September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕಿ ಶ್ರದ್ದಾ ಶೆಟ್ಟಿ ಎಣಿಂಜೆ ರವರು ಸೌತಡ್ಕ ದೇವಸ್ಥಾನಕ್ಕೆ ಭೇಟಿ, ವಿಶೇಷ ಪೂಜೆ

ಬೆಳ್ತಂಗಡಿ: ಲಾಯಿಲ ಗ್ರಾಮದ ಎಣಿಂಜೆ ನಿವಾಸಿ ಶ್ರೀಮತಿ ಶಾರದ ಮತ್ತು ಶೇಖರ ಶೆಟ್ಟಿ ದಂಪತಿಯ ಪುತ್ರಿ ಶ್ರದ್ದಾ ಶೆಟ್ಟಿಯವರು ಜ. 06 ರಂದು ಶ್ರೀ ಕ್ಷೇತ್ರ ಸೌತಡ್ಕಕ್ಕೆ ತನಗೆ ಸಿಕ್ಕಿದ ಪ್ರಶಸ್ತಿಯೊಂದಿಗೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ಪ್ರಸ್ತುತ ಶ್ರದ್ದಾ ಶೆಟ್ಟಿಯವರು ಉಜಿರೆ ಎಸ್. ಡಿ. ಎಂ ಕಾಲೇಜಿನಲ್ಲಿ ಬಿಎಡ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇವರು ತನ್ನ ಹವ್ಯಾಸವಾಗಿ ಹೂವಿನ ರಂಗೋಲಿಗಳನ್ನು ಬಿಡಿಸುತ್ತಿದ್ದರು. ಇತ್ತೀಚಿಗೆ ಬೃಹದಾಕಾರದ ಹೂವಿನ ರಂಗೋಲಿಯನ್ನು ಬಿಡಿಸಿ ವಿಶ್ವದಾಖಲೆ ನಿರ್ಮಿಸಿದರು. ಈ ಹೂವಿನ ರಂಗೋಲಿ ಬಿಡಿಸಲು ಸೌತಡ್ಕದಿಂದಲೇ ಹೂವುಗಳನ್ನು ಕೊಂಡೋಗಿರುವುದು ಕೂಡಾ ಪ್ರಶಸ್ತಿ ಲಭಿಸಲು ಮತ್ತು ವಿಶ್ವ ದಾಖಲೆ ನಿರ್ಮಿಸಲು ಕಾರಣವಾಯಿತೆಂದು ಪ್ರಶಸ್ತಿ ವಿಜೇತೆ ಕುಮಾರಿ ಶ್ರದ್ದಾ ಶೆಟ್ಟಿರವರ ಮನದಾಳದ ಮಾತಾಗಿತ್ತು.

ಪ್ರಸ್ತುತ ಇವರು ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಇದರ ಸದಸ್ಯೆ ಮತ್ತು ಶ್ರೀ ದುರ್ಗಾ ಭಜನಾ ಮಂಡಳಿ ಕನ್ನಾಜೆ ಇಲ್ಲಿಯ ಭಜಕಿಯಾಗಿರುತ್ತಾರೆ. ಈಕೆಯ ಸಾಧನೆಗೆ ಇನ್ನೊಂದು ಗರಿಮೆ ಕೂಡಾ ಸೇರಿಕೊಂಡಿದೆ. ಇವರ ಸಾಧನೆ ಎಂದರೆ 1 ಗಂಟೆ 39 ನಿಮಿಷದಲ್ಲಿ 8 ಫೀಟ್ ಹೂವಿನ ರಂಗೊಲಿಯನ್ನು ತಯಾರಿಸಿ, ದಾಖಲೆ ನಿರ್ಮಿಸಿದ್ದು ಈ ಶ್ರಮದ ಫಲವಾಗಿ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಲಭಿಸಿದ್ದು ,ಮುಂದಕ್ಕೆ ಇದೇ ಸಾಧನೆಗೆ ನವಂಬರ್ ತಿಂಗಳಿನಲ್ಲಿ ಏಷ್ಯಾ ಬುಕ್ ಆಫ್ ರೆಕಾರ್ಡ್ ಲಭಿಸಿದೆ. ಈ ಸಾಧನೆಯನ್ನು ಮನಗಂಡು ಹಲವಾರು ಗಣ್ಯರು ಭೇಟಿಯಾಗಿ ಸಾಧನೆಯನ್ನು ಪ್ರೋತ್ಸಾಹಿಸಿ, ಸನ್ಮಾನಿಸಿರುತ್ತಾರೆ.

ಈ ಸಂದರ್ಭ ಸೌತಡ್ಕ ದೇವಸ್ಥಾನದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ, ಶಶಿ ಕೊಕ್ಕಡ ಶ್ರೀ ಲಕ್ಷ್ಮೀ ಡಿಜಿಟಲ್ಸ್ , ಭಕ್ತಿ ಹೆಜ್ಜೆ ಬಳಗದ ಸದಸ್ಯರಾದ ದಿನೇಶ್ ಗೌಡ ಕೊಯ್ಯೂರು ಹಾಗೂ ಸಾಧಕಿಯ ಪೋಷಕರಾದ ಶೇಖರ ಶೆಟ್ಟಿ ಮತ್ತು ಮನೆಯವರು ಮತ್ತು ಇವರ ಸಹಪಾಠಿ ಮಿತ್ರರು ಇವರ ಜೊತೆಗೆ ಉಪಸ್ಥಿತರಿದ್ದರು..

Related posts

ದ.ಕ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣಗೊಳಿಸಲು ಸದನದಲ್ಲಿ ಶಾಸಕ ಹರೀಶ್ ಪೂಂಜ ಒತ್ತಾಯ

Suddi Udaya

ಫೆ.29-ಮಾ.2ರವರೆಗೆ ನಡೆಯಲಿರುವ ಆಗ್ನೆಯ ಏಷ್ಯಾ ಮಾಧ್ಯಮ ಅಧ್ಯಯನ ಸಮ್ಮೇಳನಕ್ಕೆ ಕೊಕ್ಕಡದ ಸಿಬಂತಿ ಪದ್ಮನಾಭ

Suddi Udaya

ಬೆಂಗಳೂರಿನ ಕೆಮ್ ಟ್ರೆಂಡ್ ಕೆಮಿಕಲ್ಸ್ ಕಂಪನಿಯಿಂದ ಸೇವಾಭಾರತಿ ಸಂಸ್ಥೆಗೆ ಉಪಕರಣಗಳ ಹಸ್ತಾಂತರ

Suddi Udaya

ಬೆಳ್ತಂಗಡಿ: ಪಹಣಿಗಳಿಗೆ ಆಧಾರ್ ಜೋಡನೆ ಆಂದೋಲನ

Suddi Udaya

ಮಲವಂತಿಗೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಪ್ರಕಾಶ್ ಕುಮಾರ್ ಜೈನ್, ಉಪಾಧ್ಯಕ್ಷರಾಗಿ ರೋಹಿಣಿ ಜಯವರ್ಮ ಗೌಡ ಅವಿರೋಧವಾಗಿ ಆಯ್ಕೆ

Suddi Udaya

ಸುನ್ನೀ ಸಮೂಹ ಸಂಘಟನೆಗಳ ವತಿಯಿಂದ ರಂಝಾನ್ ಕಿಟ್, ಸಾಮೂಹಿಕ ಇಫ್ತಾರ್ ಮೀಟ್

Suddi Udaya
error: Content is protected !!