September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಕಿವಿ-ಮೂಗು-ಗಂಟಲು ತಪಾಸಣಾ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6 ರಂದು ಕಿವಿ-ಮೂಗು-ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಿತು.

ಉಜಿರೆಯ ಸುರಕ್ಷಾ ಮೆಡಿಕಲ್ ಮಾಲಕರಾದ ಶ್ರೀಧರ್ ಕೆ.ವಿ ಶಿಬಿರವನ್ನು ಉದ್ಘಾಟಿಸಿ ಬಳಿಕ ಮಾತನಾಡಿ ಕೆಲವು ವರ್ಷಗಳ ಹಿಂದೆ ಸಾವಿರಕ್ಕೆ 14 ಮರಣ ಪ್ರಮಾಣ ಇತ್ತು. ಇದೀಗ 6.9ಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಸುಧಾರಿತ ವೈದ್ಯಕೀಯ ಚಿಕಿತ್ಸೆ. ಉಜಿರೆ ಎಸ್.ಡಿ.ಎಂ ಆಸ್ಪತೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ದೊರೆಯುತ್ತಿದೆ. ಮಂಗಳೂರು ಬಿಟ್ಟರೆ ಸುಸಜ್ಜಿತ ಆಸ್ಪತ್ರೆಯಾಗಲಿ, ಪ್ರಯೋಗಾಲಯವಾಗಲಿ ಆಸುಪಾಸಿನಲ್ಲಿ ಇರಲಿಲ್ಲಿ. ಆ ದಿನಗಳಲ್ಲಿ ಎಷ್ಟೋ ಬಾರಿ ನಾನು ನನ್ನ ಮೆಡಿಕಲ್ ಶಾಪ್ ಮಧ್ಯರಾತ್ರಿ ತೆರೆದು ಜನರಿಗೆ ಔಷಧಿ ನೀಡಿದ್ದೇನೆ. ಪೂಜ್ಯರು ಉಜಿರೆಯಲ್ಲಿ ಎಸ್,ಡಿ.ಎಂ ಆಸ್ಪತ್ರೆಯನ್ನು ನಿರ್ಮಿಸಿದ ಬಳಿಕ ಬೆಳ್ತಂಗಡಿ ಮತ್ತು ಆಸುಪಾಸಿನ ತಾಲೂಕಿನ ಜನತೆಗೆ ಸಿಟಿ ಸ್ಕಾö್ಯನ್, ಸುಸಜ್ಜಿತ ಲ್ಯಾಬ್ ಮತ್ತು ಎಲ್ಲಾ ವೈದ್ಯಕೀಯ ಸೇವೆ ದೊರೆಯಿತು ಎಂದರು.

ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಮಾತನಾಡಿ-ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರು ಇದ್ದಾರೆ. ಮೂಳೆ ಶಸ್ತçಚಿಕಿತ್ಸಾ ವಿಭಾಗದಲ್ಲಿ 5 ಮಂದಿ ನುರಿತ ತಜ್ಞ ವೈದ್ಯರಿದ್ದು, ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ಎಲ್ಲಾ ಶಸ್ತçಚಿಕಿತ್ಸೆಗಳು ಇಲ್ಲಿ ನಡೆಸಲ್ಪಡುತ್ತಿದೆ. ತಾಲೂಕಿನಲ್ಲಿ ಮನೋರೋಗ ತಜ್ಞರು ಪ್ರತಿದಿನ ಲಭ್ಯವಿರುವ ಏಕೈಕ ಆಸ್ಪತ್ರೆ ಇದಾಗಿದೆ. ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ, ಕಿವಿ-ಮೂಗು-ಗಂಟಲು ಸಂಬಂಧಿಸಿದ ಕೆಲವೊಂದು ಶಸ್ತçಚಿಕಿತ್ಸೆಗಳನ್ನು ನಮ್ಮ ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿದ್ದು, ಜನರ ಪಾಲಿಗೆ ಈ ಆಸ್ಪತ್ರೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಕ್ರಿಟಿಕಲ್ ಕ್ಯಾರ್ ತಜ್ಞರು ಮತ್ತು ನ್ಯೂರೋ ಸರ್ಜನ್ ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಲಭ್ಯವಿರಲಿದ್ದು, ಪೂಜ್ಯ ಹೆಗ್ಗಡೆಯವರ ಆಶೀರ್ವಾದದಲ್ಲಿ ಶೀಘ್ರದಲ್ಲಿ ಎಂ.ಆರ್.ಐ ಸೇವೆ ಕೂಡ ದೊರೆಯಲಿದೆ ಎಂದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್, ಕಿವಿ-ಮೂಗು-ಗಂಟಲು ತಜ್ಞರಾದ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇವತ್ತಿನ ಶಿಬಿರದಲ್ಲಿ ಕ್ಯಾನ್ಸರ್ ಸ್ಕಿçÃನಿಂಗ್‌ಗೆ ಹೆಚ್ಚು ಮಹತ್ವ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಕ್ಯಾನ್ಸರ್ ರೋಗ ಪತೆ ಹಚ್ಚುವುದರಿಂದ ಮುಂದೆ ಸಂಭವಿಸಬಹುದಾದ ಭಯಾನಕ ತೊಂದರೆಯನ್ನು ಸುಲಭದಲ್ಲಿ ನಿವಾರಿಸಿಕೊಳ್ಳಬಹುದು. ಇದರೊಂದಿಗೆ ಈ ಶಿಬಿರದಲ್ಲಿ ಶ್ರವಣ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಕೂಡ ನಡೆಸಲಿದ್ದೇವೆ ಎಂದರು.

ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಉಪಸ್ಥಿತರಿದ್ದು, ಶಿಬಿರಕ್ಕೆ ಶುಭಹಾರೈಸಿದರು. ಸ್ಟೋರ್ ಇನ್‌ಚಾರ್ಜ್ ಜಗನ್ನಾಥ ಎಂ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್ ಎಕ್ಷಕ್ಯೂಟಿವ್ ಸುಮಂತ್ ರೈ ಸಹಕರಿಸಿದರು.

Related posts

ಎಲ್.ಸಿ.ಆರ್ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿ‌‌ ಸಂಘದ ಉದ್ಘಾಟನೆ ಹಾಗೂ ಓರಿಯೆಂಟೇಷನ್ ಕಾರ್ಯಕ್ರಮ

Suddi Udaya

ಎಲ್.ಸಿ.ಆರ್. ವಿದ್ಯಾಸಂಸ್ಥೆಯಲ್ಲಿ “ಕೆಸರು ಗದ್ದೆ- ಗ್ರಾಮ್ಯ ಗಮ್ಮತ್ತು” ಕಾರ್ಯಕ್ರಮ

Suddi Udaya

ಜೂ. 29 : ಉಜಿರೆಯಲ್ಲಿ ರೈನಾಥನ್ ಸ್ಪರ್ಧೆ, ಸಂತೋಷದಾಯಕ ಮಳೆಗಾಲದ ಓಟ: ಮಾದಕ ವ್ಯವಸನದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶವೇ ರೈನಥಾನ್-2025

Suddi Udaya

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ

Suddi Udaya

ಜೂ.21: ಗುರುವಾಯನಕೆರೆ ಅಭಯ ಆಸ್ಪತ್ರೆಯಲ್ಲಿ ಬಂಜೆತನ ತಪಾಸಣಾ ಶಿಬಿರ

Suddi Udaya
error: Content is protected !!