22.9 C
ಪುತ್ತೂರು, ಬೆಳ್ತಂಗಡಿ
March 7, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಚರ್ಚ್‌ರೋಡ್ ಬಾಡಿಗೆ ಮನೆಯಲ್ಲಿದ್ದ ರೋಷನ್ ನಾಪತ್ತೆ: ಪತ್ನಿ ಠಾಣೆಗೆ ದೂರು

ಬೆಳ್ತಂಗಡಿ: ಇಲ್ಲಿಯ ಕಸಬಾ ಗ್ರಾಮದ ಚರ್ಚ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪಿಕಪ್ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದ ರೋಷನ್ ಕಿರಣ್ ಡಿಸೋಜ (೩೬ವ) ಎಂಬವರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಲಿಖಿತ ಕೆ. ಜ.26 ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಜ.24ರಂದು ರೋಷನ್ ಅವರು ಪತ್ನಿಗೆ ಕರೆ ಮಾಡಿ, ತಾನು ಜ.25ರಂದು ಬೆಂಗಳೂರಿಗೆ ಬಸ್ಸಿನಲ್ಲಿ ಬರುವುದಾಗಿ ತಿಳಿಸಿದ್ದರು. ಸಂಜೆ ೪ ಗಂಟೆಗೆ ಪತ್ನಿ ಲಿಖಿತ ಅವರು ಪತಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಸಂಜೆ ೬.೨೫ಕ್ಕೆ ರೋಷನ್ ಪತ್ನಿಯ ವಾಟ್ಸ್ಯಾಪ್‌ಗೆ `ನಾನು ಇರುವುದಿಲ್ಲ’ ಎಂದು ಮೆಸೇಜ್ ಹಾಕಿದ್ದರು. ಇದರಿಂದ ಆತಂಕಗೊಂಡ ಲಿಖಿತ ಅವರು ಗಂಡನ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಗಾಬರಿಗೊಂಡು ನೆರೆಯ ಪರಿಚಯಸ್ಥರನ್ನು ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದಿದ್ದುದರಿಂದ ಕೂಡಲೇ ಬೆಂಗಳೂರಿನಿಂದ ಹೊರಟು ಬೆಳ್ತಂಗಡಿಯ ಬಾಡಿಗೆ ಮನೆಗೆ ಬಂದು ನೋಡಿದರೂ ರೋಷನ್ ಕಿರಣ್ ಡಿಸೋಜ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಅವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ಸ್ಥಿರ ದೂರವಾಣಿ ಸಂಖ್ಯೆ (೦೮೨೫೬-೨೩೨೦೯೩) ನೇ ಅಥಾವಾ ೯೪೮೦೮೦೫೩೭೦ ನೇಯದಕ್ಕೆ ಕರೆ ಮಾಡಿ ತಿಳಿಸಿ ಕಾಣೆಯಾದವರ ಪತ್ತೆಗೆ ಸಹಕರಿಸಲು ಕೋರಿದೆ.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ

Suddi Udaya

ಮಂಗ, ಕಾಡುಹಂದಿ, ನವಿಲುಗಳ ಹಾವಳಿಯಿಂದ ಕೃಷಿ ಮತ್ತು ಫಸಲು ನಾಶದ ಬಗ್ಗೆ ಶಾಶ್ವತ ಪರಿಹಾರ ಒದಗಿಸುವಂತೆ ಅರಣ್ಯ ಸಚಿವರಿಗೆ ಬೆಳ್ತಂಗಡಿ ಅಖಿಲ ಭಾರತ ಕಿಸಾನ್ ಮಹಾಸಭಾ ವತಿಯಿಂದ ಮನವಿ ಸಲ್ಲಿಕೆ

Suddi Udaya

ಮಡಂತ್ಯಾರು ಗ್ರಾ.ಪಂ. ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಜಲ ಮೂಲ ಶುಚಿತ್ವ ಹಾಗೂ ಹಣ್ಣು ಹಂಪಲು ಗಿಡಗಳ ವಿತರಣಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಎಸ್.ಡಿ.ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಉಜಿರೆ: ರಮ್ಯಾ 1 ಗ್ರಾಮ್ ಗೋಲ್ಡ್ ಫ್ಯಾನ್ಸಿ& ಪೂಟ್ ವೇರ್ ನೂತನ ಶೋರೂಮ್ ಉದ್ಘಾಟನೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಆನಂದ ಗೌಡ ಬಿ ಆಯ್ಕೆ

Suddi Udaya
error: Content is protected !!