September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ಶಾಲೆಯ ಶತಮಾನೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

ನಡ: 100ರ ವರ್ಷಾಚರಣೆ ಸಂಭ್ರಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇದರ ಶತಮಾನೋತ್ಸವ ಸಮಿತಿ ರಚನೆಗೊಂಡಿದೆ.

ಈ ಶಾಲೆಯನ್ನು 1925ನೇ ಇಸವಿಯಲ್ಲಿ ನಡ ಪೆರ್ಮಾಣು ಬಸದಿಯಲ್ಲಿ ನಡ ಗುತ್ತು ಚಂದಯ್ಯ ಅಜ್ರಿಯವರು ಆರಂಭಿಸಿದ್ದರು.. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿ ಮುನಿರಾಜ ಅಜ್ರಿ, ಕಾರ್ಯಾಧ್ಯಕ್ಷರಾಗಿ ಶಶಿಕಿರಣ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿಯಾಗಿ ಸಯ್ಯದ್ ಹಬೀಬ್ ಸಾಹೇಬ್ ಆಯ್ಕೆಯಾಗಿದ್ದಾರೆ.

ಸಮಿತಿಯ ಗೌರವಧ್ಯಕ್ಷರುಗಳಾಗಿ ಶಾಸಕ ಹರೀಶ್ ಪೂಂಜ, ಮೆಸ್ಕಾಂ ನಿಗಮ ಅಧ್ಯಕ್ಷ ಕೆ. ಹರೀಶ್ ಕುಮಾರ್, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜ್ರಿ ನಡಗುತ್ತು, ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಇವರು ಮಾರ್ಗದರ್ಶನ ನೀಡಲಿದ್ದಾರೆ. ಪ್ರಧಾನ ಸಂಚಾಲಕರಾಗಿ ಡಾ. ಸತೀಶ್ಚಂದ್ರ ಸೂರ್ಯಗುತ್ತು, ಉಪಾಧ್ಯಕ್ಷರುಗಳಾಗಿ ಅಜಿತ್ ಕುಮಾರ್ ಆರಿಗ, ಜಯ ಶೆಟ್ಟಿ, ಶ್ಯಾಮಸುಂದರ್, ಅಪ್ಪು, ಸ್ಟೇನಿ ಪಿಂಟೋ, ಶ್ರೀಮತಿ ಗ್ರೇಸಿ ವೇಗಸ್ ಹರೀಶ್ಚಂದ್ರ ಗೌಡ, ವಸಂತ್ ಗೌಡ, ಸಲಹೆಗಾರರಾಗಿ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಮಾಜಿ ಜಿ.ಪಂ. ಸದಸ್ಯ ಬಿ. ರಾಜಶೇಖರ ಅಜ್ರಿ, ಹಳೆ ವಿದ್ಯಾರ್ಥಿ ಸಂಫದ ಅಧ್ಯಕ್ಷ ಧರಣೇಂದ್ರ ಕುಮಾರ್, ಎಸ್. ಡಿ. ಎಂ. ಸಿ. ಅಧ್ಯಕ್ಷ ಜನಾರ್ಧನ್ ನಾಯ್ಕ್, ಡಾ. ಪ್ರದೀಪ್ ನಾವೂರು ಲಯನ್ ಮುರಳಿ ಬಲಿಪ, ಕಾರ್ಯದರ್ಶಿಗಳಾಗಿ ವಸಂತ್ ಗೌಡ ವಿಜಿ ಕೂಲ್, ಜಾಕಿರ್ ಹುಸೇನ್, ಶ್ರೀಮತಿ ಸಂಧ್ಯಾ ಜೈನ್, ಸಂಘಟನಾ ಕಾರ್ಯದರ್ಶಿಗಳಾಗಿ ವಿಜಯ ಗೌಡ, ಜಯಂತ ಗೌಡ ಕೊಯಗುಡ್ಡೆ, ಜತೆ ಕೋಶಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ, ಜತೆ ಕಾರ್ಯದರ್ಶಿಗಳಾಗಿ ವಿಕ್ಟರ್ ಮಾಡ್ತಾ, ಶ್ರೀಮತಿ ಸುಜಾತಾ ಎಸ್., ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಸುಮಾರು 60 ವಿದ್ಯಾಭಿಮಾನಿಗಳನ್ನು ಆಯ್ಕೆ ಮಾಡಲಾಯಿತು.

ಶತಮಾನೋತ್ಸವ ಸಮಿತಿ ವತಿಯಿಂದ ಶಾಲೆಗೆ ಸುಸಜ್ಜಿತ ರಂಗ ಮಂದಿರ, ಇಂಟರ್ ಲಾಕ್, ಆವರಣ ಗೋಡೆ, ದ್ವಾರ ಇತ್ಯಾದಿ ಶಾಶ್ವತ ಕಾಮಗಾರಿಗಳನ್ನು ಮಾಡುವುದೆಂದು ನಿರ್ಧರಿಸಲಾಗಿದೆ.

Related posts

ಬಳಂಜ ಶ್ರೀ ಪಂಚಲಿಂಗೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ: ರುದ್ರಯಾಗ

Suddi Udaya

ರಸ್ತೆ ಬದಿ ವಾಹನ ನಿಲ್ಲಿಸುವರಿಗೆ ಎಚ್ಚರಿಕೆ, ಬ್ಯಾಟರಿ ಕಳ್ಳರಿದ್ದಾರೆ: ಸುಲ್ಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ವಾಹನಗಳ ಬ್ಯಾಟರಿ ಕಳವು; ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಧರ್ಮಸ್ಥಳ: ಅಶೋಕನಗರ ನಿವಾಸಿ ನಾಟಿ ವೈದ್ಯೆ, ಶತಾಯುಷಿ ಶ್ರೀಮತಿ ನೊಕ್ಕೆ ನಿಧನ

Suddi Udaya

ಬಳಂಜ:ಆಮ್ಮಿ ಪೂಜಾರಿ ನಿಧನ

Suddi Udaya

ಜೂ.22: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಜನರಲ್ ಸರ್ಜರಿ ತಪಾಸಣಾ ಶಿಬಿರ

Suddi Udaya

ಬಂದಾರು : ಮೈರೋಳ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ

Suddi Udaya
error: Content is protected !!