September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸ್ಪಂದನಾ ಲಯನ್ಸ್ ಪ್ರಾಂತೀಯ ಸಮ್ಮೇಳನ–2026 : ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಲಯನ್ಸ್ ಜಿಲ್ಲೆ 317D ಪ್ರಾಂತ್ಯ–10 ರ ಸದಸ್ಯರ ಸಮಾವೇಶವಾದ “ಸ್ಪಂದನಾ ಪ್ರಾಂತೀಯ ಸಮ್ಮೇಳನ–2026” ಫೆಬ್ರವರಿ 7ರಂದು (ಶನಿವಾರ) ಬೆಳುವಾಯಿ ಖಂಡಿಗ ಗ್ರೀನ್ಸ್ ಸಭಾಂಗಣದಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ ಶೆಟ್ಟಿ ಹಾಗೂ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಭಟ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಜಗದೀಶ್ಚಂದ್ರ ಡಿ.ಕೆ., ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಇಂದ್ರ, ಪ್ರಧಾನ ಕಾರ್ಯದರ್ಶಿ ಲಯನ್ ಹೆರಾಲ್ಡ್ ತವರೊ, ಕೋಶಾಧಿಕಾರಿ ಹರೀಶ್ ಕುಮಾರ್, ವಲಯ ಅಧ್ಯಕ್ಷ ಜೊಸ್ಸಿ ಮೆನೆಜಸ್, ಲಯನ್ಸ್ ಕ್ಲಬ್ ವೇಣೂರು ಅಧ್ಯಕ್ಷ ಸುಧೀರ್ ಭಂಡಾರಿ, ಕಾರ್ಯದರ್ಶಿ ಜಯರಾಮ ಹೆಗ್ಡೆ, ಕೋಶಾಧಿಕಾರಿ ಸತೀಶ್ ಚಿಗುರು ಲಯನ್ಸ್ ಕ್ಲಬ್ ಬೆಳ್ತಂಗಡಿ ಯ ನಿಕಟ ಪೂರ್ವ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ಲಯನ್ಸ್ ಕ್ಲಬ್ ಮೂಡಬಿದ್ರೆ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ವಿನೋದ್ ಡೇಸ ವೇಣೂರಿನ ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಪೈ ಭರತ್ ರಾಜ್ ಮುದ್ಯ ದಯಾನಂದ ಭಂಡಾರಿ ಗಿರೀಶ್ ಕೆ ಯಸ್ ನಿತೀಶ್ ಕುಕ್ಕೇಡಿ ನವೀನ್ ಪಚ್ಚೇರಿ ನಿರಂಜನ್ ಕೆ ಯಸ್ , ಹಿರಿಯ ಸದಸ್ಯರಾದ ಸತ್ಯನಾರಾಯಣ ಪೈ ಲುಕಾಸ್ ಕೊರೆಯ ಸೇರಿದಂತೆ ಲಯನ್ಸ್ ಕ್ಲಬ್ ಸದಸ್ಯರು ಸದಸ್ಯರು ಉಪಸ್ಥಿತರಿದ್ದರು.

ಸಮ್ಮೇಳನವು ಸದಸ್ಯರ ನಡುವೆ ಸಹಕಾರ, ಸೇವಾ ಚಟುವಟಿಕೆಗಳ ವಿಸ್ತರಣೆ ಹಾಗೂ ಸಂಘಟನಾ ಬಲವರ್ಧನೆಗೆ ವೇದಿಕೆಯಾಗಲಿದೆ ಎಂದು ನಾಯಕರು ಅಭಿಪ್ರಾಯಪಟ್ಟರು.

Related posts

ನಾಳೆ(ಫೆ.8): ಮಾಲಾಡಿ ಗ್ರಾಮ ಪಂಚಾಯತ್‌ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಿ ಕಡಿರುದ್ಯಾವರ ಜನಸ್ಪಂದನ ಸಭೆಯಲ್ಲಿ ಗ್ರಾಮಸ್ಥರು ಆಗ್ರಹ

Suddi Udaya

ಪೋಕ್ಸೋ ಪ್ರಕರಣ: ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಹಾಗೂ ಮೋಹನ್ ರಿಗೆ ಜಾಮೀನು ಮಂಜೂರು

Suddi Udaya

ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ತಂಗಡಿಯ ಧೃತೇಶ್ ಪಕ್ಕಳರಿಗೆ ಚಿನ್ನದ ಪದಕ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಮುಖ್ಯಕಾರ್ಯನಿರ್ವಹರ್ಣಾಧಿಕಾರಿಯಾಗಿ ಶಶಿಧರ ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಕಂಠ ಶಸ್ತ್ರಚಿಕಿತ್ಸೆ ಯಶಸ್ವಿ

Suddi Udaya
error: Content is protected !!