September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಜಿಲ್ಲಾ ರೈತ ತರಬೇತಿ ಕೇಂದ್ರ ಹಾಗೂ ಒಕ್ಕೂಟದ ವತಿಯಿಂದ ರೈತ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ, ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ, ಅಮೃತವರ್ಷಿಣಿ ಮಹಿಳಾ ಸಂಜೀವಿನಿ ಒಕ್ಕೂಟ ನಡ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರೈತ ತರಬೇತಿಯನ್ನು ಗುರಿಪಳ್ಳ ಹಾಲು ಉತ್ಪಾದಕದ ಸಹಕಾರಿ ಸಂಘದ ಪ್ರಾಂಗಣದಲ್ಲಿ ಜ.7 ರಂದು ನಡೆಯಿತು.

ಉಜಿರೆಯ ಕೃಷಿ ಸಖಿ ಭಾಗೀರಥಿ ಸ್ವಾಗತಿಸಿ, ಕಾರ್ಯಕ್ರಮದ ಉದ್ದೇಶ ನೈಸರ್ಗಿಕ ಕೃಷಿ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೃಷಿ ಅಧಿಕಾರಿ ಗಣೇಶ್ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಜಯಾನಂದ ಮಾತಾಡಿ ನಮ್ಮ ಕೃಷಿ ಸಖಿಯರು ಅಲ್ಲಲ್ಲಿ ಇಂತಹ ರೈತ ತರಬೇತಿ ಆಯೋಜನೆ ಮಾಡಿ ರೈತರಿಗೆ ವೈಜ್ಞಾನಿಕವಾಗಿ ಕೃಷಿ ಮಾಡುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ನೀವೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ರೈತ ತರಬೇತಿ ಕೇಂದ್ರದ ADA ರಮೇಶ್ ತರಬೇತಿ ಕೇಂದ್ರದಲ್ಲಿ ನಡೆಯುವ ತರಬೇತಿಗಳಿಗೆ ರೈತರು ಭಾಗವಹಿಸುವಂತೆ ಮನವಿ ಮಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ ಮಯ್ಯ ಅಡಿಕೆಗೆ ಬರುವ ರೋಗಗಳು ಅದರ ಪರಿಹಾರ ರೋಗ ಬರದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಸಾವಯವ ಕೃಷಿ ಹಾಗೂ ಅದರಿಂದ ಆಗುವ ಪ್ರಯೋಜನ ಗಳ ಬಗ್ಗೆ ಮಾಹಿತಿ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಎರಡು ಒಕ್ಕೂಟದ ಕೃಷಿ ಸಖಿಯರಾದ ಭಾಗೀರಥಿ ಮಲ್ಲಿಕಾ ಹಾಗೂ ಪಶು ಸಖಿ ಏಕಲತಾ ಪ್ರೇಮಾ ಜೀವಾಮೃತ ಮಾಡುವ ವಿಧಾನವನ್ನು ವಿವರಿಸಿ ಪ್ರಾತ್ಯಕ್ಷಿಕೆಯ ಮೂಲಕ ಮಾಡಿ ತೋರಿಸಿದರು. ಎನ್.ಎಮ್.ಎಫ್ ಯೋಜನೆ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗುರಿಪಳ್ಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ನಮಿತಾ, ಎರಡು ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Related posts

ಬೆಳಾಲು ಮೈತ್ರಿ ಯುವಕ ಮಂಡಲ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ನಿತಿನ್ ಮೋನಿಸ್, ಕಾರ್ಯದರ್ಶಿಯಾಗಿ ವಿಘ್ನೇಶ್

Suddi Udaya

ಮಡಂತ್ಯಾರು ಶ್ರೀ ಕೃಷ್ಣಜನ್ಮಾಷ್ಟಮಿ ಸಮಿತಿಗೆ 37ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷರಾಗಿ ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕ್ಷೇತ್ರದ ಮುಂದಾಳು ಪ್ರಶಾಂತ್ ಎಂ. ಪಾರೆಂಕಿ ಗೌರವಾಧ್ಯಕ್ಷರಾಗಿ ಸಮಾಜಸೇವಕ, ಉದ್ಯಮಿ ಹಾಗೂ ಕೊಡುಗೈ ದಾನಿ ಪದ್ಮನಾಭ ಸುವರ್ಣ ಬಳ್ಳಮಂಜ

Suddi Udaya

ಲಾಯಿಲ: ಗುರಿಂಗಾನದಲ್ಲಿ ಅಪಾಯ ಮಟ್ಟದಲ್ಲಿ ನದಿ ನೀರು,: ಸುತ್ತಮುತ್ತಲ ಮನೆಗಳಿಗೆ ತುಂಬಿದ ನೀರು, ಸ್ಥಳಿಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Suddi Udaya

ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು

Suddi Udaya

ಸುನ್ನತ್ ಕೆರೆ ಅಲ್ ಮಸ್ಜಿದುಲ್ ಹುದಾ ಜುಮಾ‌ ಮಸ್ಜಿದ್ ನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ‍ರವರಿಗೆ ಸನ್ಮಾನ

Suddi Udaya
error: Content is protected !!