25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು ಗ್ರಾಮ ಪಂಚಾಯತ್ ನಲ್ಲಿ ರೈತರಿಗೆ ಒಂದು ದಿನದ ಕೃಷಿ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಇನ್ಫೋಮೇಟ್ ಫೌಂಡೇಶನ್ ಕರ್ನಾಟಕ ಹಾಗೂ ತೃಪ್ತಿ ಸಂಜೀವಿನಿ ಮಹಿಳಾ ಒಕ್ಕೂಟ, ಮತ್ತು ಗ್ರಾಮ ಪಂಚಾಯತ್, ನಾವೂರು ಇದರ ಸಹಯೋಗದಲ್ಲಿ ರೈತರಿಗೆ ಒಂದು ದಿನದ ಕೃಷಿ ತರಬೇತಿ ಕಾರ್ಯಕ್ರಮವನ್ನು ನಾವೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪಂಚಾಯತ್ ಅಧ್ಯಕ್ಷೆ ಸುನಂದಾ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಪುಷ್ಪ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೃಷಿಕ ಹಾಗೂ ತರಬೇತುದಾರ ಸುಲೈಮಾನ್ ಬೆಳಾಲು ಇವರು ಅಣಬೆ ಕೃಷಿ ,‌ ಮಲ್ಲಿಗೆ ಕೃಷಿ ಹಾಗೂ ಜೇನು ಕೃಷಿ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ತರಬೇತಿ ನೀಡಿದರು.

ಸುಮಾರು 60 ಜನ ತರಬೇತಿಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಗ್ರಾಮ ಪಂಚಾಯತ್ ಸದಸ್ಯರಾದ ಎನ್.ಕೆ ಹಸೈನಾರ್, ವೇದಾವತಿ, ಎಲ್.ಸಿ.ಆರ್. ಪಿ ಜಯಂತಿ, ಲೀಲಾವತಿ , ಪಶುಸಖಿ ತುಳಸಿ , ಕೃಷಿ ಸಖಿ ಶಕುಂತಲಾ, ತೃಪ್ತಿ, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಇನ್ಫೋಮೇಟ್ ಫೌಂಡೇಶನ್ ಕರ್ನಾಟಕ ಇದರ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಇಂದಿನ ಕಾರ್ಯಕ್ರಮದ ಮಹತ್ವ ಹಾಗೂ ಭವಿಷ್ಯದಲ್ಲಿ ಇಂತಹ ಹಲವಾರು ಮಾಹಿತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಚರ್ಚಿಸಿದರು. ಆರ್ಥಿಕ ಸಾಕ್ಷರತ ಕೇಂದ್ರದ ಉಷಾ ಕಾಮತ್ ಬ್ಯಾಂಕ್ ಅಕೌಂಟ್ ಎನ್.ಪಿಎಸ್ ಬಗ್ಗೆ ಮಾಹಿತಿ ನೀಡಿದರು. ಎಂ.ಬಿ.ಕೆ ಸೇವಿತಾ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಹಕರಿಸಿದರು.

Related posts

ಬೆಳ್ತಂಗಡಿ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಆಶ್ರಯದಲ್ಲಿ ಕೊಕ್ಕಡ ಗ್ರಾಮ ಸಮಿತಿ ಸಭೆ, ನೂತನ ಸಮಿತಿ ರಚನೆ

Suddi Udaya

ಕನ್ಯಾಡಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಕ್ಷಿತ್ ಶಿವರಾಮ್

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ಜಿಲ್ಲಾ ಮಟ್ಟದ ರಶಪ್ರಶ್ನಾ ಸ್ಪರ್ಧೆ

Suddi Udaya

ಮಿತ್ತರೋಡಿ ಪ್ರಸಾದ್ ಆಚಾರ್ಯ ರವರಿಂದ ಕಾಪಿನಡ್ಕ ಶಾಲಾ ಮಕ್ಕಳಿಗೆ ಉಚಿತ ಡ್ರಾಯಿಂಗ್ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ.92.89 ಕೋಟಿ ವಾರ್ಷಿಕ ವ್ಯವಹಾರ, ರೂ.43 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.11 ಡಿವಿಡೆಂಟ್

Suddi Udaya

ಬೆಳ್ತಂಗಡಿ ಶ್ರಮಿಕ ಕಚೇರಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಭೇಟಿ: ಶಾಸಕ ಹರೀಶ್ ಪೂಂಜರಿಂದ ಸನ್ಮಾನ

Suddi Udaya
error: Content is protected !!