September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ ಸಿದ್ದಬೈಲ್ ಪರಾರಿ ಸ.ಹಿ.ಪ್ರಾ. ಶಾಲೆಗೆ ಯುವ ಉದ್ಯಮಿ ಮೋಹನ್ ಗೌಡರಿಂದ ಇನ್ವಾರ್ಟರ್ ಕೊಡುಗೆ

ಕಲ್ಮoಜ: ಇಲ್ಲಿಯ ಸಿದ್ದಬೈಲ್ ಪರಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಳೆ ವಿದ್ಯಾರ್ಥಿ, ಕರ್ನಾಟಕ ಸಾವಯವ ಕೃಷಿ ಯೋಜನೆ ರಾಜ್ಯ ಆಡಳಿತ ನಿರ್ದೇಶಕ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬೆಳ್ತಂಗಡಿ ಒಕ್ಕಲಿಗ ಗೌಡರ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಮೋಹನ ಗೌಡ ಕಲ್ಮoಜ ರವರಿಂದ ರೂ.25 ಸಾವಿರ ಮೌಲ್ಯದ ಇನ್ವಾರ್ಟರ್ ಕೊಡುಗೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಮೋಹನ ಗೌಡ ರವರು ಇತ್ತೀಚೆಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯ ಬಗ್ಗೆ ಮಕ್ಕಳ ಶಿಕ್ಷಣ ಅಧ್ಯಾಪಕರ ಬಗ್ಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾನು ಈ ಶಾಲೆಯಲ್ಲಿ ಕಲಿತು ರಾಜ್ಯಮಟ್ಟದ ಉದ್ಯಮಿ ಆಗಿದ್ದೇನೆ ರಾಜಕೀಯ ಸಾಮಾಜಿಕ ಕೃಷಿ, ಧಾರ್ಮಿಕ ಸೇವಾ ಸಂಘಟನೆಯಲ್ಲಿ ತೊಡಗಿಸಲು ಪ್ರೇರಣೆ ಸಿದ್ದಬೈಲ್ ಪರಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗಾಗಿ ಸಂವಿಧಾನ ದಿನ ವಾದ ಗಣರಾಜ್ಯ ದಿನ ನಮ್ಮ ಶಾಲೆಗೆ ಏನಾದ್ರು ಕೊಡುಗೆ ನೀಡಬೇಕು ಎನ್ನುವ ಆಶಯ ಮತ್ತು ನಮ್ಮ ಶಾಲೆ ಸದಾ ನಮ್ಮೊಂದಿಗೆ ಉಳಿಯಬೇಕು. ಸಮಾಜದಲ್ಲಿ ಸಾಧನೆ ಮಾಡುವ ಪ್ರತಿಯೊಬ್ಬ ಸಾಧಕನ ಹಿಂದೆ ನಮ್ಮ ಸರಕಾರಿ ಕನ್ನಡ ಶಾಲೆಯ ಅಧ್ಯಾಪಕರ ಪಾತ್ರ ದೊಡ್ಡದು ಎಂದು ಹೇಳಿದರು.

ಶಾಲಾ ಸಮಿತಿಯಿಂದ ಹಳೆ ವಿದ್ಯಾರ್ಥಿ ಮೋಹನ್ ಗೌಡರ ಸಾಧನೆಗೆ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಎಲ್ಲಾ ಶಿಕ್ಷಕರು, ಶಾಲಾಭಿರುದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಊರಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಅತ್ಯುತ್ತಮ ಪ್ರವಾಸಿ ತಾಣಗಳ ಸ್ಪರ್ಧೆಯಲ್ಲಿ ಕುತ್ಲೂರಿನ ಹರೀಶ್ ಡಾಕಯ್ಯ ಮತ್ತು ಶಿವರಾಜ್ ಅಂಚನ್ ರವರಿಗೆ ಪ್ರಶಸ್ತಿ: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಗೌರರ್ವಾಪಣೆ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ನ್ಯಾಯತರ್ಪು: ಮಾದಕ ವಸ್ತು ದಿನಾಚರಣೆ ಅಂಗವಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಎಂ.ಆರ್ ಡ್ರೆಸ್ಸಸ್ ನಲ್ಲಿ ಕ್ಲಿಯರೆನ್ಸ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ. 30 ರಷ್ಟು ರಿಯಾಯಿತಿ

Suddi Udaya
error: Content is protected !!