September 6, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಶುಭಾರಂಭ

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

ಉಜಿರೆ: ಉಜಿರೆಯಲ್ಲಿ ಗೌತಮ್ ಬಿ.ಆರ್. ರವರ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಇದರ ಶುಭಾರಂಭವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಜ.25ರಂದು ಶುಭಾರಂಭಗೊಂಡಿತು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಜಿರೆ ಧ.ಮಂ.ಶಿಕ್ಷಣ ಸಂಸ್ಥೆಗಳ ಐಟಿ & ಹಾಸ್ಟೆಲ್ ಆಡಳಿತ ಮುಖ್ಯಕಾರ್ಯನಿರ್ವಹಣಾಧಿಕಾರಿಪೂರಣ್ ವರ್ಮ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಹಳೆಪೇಟೆ ಮುಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಯು.ಹೆಚ್ ಅಬೂಬಕ್ಕರ್, ಉದ್ಯಮಿ ಹಾಗೂ ಕಟ್ಟಡ ಮಾಲಿಕ ಚಿತ್ರೇಶ್ ಶೆಟ್ಟಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಹನಾ ಪಾರ್ಲರ್ ಮಾಲಕಿ ಎಚ್.ವಿ. ಸಹನಾ, ಸ್ಟಾನ್ಲಿ ಜಯಕರ್, ಅಮೃತೇಶ್, ನಿರಂಜನ್ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ಅಮೃತ್ ಸಿಲ್ಕ್ ಮಾಲಕ ಪ್ರಶಾಂತ್ ಜೈನ್, ಮೋಹನ್ ಶೆಟ್ಟಿಗಾರ್, ಚೈತ್ರೇಶ್, ಸಿಎಚ್ ಪ್ರಭಾಕರ್ ಮತ್ತು ಕುಟುಂಬಸ್ಥರು, ಸಿಬ್ಬಂದಿ ವರ್ಗಉಪಸ್ಥಿತರಿದ್ದರು.ಮಾಲಕರಾದ ಗೌತಮ್ ಬಿಆರ್ ಮತ್ತು ಪತ್ನಿ ಅಕ್ಷತಾ ಗಣ್ಯ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಕನ್ನಿಕಾ ಎಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು.

Related posts

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಚಿದಾನಂದ ಪೂಜಾರಿ ಆಯ್ಕೆ

Suddi Udaya

ಕರಾವಳಿಯ ಕೋಳಿ ರೈತರ ಹಿತರಕ್ಷಣೆಗಾಗಿ ದನಿಯಾದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ: ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ

Suddi Udaya

ಸಂತ ಫಿಲೋಮೀನಾ ಸ್ವಾಯತ್ತ ಕಾಲೇಜಿನಲ್ಲಿ ‘ ಭಯೋತ್ಪಾದನಾ ವಿರೋಧಿ ದಿನ’ ಆಚರಣೆ

Suddi Udaya

ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಮುಂಬೈ ಶಾರದೋತ್ಸವದ ಶೋಭಾಯಾತ್ರೆ: ಕುಣಿತ ಭಜನೆ, ಜಡೆ ಕೋಲಾಟ, ಕಂಸಾಳೆ ಪ್ರದರ್ಶನ ನೀಡಲು ವಿ ಹರೀಶ್ ನೆರಿಯ ಸಾರಥ್ಯದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿಯ ಭಜಕರು

Suddi Udaya

ಬೆಳ್ತಂಗಡಿ: ದಾರುಸಲಾಂ ಎಜುಕೇಶನ್ ಸೆಂಟರ್ ನಲ್ಲಿ 7ನೇ ಬ್ಯಾಚ್ ನ ತರಗತಿ ಪ್ರಾರಂಭೋತ್ಸವ

Suddi Udaya
error: Content is protected !!