September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿ: ಧರಣಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅರಸಿನಮಕ್ಕಿ ವಲಯದ ಪೆರ್ಲ ಕಾರ್ಯಕ್ಷೇತ್ರದಲ್ಲಿ ಧರಣಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಪೆರ್ಲ ರಾಜೀವ ಗಾಂಧಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜ್ಞಾನ ವಿಕಾಸ ಕಾರ್ಯಕ್ರಮದ ನಿರ್ದೇಶಕ ವಿಠಲ ಪೂಜಾರಿ ಹಿಂದಿನ ಕಾಲದಲ್ಲಿ ಯಾವ ರೀತಿ ಬಡತನ ಇತ್ತು ಸಂಸ್ಕಾರ ಸಂಪ್ರದಾಯ ಆಚಾರ ವಿಚಾರಗಳಿತ್ತು ಈಗ ಅದೆಲ್ಲವೂ ಮರೆ ಮಾಚಿದೆ. ಹಿಂದಿನ ಕಾಲದ ಸಂಸ್ಕಾರಗಳನ್ನು ಉಳಿಸಬೇಕಾದರೆ ನಮಗೆ ತಿಳಿದದ್ದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಜೀವನಕ್ಕೆ ಪೂರಕವಾದ ಹಲವಾರು ಮಾಹಿತಿಗಳನ್ನು ಪಡೆದು ಕುಟುಂಬಕ್ಕೆ ಬೆಳಕಾಗಲಿ ಎಂದು ತಿಳಿಸಿದರು.

ವಾತ್ಸಲ್ಯ ಕಾರ್ಯಕ್ರಮದ ಮೂಲಕ 20000 ಕುಟುಂಬಗಳು ನೆಮ್ಮದಿಯ ಬದುಕು ಕಂಡುಕೊAಡಿದೆ. ತನ್ನ ತಂದೆ ತಾಯಿಯನ್ನೇ ಆಶ್ರಮದಲ್ಲಿ ಬಿಡುವ ಈ ಕಾಲದಲ್ಲಿ ಶ್ರೀ ಕ್ಷೇತ್ರದಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಅವರಿಗೆ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.


ಸಿಎ ಬ್ಯಾಂಕ್ ಮಾಜಿ ಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಪೂಜ್ಯರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮೆಲ್ಲರನ್ನು ಅಭಿವೃದ್ಧಿ ಪಡಿಸಿ ಇವತ್ತು ಉತ್ತಮ ರೀತಿಯಲ್ಲಿ ಬದುಕು ಕಂಡುಕೊAಡಿದ್ದೇವೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಇನ್ನಷ್ಟು ಮಾಹಿತಿಯನ್ನು ನಮಗೆ ತಿಳಿದಿದ್ದನ್ನು ಕನಿಷ್ಠ ನಮ್ಮ ಮನೆಯವರಿಗೆ ತಿಳಿಸಿದಾಗ ಎಲ್ಲರೂ ಪ್ರಬುದ್ಧತೆ ಹೊಂದಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟ ಮಾಜಿ ಅಧ್ಯಕ್ಷೆ ವನಿತಾ ಒಕ್ಕೂಟದಲ್ಲಿ ಹೊಸ ಜ್ಞಾನ ವಿಕಾಸ ಕೇಂದ್ರಕ್ಕೆ ಅವಕಾಶ ದೊರೆತಿದ್ದು ಉತ್ತಮ ರೀತಿಯಲ್ಲಿ ಮುಂದುವರಿಸುವAತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ, ಒಕ್ಕೂಟ ಅಧ್ಯಕ್ಷ ಅನ್ನು ಗೌಡ, ಭಜನಾ ಮಂಡಳಿಯ ಅಧ್ಯಕ್ಷ ವಿನಯ ಚಂದ್ರ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿ, ಸೇವಾಪ್ರತಿನಿಧಿ ಅರುಣಾ ಸ್ವಾಗತಿಸಿ ಮೇಲ್ವಿಚಾರಕಿ ಶಶಿಕಲಾ ಧನ್ಯವಾದವಿತ್ತರು.

Related posts

ತನ್ನ ತಾಯಿಯನ್ನು ಎತ್ತಿಕೊಂಡು ಬಂದು ಮತಚಲಾಯಿಸಿದ ಮಗ: ಅನಾರೋಗ್ಯದ ನಡುವೆಯೂ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದ ರೋಹಿಣಿ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ

Suddi Udaya

ನ.22: ಗೆಜ್ಜೆಗಿರಿಯಲ್ಲಿ ಮೂರನೇ ವರ್ಷದ ಗೆಜ್ಜೆನಾದದ ವೈಭವ

Suddi Udaya

ಉಜಿರೆ ವಲಯದ ಜ್ಞಾನಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ತರಬೇತಿ ಹಾಗೂ ಮಲ್ಲಿಗೆ ಗಿಡ ವಿತರಣಾ ಕಾರ್ಯಕ್ರಮ

Suddi Udaya

ಸವಣಾಲು: ಸಾಂತಪ್ಪ ಮಲೆಕುಡಿಯ ನಿಧನ

Suddi Udaya

ಕಕ್ಯಪದವು: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya
error: Content is protected !!