ನಡೆದು 16 ಮನೆಗಳಿಗೆ ವಿದ್ಯುತ್ ಸಂಪರ್ಕವಾಗಿದೆ. ಇದನ್ನು ಮುಂಬರುವ ದಿನಗಳಲ್ಲಿ ಉದ್ಘಾಟನೆ ಮಾಡಲಾಗುವುದು 20 ದಿನದ ಒಳಗೆ ಇನ್ನೂ ಉಳಿದ ಎಲ್ಲಾ ಮನೆಗಳಿಗೆ ವ್ಯವಸ್ಥೆ ಮಾಡಿಕೊಡಲಾಗವುದು ಬ್ಯಾನರ್ ಹಾಕುವ ಬಗ್ಗೆ ಯಾರೂ ತಲೆಕೆಡಿಸಬೇಡಿ, ನಾವು ಪ್ರಾಮಾಣಿಕವಾಗಿ ನಡೆಸಿ ಕೆಲಸದ ಬಗ್ಗೆ ನಮಗೆ ತಿಳಿದಿದೆ ಎಂದು ಶಾಸಕರು ಸ್ಪಷ್ಟನೆ ನೀಡಿದರು. ವಿದ್ಯುತ್ ಸಂಪರ್ಕ ಒದಗಿಸಿದ ಶಾಸಕರಿಗೆ ಆ ಭಾಗದ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಸುಲ್ಕೇರಿಮೋಗ್ರು ಮುಂಗಾಜೆ ಪ್ರದೇಶದ 8 ಕುಟುಂಬಗಳಿಗೆ ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಜೆಜೆಎಂ ಕಾಮಗಾರಿ ಗುತ್ತಿಗೆದಾರರಿಗೆ ನೂತನ ಪೈಪ್ ಲೈನ್ ಹಾಕಲು ಸೂಚನೆ ನೀಡಿ 10 ದಿನದೊಳಗೆ ಸಮಸ್ಯೆ ಪರಿಹಾರ ಒದಗಿಸಬೇಕು ಎಂದು ಶಾಸಕರು ಅಧಿಕಾರಿಗಳು ತಿಳಿಸಿದರು.

ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕರು ಹೇಳಿದಾಗ ಗ್ರಾಮಸ್ಥರೋವರು ನೀವು ಸರ್ಕಾರದ ಮೇಲೆ ಅಪದಾನೆ ಮಾಡಬೇಡಿ ಎಂದಾಗ ಶಾಸಕರು ಪ್ರತಿಕ್ರಿಯಿಸಿ ಸರ್ಕಾರ 10 ಕೋಟಿ ರೂಪಾಯಿ ಅನುದಾನ ಎರಡು ವರ್ಷದಲ್ಲಿ ನೀಡಿದೆ ಆದರೆ ಕಳೆದ ಅವಧಿಯಲ್ಲಿ 3500 ಕೋಟಿ ರೂಪಾಯಿ ಅನುದಾನ ತಂದು ಅಭಿವೃದ್ಧಿ ನಡೆಸಲಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಪಥಕ್ಕೆ ಅಡ್ಡಿಯಾಗಿದೆ. ಇಲಾಖೆಯ ಮೀಸಲು ಅನುದಾನಗಳು ಗ್ಯಾರಂಟಿ ಯೋಜನೆಗೆ ನೀಡಿರುವುದಾಗಿ ಸಚಿವರುಗಳು ತಿಳಿಸುತ್ತಾರೆ ಎಂದು ಶಾಸಕರು ತಿಳಿಸಿದರು.

ಸರ್ವೇ ನಂಬರ್ 54/ಪಿ1 ರಲ್ಲಿ ಹಕ್ಕು ಪಾತ್ರವಾಗಿದೆ ಆದರೆ ಪಹಣಿ ಇದುವರೆಗೆ ಆಗಿಲ್ಲ. ನಡಾಯಿ ಎಂಬಲ್ಲಿ ಸೇತುವೆ ಬಿರುಕು ಬಿಟ್ಟಿದೆ. ಬೈಲ ಎಂಬಲ್ಲಿ ಒಂದು ಕುಟುಂಬಕ್ಕೆ 94 ಸಿ ಆಗಿದೆ. ಅಲ್ಲಿಯ ಮುಂದೆವಿರುವ ಪ್ರದೇಶದ ಮನೆಗಳಿಗೆ ಅವರು ರಸ್ತೆಗೆ ದಾರಿ ಬೀಡುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ತಹಶೀಲ್ದಾರ್ ಪಂಚಾಯತ್ ಪೊಲೀಸ್ ಭದ್ರತೆಯೊಂದಿಗೆ ರಸ್ತೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಸುಲ್ಕೇರಿಮೋಗ್ರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ. ಹಿಂದೂ ರುದ್ರ ಭೂಮಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದಾಗ ಶಾಸಕ ನಿಧಿಯಿಂದ ಅನುದಾನ ಒದಗಿಸುತ್ತೇನೆ, ಬೇಕಾದ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ, ನೀವು ಸಮಿತಿ ರಚನೆ ನಡೆಸಬೇಕು ಎಂದು ಶಾಸಕರು ತಿಳಿಸಿದರು.

