September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಾಟ್‌ಮಿಕ್ಸ್ ಘಟಕದ ವಿರುದ್ಧ ಪಿಐಎಲ್ ಸಲ್ಲಿಕೆ : ಹೈಕೋರ್ಟ್ ನಿಂದ ನೋಟಿಸ್ ಆದೇಶ

ಬೆಳ್ತಂಗಡಿ : ಪರಿಸರ ಮಾಲಿನ್ಯದಿಂದ ಸಮಸ್ಯೆಯಾಗಿದೆ ಎಂದು ಆರೋಪಿಸಿ, ಸಲ್ಲಿಕೆಯಾಗಿರುವ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟು ನಡ ಮಲೆಯಡ್ಕ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಗ್ರೋಡಿ ಹಾಟ್‌ಮಿಕ್ಸ್ ಘಟಕ, ಸರಕಾರದ ಮುಖ್ಯ ಕಾರ್ಯದರ್ಶಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಡ ಗ್ರಾ.ಪಂ ಪಿಡಿಒ ಅವರಿಗೆ ನೋಟೀಸು ಜಾರಿ ಮಾಡಿದೆ.


2008 ರಿಂದ ಉಜಿರೆ- ಪಡ್ವೆಟ್ಟು-ಸುರ್ಯ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಿಕ್ಸಿಂಗ್ ಘಟಕದಿಂದ ಪರಿಸರ ಮಾಲಿನ್ಯ ಉಂಟಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಮರಾಟಿ ನಾಯ್ಕ ಸಮುದಾಯದ ಪ್ರಮುಖರಾದ ತಿಮ್ಮಯ್ಯ ನಾಯ್ಕ ಮಲೆಯಡ್ಕ, ನಾರಾಯಣ ನಾಯ್ಕ ಮಲೆಯಡ್ಕ, ದಯಾನಂದ ನಾಯ್ಕ ಇಚ್ಚಾವು, ಮುನೀಶ್ ಇಚ್ಚಾವು ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು. ಅಡ್ವೊಕೇಟ್ ಸೋಮಶೇಖರ್ ರಾಜವಂಶಿ ಅರ್ಜಿದಾರರ ಪರವಾಗಿ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯ ಇದೀಗ ವಿಚಾರಣೆಗಾಗಿ ಮುಗ್ರೋಡಿ ಹಾಟ್‌ಮಿಕ್ಸ್ ಘಟಕ, ಸರಕಾರದ ಮುಖ್ಯ ಕಾರ್ಯದರ್ಶಿ, ತಹಶೀಲ್ದಾರ್, ಜಿಲ್ಲಾಧಿಕಾರಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಡ ಗ್ರಾ.ಪಂ ಪಿಡಿಒ ಅವರಿಗೆ ನೋಟೀಸು ಜಾರಿ ಮಾಡಿದೆ ಎಂದು ವರದಿಯಾಗಿದೆ.

Related posts

ಚಾರ್ಮಾಡಿ ಘಾಟಿ: ಮರ ಧಾರಾಶಾಹಿ-ಸಂಚಾರ ಸ್ಥಗಿತ

Suddi Udaya

ಮಡಂತ್ಯಾರು ಮಿತ್ರಾ ವ್ಹೀಲ್ ಮಾಸ್ಟರ್ ಶುಭಾರಂಭ

Suddi Udaya

ಉಜಿರೆ : ಸಹಕಾರ ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ನಿಧನ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನೇತೃತ್ವದಲ್ಲಿ ನೆರಿಯ ಸಂತ ಥೋಮಸ್ ಅ.ಪ್ರೌ. ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಹುಣ್ಸೆಕಟ್ಟೆ ಶಾಲೆಯ ಶೌಚಾಲಯ ಸ್ವಚ್ಛತೆ

Suddi Udaya

ನವ ವರ್ಷ-ನವ ವಿಧ ಪರಿಕಲ್ಪನೆಯಡಿ ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ: ಸಂಸದ ಕ್ಯಾ. ಬ್ರಿಜೇಶ್ ಚೌಟ

Suddi Udaya
error: Content is protected !!