ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಪದಗ್ರಹಣ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ೨೦೨೬ನೇ ಸಾಲಿನ ಪದಗ್ರಹಣ ಸಮಾರಂಭ ಡಿ.೨೩ ರಂದು ಕೊಕ್ಕಡದಲ್ಲಿ ಜರಗಿತು. ಸಂತ ಜೋನರ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ. ಶಮಂತ್ ವೈ.ಕೆ. ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಶೋಭಾ ಪಿ. ೨೦೨೫ನೇ ಸಾಲಿನ ವರದಿಯನ್ನು ಮಂಡಿಸಿದರು.

ನೂತನ ಅಧ್ಯಕ್ಷರಾಗಿ ರಿತೇಶ್ ಎಂ. ಸ್ಟೆçಲ್ಲಾ ಅವರು ಅಧಿಕಾರ ಸ್ವೀಕರಿಸಿದರು. ಧನುಷ್ ಕುಮಾರ್ ಜೈನ್ ಅವರು ಜೆಸಿ ವಾಣಿ ವಾಚಿಸಿದರು. ಪ್ರಜ್ವಲ್ ಲೋಬೊ, ಅಕ್ಷತ್ ರೈ, ರೇಷ್ಮಾ ಡಿ ಅಲ್ಮೇಡಾ ಅವರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವಲಯದ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಅತಿಥಿಗಳಾಗಿ ಬಿ ಪ್ರಾಂತ್ಯದ ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ ಮಾರ್ಗದರ್ಶನ ನೀಡಿದರು. ನಿಕಟಪೂರ್ವಾಧ್ಯಕ್ಷ ಸಂತೋಷ್ ಜೈನ್, ಕಾರ್ಯದರ್ಶಿ ಚಂದನಾ ಪಿ., ಯುವ ಜೆಸಿ ಅಧ್ಯಕ್ಷ ಶ್ರವಣ್, ಜೆಸಿಲೆಟ್ ದಕ್ಷಾ ಉಪಸ್ಥಿತರಿದ್ದರು.
೨೦೨೬ನೇ ಸಾಲಿನಲ್ಲಿ ಪದಾಧಿಕಾರಿಗಳಾಗಿ ರೇಶ್ಮಿ ಡಿಸೋಜ, ಆದ್ಯಾ ಜೈನ್, ವಿಯೋನ್ ಸುವಾರಿಸ್, ಜೋಯ್ ಬೊತೆಲ್ಲೊ, ದೀಪಿಕಾ, ವಿಕ್ಟರ್ ಸುವಾರಿಸ್, ಜಸ್ವಂತ್ ಪಿರೇರಾ, ದೀಪಾ ವಿ., ಯೋಗಿಶ್ ಎಸ್., ಪ್ರಿಯಾ ಜೆ. ಅಮೀನ್ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಶ್ರೀಧರ ರಾವ್, ಮಾರ್ಗದರ್ಶಿ ಸಮಿತಿಯ ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ಜ್ಯೋತಿ ಹೆಬ್ಬಾರ್, ಜೆನೆವಿವ್ ಫೆರ್ನಾಂಡಿಸ್ ಸಹಕರಿಸಿದರು.

ನೂತನ ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ವಂದಿಸಿದರು. ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಮುರಳೀಧರ, ನಿತ್ಯಾನಂದ ರೈ, ಶಶಿಧರ ನೆಕ್ಕಿಲಾಡಿ, ದತ್ತಾತ್ರೇಯ ಹೆಬ್ಬಾರ್, ಡಾ. ಸುಧಾಕರ್ ಶೆಟ್ಟಿ, ಲವೀನಾ ಪಿಂಟೋ, ಮನೋರಮಾ ಟಿ., ರಫಾಯೆಲ್ ಸ್ಟೆçಲ್ಲಾ, ಡೈಸಿ ಗಲ್ಬಾವೊ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Related posts

ಬಂಗಾಡಿ ಶ್ರೀ ಹಾಡಿ ದೈವ ದೈವಸ್ಥಾನ:ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಿ.ಎಸ್ ಮುಕುಂದ ಸುವರ್ಣ

Suddi Udaya

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಪುನರಾಯ್ಕೆ

Suddi Udaya

ಸುಲ್ಕೇರಿ ಶ್ರೀ ರಾಮ ಶಾಲೆಗೆ ಶೇ. 100 ಫಲಿತಾಂಶ: ವಿದ್ಯಾರ್ಥಿ ತ್ರಿಷಾ ರಾಜ್ಯಕ್ಕೆ 10 ನೇ ರ್‍ಯಾಂಕ್

Suddi Udaya

ಒಲಂಪಿಯಾಡ್ ಪರೀಕ್ಷೆ ಪ್ರಥಮ ರ‍್ಯಾಂಕ್ ಬಂದ ವಿದ್ಯಾರ್ಥಿಗೆ ಸ್ಕಾಲರ್ಶಿಪ್

Suddi Udaya

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

Suddi Udaya
error: Content is protected !!