ಕುತ್ಲೂರು ಸಬ್ ಸ್ಟೇಷನ್ ನಿರ್ಮಾಣದ ಕುರಿತು ಜಾಗ ಗುರುತಿಸಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ. ಕಕ್ಕಿಂಜೆಯಲ್ಲಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಯೋನೋಪಾಯೋದೊಂದಿಗೆ ಮಾತುಕತೆ ನಡೆಸಿ ನಿರ್ಮಾಣಕ್ಕೆ ಉಚಿತವಾಗಿ ಜಾಗ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.

ಅಳದಂಗಡಿ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು ಅವರು ಎರಡು ಶಾಲೆ‌ ನೀಡುವುದಾಗಿ ತಿಳಿಸಿದ್ದಾರೆ ಒಂದು ಶಾಲೆಯನ್ನು‌ ಅಳದಂಗಡಿ ನೀಡುವುದಾಗಿ ಶಾಸಕರು ಹೇಳಿದರು. ಅಳದಂಗಡಿ ಪ್ರೌಢಶಾಲೆಯಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗುತ್ತದೆ, 64/1ರಲ್ಲಿ ಅನೇಕ ಕುಟುಂಬಗಳಿಗೆ ಪಹಣಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಐಬಿಯಲ್ಲಿ ವನ್ಯಜೀವಿ ಅರಣ್ಯ, ತಹಶೀಲ್ದಾರ್, ಫಲಾನುಭವಿಗಳೊಂದಿಗೆ ಸಭೆ ನಡೆಸುವುದಾಗಿ ಶಾಸಕರು ತಿಳಿಸಿದರು.

ಅಳದಂಗಡಿ ರಿಕ್ಷಾ ಪಾರ್ಕ್ ನಲ್ಲಿ ಶಿರ್ಲಾಲು ನವರು ತಂದು ನಿಲ್ಲಿಸುತ್ತಾರೆ ಎಂದು ಅಳದಂಗಡಿ ಆಟೋ ಚಾಲಕರು ತಿಳಿಸಿದ ಅವರು ಪಾರ್ಕಿಂಗ್ ವ್ಯವಸ್ಥೆಗೆ ಜಾಗ ಕಲ್ಪಿಸಿ ಕೋಡಬೇಕು ಎಂದು ಆಟೋ ಚಾಲಕರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು. ಈ ಸಮಸ್ಯೆ ಪರಿಹಾರ ಕಾಣಿಸಲು ಅಳದಂಗಡಿ ಮತ್ತು ಶಿರ್ಲಾಲು ಆಟೋ ಚಾಲಕರ ಪ್ರತಿನಿಧಿಗಳು , ಪಂಚಾಯತ್ ಸದಸ್ಯರು
,ಆರ್ ಟಿ ಓ, ಪಿಡಿಒ ರೊಂದಿಗೆ ಜನವರಿಯಲ್ಲಿ ಸಭೆ ನಡೆಸುವುದಾಗಿ ಶಾಸಕರು ತಿಳಿಸಿದರು.

ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ತಾಲೂಕು ಪಂಚಾಯತ್ ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಶಾಲಿನಿ, ಶಿರ್ಲಾಲು ಸಿಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಸುವರ್ಣ, ಸದಸ್ಯರು, ಇಲಾಖಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮಾಜಿ ಶಾಸಕ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ವಿ.ಹಿಂ.ಪ. ಬಜರಂಗದಳ ಪ್ರಖಂಡರಿಂದ ಸಂತಾಪ

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ

Suddi Udaya

ನಿಡ್ಲೆ: ಗೋವಾ ಕೊಂಕಣ್ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯಗೌಡ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ನಂತರ ಮುಂದೇನು ವಿಶೇಷ ಕಾರ್ಯಾಗಾರ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!