September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ನಿಡ್ಲೆ: ಅಗ್ರಿಲೀಫ್ ಕುಟುಂಬದ ವತಿಯಿಂದ ರೈತರ ಜೊತೆ ವಿಶ್ವದ ಕಡೆ ರೈತ-ಸಂಸ್ಥೆ ಸಮನ್ವಯ ಸಭೆ

ನಿಡ್ಲೆ: ಅಗ್ರಿಲೀಫ್ ಕುಟುಂಬದ ವತಿಯಿಂದ ರೈತರ ಜೊತೆ ವಿಶ್ವದ ಕಡೆ 2026 ರೈತ-ಸಂಸ್ಥೆ ಸಮನ್ವಯ ಸಭೆಯು ನಿಡ್ಲೆ ಹೋಟೆಲ್ ಆದಿತ್ಯ ವ್ಯೂನ ಪಂಚವಟಿ ಹಾಲ್‌ನಲ್ಲಿ ಜ.3ರಂದು ನಡೆಯಿತು.

ಗೌರವಾನ್ವಿತ ಅತಿಥಿಯಾಗಿ ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀಪಡ್ರೆ ಆಗಮಿಸಿದ್ದರು

ಬೆಳ್ತಂಗಡಿ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆಎನ್ ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಗೌರವ ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಮತ್ತು ಸದಸ್ಯರು, ಹಾಲು ಉತ್ಪಾದಕರ ಸಹಕಾರಿ ಸಂಘದ ಪ್ರತಿನಿಧಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರತಿನಿಧಿಗಳು, ಹಾಳೆ ಸಂಗ್ರಾಹಕರು, ಗ್ರಾಮಸ್ಥರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಾಳೆ ಸಂಗ್ರಾಹಕರಾದ ಲೋಕಯ್ಯ ಗೌಡ ಕಂಗಿತ್ತಿಲು ಕೊಯ್ಯೂರು, ಪ್ರೇಮ ಕರಾಯ, ನಂದಿನಿ ದೇವರಮಾರು, ಬಾಬು ಸುಲ್ಯೊಡಿ, ನಿರಂಜನ್ ಗೌಡ ನಡುಮಜಲು ಬಂದಾರುರವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಸ್ಥಾಪಕರಾದ ಅವಿನಾಶ್ ರಾವ್ ಪ್ರಾಸ್ತಾವಿಕದೊಂದಿಗೆ, ಸ್ವಾಗತಿಸಿದರು. ಸಂಸ್ಥೆಯ ಸಿ ಎಸ್ಒ ಪೃಥ್ವಿ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಹ ಸ್ಥಾಪಕ ಅತಿಶಯ ಜೈನ್ ಧನ್ಯವಾದವಿತ್ತರು.

Related posts

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಅಳದಂಗಡಿ ಸರಕಾರಿ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ

Suddi Udaya

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ

Suddi Udaya

ಪಡ್ಡಂದಡ್ಕ ಮುನವಿರುಲ್ ಇಸ್ಲಾಂ ಮದರಸ ಪ್ರಾರಂಭೋತ್ಸವ

Suddi Udaya

ಜಾನಪದ ಗೀತೆ ಸ್ಪರ್ಧೆ : ಧರ್ಮಸ್ಥಳದ ಸಾನ್ವಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಪರಪ್ಪು: ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ಉರೂಸ್ ಮುಬಾರಕ್

Suddi Udaya
error: Content is protected !!