September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಭಿನಂದನ ಕಾರ್ಯಕ್ರಮ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿಕ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಶತಮಾನೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ ಹಿನ್ನೆಲೆಯಲ್ಲಿ ಅಭಿನಂದನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಿ. ಸೋಮಶೇಖರ ಶೆಟ್ಟಿ ಸರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶತಮಾನೋತ್ಸವ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮ ಅತ್ಯಂತ ವೈಭವದಿಂದ ಹಾಗೂ ಶಿಸ್ತು ಬದ್ಧವಾಗಿ ಆಯೋಜಿಸಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.


ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕ್ಷೇಮ ಪಾಲನಾಧಿಕಾರಿಯಾದ ಶ್ರೀ ಧನ್ಯ ಕುಮಾರ್ ಶತಮಾನ ಪೂರೈಸಿರುವ ಈ ಶಾಲೆ ಕೇವಲ ಶಿಕ್ಷಣ ಕೇಂದ್ರವಷ್ಟೇ ಅಲ್ಲ, ಗ್ರಾಮೀಣ ಬದುಕನ್ನ ರೂಪಿಸಿದ ಪವಿತ್ರ ಸ್ಥಳವಾಗಿದೆ.ಅನೇಕ ಸಾಧಕರನ್ನ ಸಮಾಜಕ್ಕೆ ನೀಡಿರುವುದು ಈ ಶಾಲೆಯ ಹೆಮ್ಮೆ. ಕಾರ್ಯಕ್ರಮ ನಡೆಸಲು ಮಾರ್ಗದರ್ಶನ ನೀಡುವುದರ ಜೊತೆಗೆ ಸಹಕರಿಸಿದ ಸಂಸ್ಥೆಯನ್ನು, ಶಾಲೆಯನ್ನು ಸ್ಥಾಪಿಸಲು ಕಾರಣರಾದ ಮನೆತನ ದವರನ್ನು ಸ್ಮರಿಸಿ. ಈ ಯಶಸ್ವಿಗೆ ಕಾರಣರಾದ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು, ಶಿಕ್ಷಣ ಇಲಾಖೆಯನ್ನು, ಶತಮಾನೋತ್ಸವ ಸಮಿತಿಯ ಸದಸ್ಯರನ್ನು, ಆಡಳಿತ ಮಂಡಳಿಯವರು ನಡೆಸಿಕೊಟ್ಟ ಕಾರ್ಯಕ್ರಮವು ಶಾಶ್ವತವಾಗಿ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನಷ್ಟು ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸೋಮಶೇಖರ ಶೆಟ್ಟಿ , ಶ್ರೀ ಧನ್ಯ ಕುಮಾರ್ ಶಾಲಾ ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಅಬೂಬಕ್ಕ ರ್ ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಮಾ ಹಾಗೂ ಕೃಷ್ಣಪ್ರಸಾದ್ ಮತ್ತು ಶಾಲಾ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಲಾಯಿತು.
ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕರಕ್ಷಕ ಸಂಘದ ಸಮಿತಿಯ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಸಮಿತಿಯ ಸದಸ್ಯರು,ಶಾಲಾ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಾಲಕೃಷ್ಣ ನಾಯ್ಕ್ ರವರು ವಹಿಸಿದರು.


ಅಭಿನಂದನಾ ಭಾಷಣವನ್ನು ಶಿಕ್ಷಕರಾದ ಕೂ ಸಪ್ಪ ಗೌಡ ನಡೆಸಿಕೊಟ್ಟರು. ದೈಹಿಕ ಶಿಕ್ಷಕರಾದ ಗಿರೀಶ್ ಸ್ವಾಗತಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಪುಷ್ಪಾವತಿ ನಡೆಸಿಕೊಟ್ಟರು.
ಧನ್ಯವಾದವನ್ನು ಸಹ ಶಿಕ್ಷಕಿಯಾದ ಗೀತಾ ಮಾಡಿದರು.

Related posts

ಶ್ರೀ. ಧ. ಮಂ. ಪ. ಪೂ.ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

Suddi Udaya

ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಲಯ ಉದ್ಘಾಟನೆ

Suddi Udaya

ಉಭಯ ಜಿಲ್ಲಾ ಮೊಬೈಲ್ ರೀಟೇಲರ್ ಅಸೋಸಿಯೇಷನ್ ಇದರ ವಾರ್ಷಿಕ ಕ್ರೀಡಾಕೂಟ

Suddi Udaya

ಉಜಿರೆ ಶ್ರೀ ಧ. ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಚಿಣ್ಣರ ಯೋಗ ಶಿಬಿರ ಉದ್ಘಾಟನೆ

Suddi Udaya

ಇಲಂತಿಲ ಗ್ರಾ.ಪಂ. ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

Suddi Udaya

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya
error: Content is protected !!