September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದಿಂದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಯವರಿಗೆ ಸನ್ಮಾನ

ಬೆಳ್ತಂಗಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ 1971ರ ಇಂಡೋ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧ ಸಿ ಜಾರ್ಜ್ ಕುಟ್ಟಿ ಅವರನ್ನು ಧರ್ಮಸ್ಥಳ ಗ್ರಾಮದ ಅವರ ಮನೆಗೆ ತೆರಳಿ ಸನ್ಮಾಸಲಾಯಿತು.

ಧರ್ಮಸ್ಥಳ ಸೈಂಟ್ ಜೊಸೆಫ್ ಚರ್ಚ್‌ನ ಧರ್ಮ ಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಮಾತನಾಡಿ ದೇಶ ಕಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟವರು ಸೈನಿಕರು ಅವರನ್ನು ಗೌರವಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಭಾರತದ ಪರ ಯುದ್ದದಲ್ಲಿ ಭಾಗವಹಿಸಿ ದೇಶದ ಗೆಲುವಿಗೆ ಶ್ರಮಿಸಿದವರನ್ನು ಇಂದು ಗೌರವಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು ಮಾತನಾಡಿ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು ಮಾಜಿ ಸೈನಿಕರನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ ಹಾಗೂ ಮಾಜಿ ಸೈನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದರು ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಅವರಿಗೆ ಭಗವಹಿಸಲು ಸಾಧ್ಯವಾಗದ ಕಾರಣ ಇಂದು ಅವರ ಮನೆಗೆ ಬಂದು ಸನ್ಮಾನಿಸುವ ಕಾರ್ಯ ಮಾಡಿದ್ದೇವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಅವರು 1964 ರಲ್ಲಿ ಸೇನೆಗೆ ಸೇರ್ಪಡೆಯಾಗಿ ೨೨ವರ್ಷಗಳ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿ ಇಂಡೋ ಪಾಕ್ ಯುದ್ದದ ದಿನಗಳನ್ನು ನೆನೆದುಕೊಂಡರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಎನ್.ಪಿ ತಂಗಚ್ಚನ್, ತಾಲೂಕು ಕಾರ್ಯದರ್ಶಿ ಸುರೇಶ್ ಗೌಡ, ಜಿಲ್ಲಾ ಕೋಶಾಧಿಕಾರಿ ಚಂದಪ್ಪ ಡಿ.ಎಸ್. ಜಿಲ್ಲಾ ಸಲಹೆಗಾರ ಹರೀಶ್ ರೈ, ತಾಲೂಕು ಉಪಾಧ್ಯಕ್ಷ ರವಿಪ್ರಸಾದ್, ತಾಲೂಕು ಸಮಿತಿಯ ಗೌರವಾಧ್ಯಕ್ಷ ಎ.ಜೆ ಮಾಣಿ, ಗೌರವ ಸಲಹೆಗಾರ ಜೋಸೆಫ್ ಎನ್.ಕೆ, ಸಿ ಜಾರ್ಜ್ ಕುಟ್ಟಿ ಅವರ ಪುತ್ರ ನಿವೃತ್ತ ಸೈನಿಕ ರಾಜೇಶ್, ನಿವೃತ್ತ ಸೈನಿಕರ ಕುಟುಂಬಸ್ಥರು ಹಾಗೂ ಇತರರು ಇದ್ದರು.

Related posts

ಕೇಂದ್ರ ಬಜೆಟ್ 2026-2027:ಜಾಗತಿಕ ಸವಾಲಿನ ನಡುವೆಯೂ ಜನರ ಆಶೋತ್ತರ ಪ್ರತಿಬಿಂಬಿತವಾದ ಬಜೆಟ್: ಹರೀಶ್ ಪೂಂಜ

Suddi Udaya

ಡಿ.28-ಜ.2: ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ಉಜಿರೆಯಲ್ಲಿ ಕಮ್ಯೂನಿಟಿ ಸೆಂಟರ್ ಉದ್ಘಾಟನೆ

Suddi Udaya

ಹಿರಿಯ ಸಾಹಿತಿ, ಪತ್ರಕರ್ತ ಉಜಿರೆ ಶ್ರೀಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ನಾ ವುಜಿರೆ ನಿಧನ

Suddi Udaya

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಅಡ್ಡರ್ ಎ.ಎಸ್.ಐ ಆಗಿ ಪದೋನ್ನತಿ

Suddi Udaya
error: Content is protected !!