22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ ಸ.ಉ.ಹಿ.ಪ್ರಾ. ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಶಿಶಿಲ: ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾಭಿಮಾನಿಗಳು ಕಟ್ಟಿಸಿದ ಸರಕಾರಿ ಶಾಲೆಯ ಉದ್ಘಾಟನಾ ಸಮಾರಂಭವು ಡಿ.29 ರಂದು ನಡೆಯಿತು.

ಕೇಂದ್ರ ಅತೀ ಸಣ್ಣ ಮಧ್ಯಮ ಕೈಗಾರಿಕಾ ಮತ್ತು ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರವರು ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಸರಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಮಾತೃ ಭಾಷೆಗಳಿಗೆ ಒತ್ತನ್ನು ನೀಡಬೇಕು. ಕಷ್ಟಗಳನ್ನು ಎದುರಿಸುವ ಶಕ್ತಿ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂಸದರು ಕ್ಯಾ| ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಚೆಮ್ ಟ್ರೆಂಡ್ ಉಪಾಧ್ಯಕ್ಷ ರಾಜೇಶ್ ಫಡ್ಕೆ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ರೋಟರಿ ಕ್ಲಬ್ ನ ಮಾಜಿ ಕಾರ್ಯದರ್ಶಿ ಸಂದೇಶ್ ರಾವ್, ನಿವೃತ್ತ ಸೈನಿಕ ಪ್ರಸನ್ನ, ಮನೋಹರ್ ಎಂ ಗೋಖಲೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋಹನ್ ಗೌಡ, ಕರುಣಾಕರ ವಾಸ್ತು ಶಿಲ್ಪಿ, ಮುಖ್ಯ ಶಿಕ್ಷಕಿ ಸರಸ್ವತಿ, ಪಂ. ಸದಸ್ಯೆಯರಾದ ಕಮಲಾಕ್ಷಿ, ಲಲಿತ ಭಾಗವಹಿಸಿದರು.

ರೋಟರಿ ಕ್ಲಬ್ ಬೆಳ್ತಂಗಡಿ ಇವರ ಸಹಕಾರದಲ್ಲಿ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶೌಚಾಲಯ ಕೊಠಡಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಚೆಮ್ ಟ್ರೆಂಡ್ ನ ಉಪಾಧ್ಯಕ್ಷ ರಾಜೇಶ್ ಫಡ್ಕೆ, ಶಾಲಾ ಮುಖ್ಯ ಶಿಕ್ಷಕಿ ರತ್ನ, ವಾಸ್ತು ಶಿಲ್ಪಿ ಕರುಣಾಕರ ಗೌಡ ರವರುಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮನೋಹರ್ ಎಂ ಗೋಖಲೆ ರವರ ನೇತೃತ್ವದ ನೆನಪಿನ ಸಂಚಿಗೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರವರು ಬಿಡುಗಡೆಗೊಳಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ. ಸ್ವಾಗತಿಸಿದರು. ಕರುಣಾಕರ ಅಡ್ಡಹಳ್ಳ ಪ್ರಸ್ತಾವಿಸಿದರು. ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಸಂದೀಪ್ ಅಮ್ಮುಡ೦ಗೆ ವಂದಿಸಿದರು. ರಮೇಶ್ ಭೈರಕಟ್ಟ ನಿರೂಪಿಸಿದರು.

ಸಾಂಸ್ಕೃತಿಕ ವೈಭವ: ಸಂಜೆ ೬.೦೦ ರಿಂದ ಸಾಂಸ್ಕೃತಿಕ ವೈಭವವು ನಡೆಯಲಿದ್ದು ಇದರ ಸಭಾ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕರು ಮೋಹನ್ ಕುಮಾರ್, ಮೆಂಬರ್ ಗ್ಲೋಬಲ್ ಎಕ್ಸಿಕ್ಯೂಟಿವ್ ಕಮಿಟಿ ಸಿ.ಇ.ಒ.(ಇಂಡಿಯಾ) ರಾಜೇಶ್ ಫಡ್ಕೆ, ಶಶಿಧರ್ ಶೆಟ್ಟಿ ಬರೋಡ ಉದ್ಯಮಿಗಳು ಬೆಂಗಳೂರು, ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಡಿ ಪುಷ್ಪಗಿರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಂ ಹಾಗೂ ಇತರರು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ ೯:೩೦ ರಿಂದ ಚೈತನ್ಯ ಕಲಾವಿದರು ಬೈಲೂರು ವತಿಯಿಂದ ರಾಘು ಮಾಸ್ಟುç ಹಾಸ್ಯಮಯ ತುಳುನಾಟಕ ನಡೆಯಲಿದೆ. ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Related posts

ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರ ಕಡಿದು ದಾಸ್ತಾನು: ಅರಣ್ಯ ಸಂಚಾರಿ ದಳದಿಂದ ದಾಳಿ

Suddi Udaya

ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಾಸಿಕ ಸಭೆ

Suddi Udaya

ಶಿರ್ಲಾಲು ಶಾಲಾ ಹಳೆವಿದ್ಯಾರ್ಥಿ ಸಂಘದಿಂದ ಆರ್ಥಿಕ ನೆರವು

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

Suddi Udaya

ಮೇ 20,21: ಸಿಇಟಿ ಪರೀಕ್ಷೆ

Suddi Udaya

ಜೆಸಿಐ ಬೆಳ್ತಂಗಡಿ ವತಿಯಿಂದ ಸೇವಾಶ್ರಮಕ್ಕೆ ತಿಂಗಳ ದಿನಸಿ ಸಾಮಾಗ್ರಿ ಹಸ್ತಾಂತರ

Suddi Udaya
error: Content is protected !!