September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ :ವಿಶೇ‍ಷ ಚೇತನರ ಸಮನ್ವಯ ಗ್ರಾಮ ಸಭೆ: 90 ಫಲಾನುಭವಿಗಳಿಗೆ ರೂ.6.30 ಲಕ್ಷ ಆರ್ಥಿಕ ಪ್ರೋತ್ಸಾಹ ನಿಧಿ ಹಸ್ತಾಂತರ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ವಿಕಲಚೇತನರ ದಿನದ ಆಚರಣೆ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಶೇ.5 ರಲ್ಲಿ ಕಾಯ್ದಿರಿಸಿದ ಮೊತ್ತದಲ್ಲಿ 90 ಮಂದಿ ಫಲಾನುಭವಿಗಳಿಗೆ ತಲಾ 7 ಸಾವಿರ ರೂ.ಗಳಂತೆ 6.30 ಲಕ್ಷ‌ ರೂ. ಪ್ರೋತ್ಸಾಹ ನಿಧಿ ಹಸ್ತಾಂತರಿಸಲಾಯಿತು.

ಫೆ.4 ರಂದು ಇಲ್ಲಿನ‌‌ ನೇತ್ರಾವತಿ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿಮಲಾ ಅವರ ಅಧ್ಯಕ್ಷತೆಯಲ್ಲಿ‌ ಸಭೆ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ವಿಕಲಚೇತನರ ತಾಲೂಕು ಸಮನ್ವಯಾಧಿಕಾರಿ ಜೋನ್‌ ಬ್ಯಾಪ್ಟಿಸ್ಟ್ ಡಿಸೋಜಾ ಇಲಾಖಾ‌ ಮಾಹಿತಿ‌ ನೀಡಿದರು.


ಸೌಭಾಗ್ಯ ವಿಕಲಚೇತನರ ಪತ್ತಿನ‌ ಸಹಕಾರಿ ಸಂಘದ ನಿರ್ದೇಶಕ ಅಶ್ರಫ್ ಆಲಿಕುಂಞಿ ಮುಂಡಾಜೆ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ಮಾಹಿತಿ‌ ನೀಡಿದರು.


ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಸದಸ್ಯರಾದ ಮುರಳಿ ಮತ್ತು ಸುನೀತಾ ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಗಾಯತ್ರಿ ದಿನೇಶ್ ಗೌಡ ಸ್ವಾಗತಿಸಿ ಪ್ರಸ್ತಾವನೆಗೈದರು. ‌ಗ್ರಾಮೀಣ‌ ಪುನರ್ವಸತಿ ಕಾರ್ಯಕರ್ತ ಹರೀಶ್ ವರದಿ ಮಂಡಿಸಿದರು.
ಸಿಬ್ಬಂದಿ ದೇವಿಪ್ರಸಾದ್ ಬೊಳ್ಮ ಕಾರ್ಯಕ್ರಮ‌‌ ನಿರೂಪಿಸಿದರು.‌ ಕಾರ್ಯದರ್ಶಿ ಗಾಯತ್ರಿ ವಂದಿಸಿದರು.

Related posts

ಸವಣಾಲು : ಕೋಟಿ ಚೆನ್ನಯ್ಯ ಸೈಬರ್ ಸೆಂಟರ್ ಶುಭಾರಂಭ

Suddi Udaya

ಉಜಿರೆ ಶ್ರೀಧ.ಮಂ. ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya

ಕಿಯಾ ಕ್ಯಾರೆನ್ಸ್ ಕ್ಲಾವಿಸ್ ಮಾರುಕಟ್ಟೆಗೆ ಬಿಡುಗಡೆ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಪುತ್ತೂರು ಉಪ ವಿಭಾಗ ಮಟ್ಟದ ಜೀತ ಪದ್ಧತಿ ನಿರ್ಮೂಲನ ಸಮಿತಿಗೆ ಶೇಖರ್ ಲಾಯಿಲ ನೇಮಕ

Suddi Udaya

ಸ್ಫೋಟ ಪ್ರಕರಣ: ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡದಿಂದ ಸ್ಥಳ ಮಹಜರು

Suddi Udaya
error: Content is protected !!