37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

ಬಳಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ಗುರುವಾಯನಕೆರೆ ಮತ್ತು ಬಳಂಜ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಕುವೆಟ್ಟು ಗ್ರಾಮ ಪಂಚಾಯತ್ ಸಭಾಂಗಣ ಗುರುವಾಯನಕೆರೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕಕಾರಂದೂರು ಬಿ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ವಹಿಸಿದರು. ಕಾರ್ಯಕ್ರಮವನ್ನು ಗುರುವಾಯನಕೆರೆ ಒಕ್ಕೂಟದ ಅಧ್ಯಕ್ಷ ಮಹೇಶ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾರಾವಿ ವಲಯದ ಮೇಲ್ವಿಚಾರಕರಾದ ವಿಶಾಲ ಭಾಗವಹಿಸಿ, ಒಕ್ಕೂಟದ ಮಹತ್ವ, ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ, ಒಕ್ಕೂಟದಲ್ಲಿ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ, ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಿಕೊಡುವ ಬಗ್ಗೆ, ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಉತ್ತಮ ಒಕ್ಕೂಟವನ್ನು ಗುರುತಿಸಲಾಯಿತು. ಮತ್ತು ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಗುರುವಾಯನಕೆರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ಯಶೋದ ಸ್ವಾಗತಿಸಿದರು, ಬಳಂಜ ವಲಯದ ಮೇಲ್ವಿಚಾರಕರಾದ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಗುರುವಾಯನಕೆರೆ ಹಾಗೂ ಬಾಳಂಜ ವಲಯದ ಸೇವಾ ಪ್ರತಿನಿಧಿಯವರು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ : ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯ ವತಿಯಿಂದ “ಆಟಿಡೊಂಜಿ ಕೂಟ” ಕಾರ್ಯಕ್ರಮ

Suddi Udaya

ಗೇರುಕಟ್ಟೆ ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್: ಖತೀಬರಾದ ತಾಜುದ್ದೀನ್ ಸಖಾಫಿರಿಗೆ ಬೀಳ್ಕೊಡುಗೆ

Suddi Udaya

ಹಸಿರು ಕ್ರಾಂತಿ ರೈತರ ಕಲ್ಯಾಣ ಮತ್ತು ಯೋಗ ಕ್ಷೇಮಕ್ಕಾಗಿ ಪ್ರತಿ ಗ್ರಾಮ ಮಟ್ಟದಲ್ಲೂ ರೈತ ಸಂಘಟನೆ ರಚನೆ: ಯುವ ರೈತರನ್ನು ಒಗ್ಗೂಡಿಸುವ ಸಲುವಾಗಿ ರೈತ ಸಂಘವನ್ನು ಸಧೃಡವಾಗಿ ಕಟ್ಟುವ ಉದ್ದೇಶ: ಆದಿತ್ಯ ಕೊಲ್ಲಾಜೆ

Suddi Udaya

ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ ಶಿಕ್ಷಕ ಮಹಾಸಭೆ

Suddi Udaya
error: Content is protected !!