September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪ್ರತಿಷ್ಠಿತ ಬಿಲ್ಲವ ಗುತ್ತು ಮನೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಕರಾಯ ಗ್ರಾಮದ ಮುಗ್ಗ ಗುತ್ತು ಶ್ರೀ ದುರ್ಗಾಂಬಿಕಾ ದೇವಿಯ ವಾರ್ಷಿಕ ಪೂಜೆಯನ್ನು ಜ.28 ರಂದು ಮುಗ್ಗಗುತ್ತಿನಲ್ಲಿ ನವಕ ಪ್ರಧಾನ ಹೋಮ , ನಾಗತನುದ ತಂಬಿಲ, ವೆಂಕಟರಮಣ ದೇವರ ಮುಡಿಪು , ದೈವಗಳಿಗೆ ಪಂಚ ಪರ್ವ, ದೇವಿಗೆ ಸರ್ವಾಲಂಕಾರ ಪೂಜೆಯ ಬಳಿಕ ಆಡಳಿತ ಸಮಿತಿಯ ಸಭೆಯು ಜರಗಿ, ಡಾ ರಾಜಾರಾಮ್, ಚರಣ್, ಪ್ರಶಾಂತ್ ಬಂಗೇರ, ಹಾಗೂ ಕೀರ್ತಿ ಬಂಗೇರನ್ನು, ಸಮಿತಿಗೆ ಆಮಂತ್ರಿತರಾಗಿ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷರಾಗಿ ಆಯ್ಕೆಯಾದ ಗುತ್ತಿನ ಅಧ್ಯಕ್ಷ ಕೆ ಹರೀಶ್ ಕುಮಾರ್ ಮತ್ತು ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭಗೀರಥ ಜಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಗುತ್ತಿನ ಅಭಿವೃದ್ಧಿಯಲ್ಲಿ ಸಹಕರಿಸಿದ ಹೆರಾಜೆ ಕುಟುಂಬಸ್ಥರು, ಸರ್ವೆ ದೋಳ ಶ್ರೀಮತಿ ಅನ್ವಿತಾ ಪ್ರದೀಪ್ ಪೂಜಾರಿ, ಶ್ರೀಮತಿ ಕೀರ್ತನ ರಾಜೇಂದ್ರ ಪೂಜಾರಿ ಮೂಡಬಿದ್ರಿ ಇವರನ್ನು ಅಭಿನಂದಿಸಲಾಯಿತು.
ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಡಳಿತ ಮೊಕ್ತೇಸರ ಪೀತಾಂಬರ ಹೆರಾಜೆ, ಅಧ್ಯಕ್ಷ ಕೆ ಹರೀಶ್ ಕುಮಾರ್, ಉಪಾಧ್ಯಕ್ಷ ಎಂ ಜಗನ್ನಾಥ ಬಂಗೇರ, ಕಾರ್ಯದರ್ಶಿ ಭಗೀರಥ ಜಿ, ಜೊತೆ ಕಾರ್ಯದರ್ಶಿ ಸೋಮನಾಥ ಬಂಗೇರ, ಕೋಶಾಧಿಕಾರಿ ದಿನೇಶ್ ಪಿದಮ್ಮಲೆ, ಡಾ ರಾಜಾರಾಮ್ , ಕಮಲಾಕ್ಷ ಬೋಳಾರ, ಮಿತ್ರ ಹೆರಾಜೆ, ತುಕಾರಾಮ ಬಂಗೇರ, ನಾರಾಯಣ ಮಚ್ಚಿನ, ಹೇಮಾ ದಾಮೋದರ, ಶಾರದ ಕೃಷ್ಣ, ಜಾನಕಿ ಕೇಶವ, ನವೀನ್ ಬಂಗೇರ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Related posts

ಸುಲ್ಕೇರಿ ಶ್ರೀರಾಮ ಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 79 ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜ. 15 ರಂದು ಬಂಗೇರ ಬ್ರಿಗೇಡ್ ನಿಂದ ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಪಂದ್ಯಕೂಟ ಆಯೋಜನೆ: ಬಂಗೇರ ಬ್ರಿಗೇಡ್ ಗೌರವಾಧ್ಯಕ್ಷೆ ಪ್ರೀತಿತಾ ಬಂಗೇರರವರಿಂದ ಪತ್ರಿಕಾಗೋಷ್ಠಿ

Suddi Udaya

ಜ.6-10: ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಳೆಗನ್ನಡ ಪಠ್ಯಗಳ ಓದು ಮತ್ತು ಅರ್ಥೈಸುವಿಕೆ ಕಾರ್ಯಾಗಾರ

Suddi Udaya

ಸೆ.26: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಗವದ್ಭಕ್ತರ ಸಭೆ: ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ

Suddi Udaya
error: Content is protected !!