ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಡ ಮೂಡಾಯಿಬೆಟ್ಟು ಹಂದಿ ಸಾಕಾಣಾ ಕೇಂದ್ರದಿಂದ ಹಂದಿಯನ್ನು ಎಳೆದೊಯ್ದ ಚಿರತೆ

ನಡ: ಇಲ್ಲಿಯ ನಡ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ಹಂದಿ ಸಾಕುವ ಶೆಡ್‌ನಿಂದ ಹಂದಿಯೊಂದನ್ನು ಚಿರತೆ ಎಳೆದೊಯ್ದ ಘಟನೆ ನಿನ್ನೆ ರಾತ್ರಿ ನಡೆದಿದೆ ಎಂದು ಸ್ಥಳೀಯರಾದ ಶ್ಯಾಮಸುಂದರ್ ನಡ ಮಾಹಿತಿ ನೀಡಿದ್ದಾರೆ.

ನಡ ಗ್ರಾಮದ ಮೂಡಾಯಿಬೆಟ್ಟು ನಿವಾಸಿ ವಿನ್ಸೆಂಟ್ ಎಂಬವರು ಹಂದಿ ಸಾಕಾಣೆ ಮಾಡುತ್ತಿದ್ದು, ಇಂದು ಬೆಳಿಗ್ಗೆ ಹಂದಿ ಸಾಕಾಣೆ ಮಾಡುವ ಶೆಡ್‌ನ ಬಳಿ ರಕ್ತದ ಕಲೆಗಳು ಕಂಡು ಬಂದಿದ್ದು, ಇವರ ಸಾಕುತ್ತಿದ್ದ ಹಂದಿಗಳಲ್ಲಿ ಒಂದು ಹಂದಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಶೆಡ್‌ಗೆ ನುಗ್ಗಿದ ಚಿರತೆ ಹಂದಿಯನ್ನು ಕಾಡಿಗೆ ಎಳೆದೊಯ್ದಿರಬಹುದೆಂದು ಸಂಶಯಿಸಲಾಗಿದೆ. ಮೂಡಾಯಿಬೆಟ್ಟು ಪರಿಸರದ ಕಾಡಿನಲ್ಲಿ ಚಿರತೆ ಓಡಾಟವಿದೆ ಎಂದು ಸ್ಥಳೀಯರಾದ ಶ್ಯಾಮ್‌ಸುಂದರ್ ನಡ ತಿಳಿಸಿದ್ದಾರೆ. ಸಮೀಪದಲ್ಲೆ ಸರಕಾರಿ ಶಾಲೆಯೊಂದಿದ್ದು, ಸ್ಥಳೀಯರಲ್ಲಿ ಆಂತಕ ಎದುರಾಗಿದೆ.

Related posts

ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆದ್ರಬೆಟ್ಟು ಅರ್ರಿಫಾಯ್ಯಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

Suddi Udaya

ನಡ ಸರಕಾರಿ ಪ್ರೌಢ ಶಾಲೆಯಲ್ಲಿ ‘ಗಣಿತ ಸಂಘದ ಉದ್ಘಾಟನೆ’

Suddi Udaya

ಸೋಮಂತಡ್ಕ: ನಿಯಂತ್ರಣ ತಪ್ಪಿ ಚರಂಡಿಗೆ ಗುದ್ದಿದ ಕೆಎಸ್ಆರ್ ಟಿಸಿ ಬಸ್

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

Suddi Udaya
error: Content is protected !!