37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

ಬೆಳ್ತಂಗಡಿ: ಬಡಗಕಾರಂದೂರು( ಅಳದಂಗಡಿ) ಗ್ರಾಮದ ಫಲ್ಗುಣಿ ನದಿಯ ಬಾವಲಿಗುಂಡಿ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನಿಂದ ಪಶ್ಚಿಮದ ಕಡೆಗಿನ ಸೂಳಬೆಟ್ಟು ವಾಳ್ಯದವರ ಕೃಷಿ ನೀರಾವರಿಗೆ ಅನುಕೂಲವಾಗಲೆಂದು ಕಾಲುವೆ ನಿರ್ಮಾಣಕ್ಕೆ ರಾಜ್ಯದ ಸಣ್ಣ ನೀರಾವರಿ ಇಲಾಖೆಯಿಂದ ರೂ. 3 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಲುವೆ ನಿರ್ಮಾಣ ಕಾರ್ಯದ ಪೂರ್ವಭಾವಿಯಾಗಿ ಜ.6 ರಂದು ಬಾವಲಿಗುಂಡಿ ಪರಿಸರದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಅನುದಾನ ಬಿಡುಗಡೆಗೊಳಿಸಲು ಶ್ರಮಿಸಿದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಅವರು ಹಾಲು ಎರೆದು ಕಾಮಗಾರಿಗೆ ಚಾಲನೆ ನೀಡಿದರು.
ಅಳದಂಗಡಿ ಗ್ರಾ.ಪಂ.ಸದಸ್ಯ ಪ್ರವೀಣ, ಬಳಂಜ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಡೋಂಗ್ರೆ, ಸ್ಥಳೀಯರಾದ ಮುರಲೀಧರ ಗೋಖಲೆ, ಪ್ರಭಾಕರ ಆಠವಳೆ, ನಿರಂಜನ ಜೋಶಿ, ರಾಜೇಂದ್ರ ಗೋಖಲೆ, ಅಮರೇಶ ಜೋಶಿ, ಪ್ರಶಾಂತ ನಾತು, ಲೋಲಾಕ್ಷ ಶೆಟ್ಟಿ ಪಡ್ಯೋಡಿ, ಸದಾನಂದ ಪೂಜಾರಿ ಉಂಗಿಲ ಬೈಲು, ಕಟ್ಟೂರು ಶಿವ ಭಟ್, ಶಂಕರ ಭಟ್, ಸಂತು, ಇಂಜಿನಿಯರ್ ರಾಕೇಶ್, ಗುತ್ತಿಗೆದಾರ ವಸಂತ ಪೂಜಾರಿ ಉಪಸ್ಥಿತರಿದ್ದರು.

ಪುರೋಹಿತ ಪದ್ಮನಾಭ ಜೋಶಿ ಭೂಮಿ ಪೂಜನ ನೆರವೇರಿಸಿದರು. ಕೂಡಲೇ ಅಣೆಕಟ್ಟಿಗೆ ಹಲಗೆ ಇಳಿಸಲಾಗುವುದು ಹಾಗೂ ಮುಂದಿನ ಮಳೆಗಾಲದೊಳಗೆ ಕಾಲುವೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ ತಿಳಿಸಿದರು. ಪತ್ರಕರ್ತ ದೀಪಕ ಆಠವಳೆ ಸ್ವಾಗತಿಸಿ, ವಂದಿಸಿದರು.

ರಸ್ತೆ ಅಭಿವೃದ್ಧಿ ಶಾಸಕರಿಗೆ ಬೇಡಿಕೆ: ಇದೇ ವೇಳೆ ಸ್ಥಳೀಯರು, ಬಳಂಜವನ್ನು ಸಂಪರ್ಕಿಸುವ ನಡಾಯಿ – ಆನೆಪಿಲ ಮಣ್ಣಿನ ರಸ್ತೆಯನ್ನು ಸರ್ವ‌ಋತು ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು.

Related posts

ಮಲವಂತಿಗೆ: ಮೇಗಿನ ಕರಿಯಾಲು ನಿವಾಸಿ ಕೆ. ಸಂಜೀವ ಗೌಡ ನಿಧನ

Suddi Udaya

ಮಿತ್ತಬಾಗಿಲು: ಕೊಳಂಬೆ ನಿವಾಸಿ ವಿದ್ಯಾ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ತಿರಂಗ ಯಾತ್ರೆ ಪಂಜಿನ ಮೆರವಣಿಗೆ

Suddi Udaya

ರಾತ್ರಿ ಬೆಳ್ತಂಗಡಿ ಠಾಣೆಗೆ ಬಂದು ಹೇಳಿಕೆ ನೀಡಿದ ಶಾಸಕ ಹರೀಶ್ ಪೂಂಜ

Suddi Udaya

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಸಭೆ

Suddi Udaya
error: Content is protected !!