September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ :ಪುದುವೆಟ್ಟು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಪುದುವೆಟ್ಟು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆ.25 ರಿಂದ ಮಾ.1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುದುವೆಟ್ಟು ವಿನ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.01 ರಂದು ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ( SNDP) ಪುದುವೆಟ್ಟು ಇಲ್ಲಿ ನಡೆಯಿತು. ಸಂಘ ದ ಅಧ್ಯಕ್ಷ ಸುರೇಶ್ ಕೇರಿಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಸದಸ್ಯ, ಬೆಳ್ತಂಗಡಿ ತಾಲೂಕಿನ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕನಿತ್ಯಾನಂದ ನಾವರ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ತಾಲೂಕಿನ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿದರು.

ವೇದಿಕೆಯಲ್ಲಿ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪುದುವೆಟ್ಟು ಇದರ ಉಪಾಧ್ಯಕ್ಷ ಅಶೋಕನ್ ಎಂ ಟಿ, ಎಸ್ ಎನ್ ಡಿ ಪಿ ಇದರ ಗೆಜ್ಜೆ ಗಿರಿ ಸಮಿತಿಯ ಅಧ್ಯಕ್ಷ ಗೋಪಿ ದಾಸ್ ಬಾರಳಿ, ಕಾರ್ಯದರ್ಶಿಯಾದ ಅನುಶ್ರೀ, ಮಾಜಿ ಅಧ್ಯಕ್ಷ ಸುಕುಮಾರನ್ ಪಿ, ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪುದುವೆಟ್ಟು ಇದರ ಪ್ರಧಾನ ಕಾರ್ಯದರ್ಶಿ ಬಿಜು ಪೂಜಾರಿ ಉಪಸ್ಥಿತರಿದ್ದರು. ಮಹೇಶ್ ಕೆ ಎಂ, ಮನೋಜ್ ಏರಳಿಕೆ, ಪುಷ್ಪಕರನ್,ಗಿರಿಜಾ ಶಿವನ್, ದಿವಿನೇಶ್, ಕೆ ಪಿ ನಾರಾಯಣ, ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರೂ, ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಇದರ ವಲಯ ಸಂಚಾಲಕರಾಗಿರುವ ಸಂತೋಷ್ ಕೆ ಸಿ ಪುದುವೆಟ್ಟು ಕಾರ್ಯಕ್ರಮವನ್ನು ಸಂಯೋಜಿಸಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಪಣಕಜೆ ಕೃಷ್ಣನಗರ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ವೇಣೂರು : ಗೋಳ್ತ್ಯಾರು ತಮ್ಮಯ್ಯ ದೇವಾಡಿಗ ನಿಧನ

Suddi Udaya

ಅರಸಿನಮಕ್ಕಿ : 33ನೇ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

Suddi Udaya

8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದ ಬೆಳ್ತಂಗಡಿ ಪೊಲೀಸರು

Suddi Udaya

ಉಜಿರೆ : ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ: ಸ್ಕೂಟರ್ ನಲ್ಲಿದ್ದ ಮಹಿಳೆಗೆ ಗಂಭೀರ ಗಾಯ

Suddi Udaya

ಉತ್ತರಖಂಡ ಹರಿದ್ವಾರ ಸಾಧನಾ ಕುಠಿರದ 8 ನೇ ವಾರ್ಷಿಕೋತ್ಸವ: ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಗಂಗಾ ಆರತಿ

Suddi Udaya
error: Content is protected !!