September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆಯಲ್ಲಿ 550 ಕೆಜಿ ತೂಕದ ಮಡಲ್ ಮೀನು: ಖರೀದಿಸಲು ಮುಗಿಬಿದ್ದ ಗ್ರಾಹಕರು

ಬೆಳ್ತಂಗಡಿ: ಉಜಿರೆ ಚಾರ್ಮಾಡಿ ರಸ್ತೆಯಲ್ಲಿ ನಾಗೇಶ್ ಕೋಟ್ಯಾನ್ ಮಾಲೀಕತ್ವದ ತಾಜಾ ಮೀನು ಅಂಗಡಿಗೆ ಶನಿವಾರ 550 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ಮೀನು ಮಾಂಸ ಖರೀದಿಸಲು, ನೋಡಲು ಜನ ಮುಗಿಬಿದ್ದರು.

ಮಲ್ಪೆ ಶ್ರಿರಾಮಾಂಜನೇಯ ಬೋಟ್ ನಲ್ಲಿ ನಿನ್ನೆ ತಡರಾತ್ರಿ ಮೀನು ಬಿದ್ದಿತ್ತು. ಬೆಳಿಗ್ಗೆ ಮೀನು ಈ ಅಂಗಡಿಗೆ ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಜನ ಮುಗಿಬಿದ್ದಿದ್ದರು. ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಕಾರು ನಿಲ್ಲಿಸಿ ಮೀನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಪ್ರಮುಖದ ಜಯಪ್ರಕಾಶ್ ಶೆಟ್ಡಿ ಉಜಿರೆ, ಪ್ರವೀಣ್ ಹಳ್ಳಿಮನೆ ಪತ್ರಕರ್ತ ದಿನೇಶ್ ಕೋಟ್ಯಾನ್ ಸೇರಿದಂತೆ ನೂರಾರು ಮಂದಿ ಮಾಹಿತಿ ಪಡೆದರು. ಒಂದು ಗಂಟೆಯೊಳಗೆ ಮೀನು ಮಾಂಸ ಖಾಲಿಯಾಗಿತ್ತು.

Related posts

ನಾಳ: ಶಿಥಿಲ ಗೊಂಡ ಅಂಗನವಾಡಿ ಕೇಂದ್ರಕ್ಕೆ ತಡೆ ಬೇಲಿ ಹಾಗೂ ನೂತನ ಕಟ್ಟಡ ರಚನೆಗೆ ಪೋಷಕರ ಆಗ್ರಹ

Suddi Udaya

ಬೆಳ್ತಂಗಡಿ: ನಿತ್ಯಾನಂದ ನಾವರರವರು ಒಂದೇ ದಿನದಲ್ಲಿ112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ

Suddi Udaya

ಉಜಿರೆ: ಎಸ್.ಡಿ. ಎಮ್ ಆಂ.ಮಾ. ಶಾಲೆಯಲ್ಲಿ ದೀಪಾವಳಿಯ ಮಹತ್ವ ‘ಜ್ಞಾನ ಜ್ಯೋತಿ’ ಕಾರ್ಯಕ್ರಮ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಪಡಂಗಡಿ ಕಾರ್ಯನ ಮುಟ್ಟಿಯವರಿಗೆ ಸಂತೋಷ್ ಕುಮಾರ್ ಜೈನ್ ರವರ ನೇತೃತ್ವದಲ್ಲಿ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಉಜಿರೆ: ಫಾರೆಸ್ಟರ್ ಲೋಕೇಶ್ ಹೃದಯಾಘಾತದಿಂದ ನಿಧನ

Suddi Udaya
error: Content is protected !!