25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪ.ಜಾತಿ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ

ಬೆಳ್ತಂಗಡಿ: ಸಮಾಜದಲ್ಲಿರುವ ಜಾತಿ, ಜಾತಿಗಳ ನಡುವಿನ ಅಂತರವನ್ನು ದೂರ ಸರಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಗೆ ಬದುಕಬೇಕು, ಸಮಸಮಾಜದ ನಿರ್ಮಾಣ ಉದ್ದೇಶವನ್ನು ಇರಿಸಿಕೊಂಡ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಜ.22 ರಂದು ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಗಳಲ್ಲಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಣೆ ನಡೆಯಿತು.

ಡಾ.ಬಿ.ಆರ್. ಅಂಬೇಡ್ಕರ್ ರವರ ಆಶಯದ್ದಂತೆ, ಸಮಸಮಾಜದ ನಿರ್ಮಾಣದ ದೃಷ್ಟಿಯಿಂದ ಸಂಕ್ರಾತಿಯ ಹಬ್ಬದ ಹರಿದಿನದಲ್ಲಿ ತಾಲೂಕಿನ 81 ಗ್ರಾಮಗಳ ದಲಿತ ಸಮುದಾಯದ ಕಾಲೋನಿಗಳಿಗೆ ಶಾಸಕ ಹರೀಶ್ ಪೂಂಜರು ಭೇಟಿ ನೀಡಿ ಸಾಮರಸ್ಯದ ಸಂಕ್ರಾತಿ ಹಬ್ಬ ಆಚರಿಸುತ್ತಿದ್ದಾರೆ. ಜ.22 ರಂದು ಸವಣಾಲು, ಶಿರ್ಲಾಲು-ಕರಂಬಾರು ಗ್ರಾಮಗಳ ಪರಿಶಿಷ್ಟ ಜಾತಿ ಸಮುದಾಯದ ಕಾಲೋನಿಗಳಲ್ಲಿ ಶಾಸಕರನ್ನು ಮಹಿಳೆಯರು ಆರತಿ ಎತ್ತಿ ತಿಲಕವನ್ನು ನಿಟ್ಟು, ಪುಷ್ಪ ಸಿಂಚನ ಮೂಲಕ ಹೂವಿನ ಮಾಲೆ ಹಾಕಿ ಬರಮಾಡಿಕೊಂಡರು.

ಕರಂಬಾರು ಗ್ರಾಮದ ಕಾಜುಮುಗೇರಿನ ಶ್ರೀನಿವಾಸ, ಶಿರ್ಲಾಲಿನ ಶಿವಪ್ಪ, ಕರಂಬಾರಿನ ಸದಾಶಿವ ಅವರ ಮನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಗೈದು ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ನನ್ನ ಹಿರಿಯರು ಕಲಿಸಿದ ಸಂಸ್ಕಾರದಿಂದ ದಲಿತ ಕುಟುಂಬದ ಒರ್ವ ಸದಸ್ಯನಂತೆ ಪಾಲ್ಗೊಂಡಾಗ ಅವರ ಮೊಗದಲ್ಲಿ ಬೀರಿದ ನಗು ನನಗೆ ಮತಷ್ಟು ಈ ಕೆಲಸ ಮಾಡಲು ಪ್ರೇರಣೆಯಾಗಿದೆ. ಚುನಾವಣೆ ಸಂದರ್ಭ ನಾನು ಈ ರೀತಿ ಕಾರ್ಯಕ್ರಮ ಮಾಡಿದಲ್ಲಿ ಇದಕ್ಕೆ ರಾಜಕೀಯ ಬಣ್ಣ ಬರಿಸಲಾಗುತ್ತಿತ್ತು. ಆದರೆ ಡಾ.ಬಿ.ಆರ್. ಅಂಬೇಡ್ಕರ್, ಆರ್‌ಎಸ್‌ಎಸ್, ವಾಜಪೇಯಿರುವರುಗಳ ಆಶಯದ್ದಂತೆ ನನ್ನ ಆತ್ಮಸಾಕ್ಷಿಯಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಜಾತಿ ಜಾತಿ ನಡುವಿನ ಅಂತರವನ್ನು ದೂರ ಸರಿಸಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸಮಾಜದಲ್ಲಿ ಬದುಕುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ನಾನು ಪ್ರಯತ್ನಿಸುತ್ತಿದ್ದೇನೆ ಎಂದರು. ಸಮುದಾಯದ ಜನರಿಗೆ ಸಾಮರಸ್ಯದ ಸಂಕ್ರಾತಿಯ ವಿಶೇಷತೆಯನ್ನು ಸಾರುವ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೀವಿಸಲು ನಾನು ಸಣ್ಣ ಪ್ರಯತ್ನ ಮಾಡಿಕೊಂಡಿದ್ದೇನೆ, ಜೀವದ ಕೊನೆಯ ಉಸಿರಿರುವರೆಗೂ ದಲಿತ ಸಮಾಜದ ಬಂಧುಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

ನೆಂಟರ ಮನೆಗೆ ಹೋಗುವಾಗ ತಿಂಡಿ ಹಿಡಿದುಕೊಂಡು ಹೋಗುವ ವಾಡಿಕೆ ಹಿಂದಿನಿಂದಲೂ ಬಂದಿದೆ ಆದ್ದರಂತೆ ಶಾಸಕರು ಸಂಕ್ರಾತಿ ಆಚರಣೆಗೆ ಆಗಮಿಸುವ ವೇಳೆ ದಲಿತ ಕುಟುಂಬಗಳಿಗೆ ಉಡುಗೊರೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ಈಶ್ವರ ಭೈರ, ನ.ಪಂ ಮಾಜಿ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್, ಸುಲ್ಕೇರಿಮೊಗ್ರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಧೀರ್ ಆರ್. ಸುವರ್ಣ, ಮಾಜಿ ಅಧ್ಯಕ್ಷ ನವೀನ್ ಸಾಮಾನಿ, ನ್ಯಾಯವಾದಿ ಅನಿಲ್‌ಕುಮಾರ್, ಶಂಕರ್ ಹೆಬ್ಬಾರ್, ಪ್ರಸಾದ್ ಕೊಯ್ಯೂರು, ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಲಕ್ಷಣ ಜಿ.ಎಸ್, ಗ್ರಾ.ಪಂ ಅಧ್ಯಕ್ಷೆ ಉಷಾ ಎಂ. ಶೆಟ್ಟಿ, ಮಾಧವ ಶಿರ್ಲಾಲು ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ಸದಸ್ಯರು, ಕಾಲನಿಗಳ ನಾಗರಿಕರು ಉಪಸ್ಥಿತರಿದ್ದರು.

Related posts

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನಿಡಿಗಲ್ ನಲ್ಲಿ ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ: ಮಹಿಳೆ ಜಾರಿ ಬಿದ್ದಾಗ ತಲೆ ಭಾಗ ಸೀಳಿ ಹಾಕಿ ,ಕೈಗೆ ಗಂಭೀರ ಗಾಯಗೊಳಿಸಿದ ನಾಯಿ

Suddi Udaya

ನಯನಾಡು: ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬಳಂಜ: ತಾರಿದೊಟ್ಟುವಿನಲ್ಲಿ ಚಿಪ್ಪುಹಂದಿ ಪ್ರತ್ಯಕ್ಷ: ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಕ್ಕಳ ಆಕರ್ಷಕ ಬೇಸಿಗೆ ಶಿಬಿರ “ಚಿಲಿಪಿಲಿ” ಉದ್ಘಾಟನೆ

Suddi Udaya
error: Content is protected !!