ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಾಮರಸ್ಯದ ಸಂಕ್ರಾಂತಿಗೆ ವೇಣೂರಿನಲ್ಲಿ ಚಾಲನೆ: ಪರಿಶಿಷ್ಟ ಜಾತಿ ಕುಟುಂಬಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕ ಹರೀಶ್ ಪೂಂಜ

ವೇಣೂರು: ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚುವ ದಿನ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಈ ಬಾರಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಬೆಳ್ತಂಗಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿಯ ಬಂಧುಗಳ ಕಾಲನಿಗಳಲ್ಲಿ ಜ.೧೪ರಂದು ಸಂಕ್ರಾಂತಿ ಹಬ್ಬವನ್ನು ‘ಸಾಮರಸ್ಯದ ಸಂಕ್ರಾಂತಿ’ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಆಚರಿಸಿದರು. ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಪ.ಜಾತಿ ಬಂಧುಗಳ ಕಾಲೋನಿಗಳಿಗೆ ತೆರಳಿದ ಶಾಸಕ ಹರೀಶ್ ಪೂಂಜ ಅವರು ಉಡುಗೊರೆ ಸಹಿತ ಸಾಮರಸ್ಯದ ಸಂಕ್ರಮಣದ ಶುಭ ಹಾರೈಸಿದರು. ಈ ಸರಣಿ ಕಾರ್ಯಕ್ರಮಕ್ಕೆ ವೇಣೂರು ಆದಿಶಕ್ತಿ ಭಜನಾ ಮಂದಿರದಲ್ಲಿ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ಆದ ಸಂಭ್ರಮದ ಪ್ರೇರಣೆ ಪಡೆದು ಸರ್ವರನ್ನೂ ಬಂಧುಭಾವದಿಂದ ಅಭಿವೃದ್ಧಿಯೆಡೆಗೆ ಜೊತೆಗೆ ಕರೆದೊಯ್ಯುವ ಸಂಕಲ್ಪದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ನಡೆಸಿದರು. ಪರಿಶಿಷ್ಟ ಬಂಧುಗಳು ತಯಾರಿಸಿ ಬಡಿಸಿದ ಉಪಹಾರಾದಿ ಆತಿಥ್ಯ ಸ್ವೀಕರಿಸಲಾಯಿತು. ಕಾರ್ಯಕ್ರಮದ ಚಾಲನೆ ವೇಳೆ ಸ್ಥಳೀಯ ಹಿರಿಯರು, ಜನಪ್ರತಿನಿಧಿಗಳು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.

Related posts

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಸತತ 15 ನೇ ಬಾರಿಗೆ ಪ್ರಥಮ ಸ್ಥಾನ ಪಡೆದ ಬಂದಾರು ಸ.ಉ. ಹಿ. ಪ್ರಾ. ಶಾಲಾ ವಿದ್ಯಾರ್ಥಿಗಳ ತಂಡ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕವನ ವಾಚನ ಸ್ಪರ್ಧೆ : ಕು | ನಿತ್ಯಶ್ರೀ ಖಂಡಿಗ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಶೇ. 97.29 ಫಲಿತಾಂಶ

Suddi Udaya

ಶಿಶಿಲ: ದ್ವಿತೀಯ ಪಿಯು ಪರೀಕ್ಷೆ- ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಅಂಗನವಾಡಿ ಕಾರ್ಯಕರ್ತೆ

Suddi Udaya

ರುಪ್ಸಾ ನೀಡುವ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ವಾಣಿ ಆಂ.ಮಾ. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ. ಆಯ್ಕೆ

Suddi Udaya
error: Content is protected !!