September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾಲಾಡಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ: ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್ ಮಡಂತ್ಯಾರು ರವರ ನೇತೃತ್ವದಲ್ಲಿಹಾಗೂ ಗ್ರಾಮ ಪಂಚಾಯತ್ ಮಾಲಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ, ಯುನೈಟೆಡ್ ಮಾಲಾಡಿ, ಶ್ರೀ ಶನೈಶ್ಚರ ಪೂಜಾ ಸಮಿತಿ ಮಾಲಾಡಿ, ಮಹಮ್ಮಾಯಿ ಕಟ್ಟೆ ಫ್ರೆಂಡ್ಸ್, ಪಣಕಜೆ, ಸೋಣಂದೂರು ಸ್ಪಂದನ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ, | ಬಿಎಂ ಆಪೆ ರಿಕ್ಷಾ ಚಾಲಕ-ಮಾಲಕರ ಸಂಘ, ಮಂಡAತ್ಯಾರು, ಸ್ವರ್ಣ ಸಂಜೀವಿನಿ ಸೇವಾ ಟ್ರಸ್ಟ್ ಮಡವು, ಸೌಹಾರ್ಧ ಫ್ರೆಂಡ್ಸ್ ಮಡಂತ್ಯಾರು, ಇವರ ಸಹಕಾರದೊಂದಿಗೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಎ.ಜೆ. ದಂತ ವಿಜ್ಞಾನ ಸಂಸ್ಥೆ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇಲ್ಲಿನ ತಜ್ಞ ವೈದ್ಯರ ತಂಡದಿಂದ ಫೆ.8 ರಂದು ಮಾಲಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಜರುಗಿತು.

ಸ್ಥಳೀಯ ಸಂಸ್ಥೆ ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಶಿಬಿರ ಉದ್ಘಾಟಿಸಿ ಶುಭಕೋರಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷ ಪುನೀತ್ ಕುಮಾರ್ ಮಾತನಾಡಿ 250 ಮಂದಿಕ್ಕಿಂತ ಅಧಿಕ ಮಂದಿ ಶಿಬಿರದಲ್ಲಿ ಜನರು ನೋಂದವಾಣಿ ಮಾಡಿಕೊಂಡು ಸದುಪಯೋಗ ಪಡೆದುಕೊಂಡಿದ್ದಾರೆ ಹಾಗೂ ಕಣ್ಣಿನ ದೃಷ್ಟಿ ಸಮಸ್ಯೆವುಳ್ಳವರಿಗೆ ಉಚಿತವಾಗಿ ಕನ್ನಡಕ ನೀಡಲಾಯಿತು ಎಂದರು.

ಮಂಗಳೂರಿನ ಎಜೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸಂಸ್ಕೃತಿ ಶೆಟ್ಟಿ ಹಾಗೂ ಕ್ಯಾನ್ಸರ್ ತಜ್ಞ ಡಾ.ಕಮಲಾಕ್ಷ ಶೆಣೈ ಆರೋಗ್ಯ ಸಂರಕ್ಷಣೆಯ ಮಾಹಿತಿ ನೀಡಿದರು. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ, ಶಿಬಿರದ ಸಹಸಂಚಾಲಕ ಬೆನೆಡಿಕ್ಟ್ ಮಿರಾಂದ, ಸದಸ್ಯರಾದ ಬೇಬಿ ಸುವರ್ಣ, ಸುಧಾಕರ ಆಳ್ವ, ಉಮೇಶ್ , ಪ್ರಮುಖರಾದ ಸಚಿನ್ ಕೋಡ್ಲಕ್ಕೆ, ನಿತ್ಯಾನಂದ ಹೆಗ್ಡೆ ಸುಪದ್ಮ, ಕೇಶವ ಕೆ, ಅಬ್ದುಲ್ ರಹಿಮಾನ್ ಪಡ್ಪು, ಪ್ರೀತಮ್ ದಾಸ್, ಮೋಹನ್ ನಾಯ್ಕ್, ಜಗನ್ನಾಥ ಶೆಟ್ಟಿ, ಯ್ಯೂಟೂಬರ್ ಶ್ಯಾಮ್ ಕಾಮತ್ ಉಜಿರೆ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಸಮುದಾಯ ಆರೋಗ್ಯ ಅಧಿಕಾರಿಗಳಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ, ಪಿಡಿಓ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಪಿಡಿಒ ರಾಜಶೇಖರ್ ರೈ ಸ್ವಾಗತಿಸಿ, ಶಿಕ್ಷಕರಾದ ಸುಕೇಶ್ ಕೆ.ವಂದಿಸಿ, ರಕ್ಷಾ ನಿರೂಪಿಸಿದರು.

ನೇತ್ರ ಶಾಸ್ತ್ರಜ್ಞರು, ದಂತ ವೈದ್ಯರು, ಮೂತ್ರಶಾಸ್ತ್ರಜ್ಞರು, ಹೃದ್ರೋಗ ತಜ್ಞರು, ಸ್ತ್ರೀರೋಗ ತಜ್ಞರು, ಜನರಲ್ ಮೆಡಿಸಿನ್, ಮೂಳೆ ತಜ್ಞರು,ಕಿವಿ, ಮೂಗು ಮತ್ತು ಗಂಟಲು ತಜ್ಞರು ಶಿಬಿರದಲ್ಲಿದ್ದರು.

Related posts

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

Suddi Udaya

ತಾಲೂಕಿನ ಹಲವು ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ಆಗಿ ಉನ್ನತೀಕರಿಸುವಂತೆ ಶಾಸಕ ಹರೀಶ್ ಪೂಂಜರಿಂದ ಮನವಿ

Suddi Udaya

ಮೊಗ್ರು ಸರಕಾರಿ ಶಾಲೆಯಲ್ಲಿ ಆಂ.ಮಾ. ಶಿಕ್ಷಣ ನೀಡಲು ಅನುಮತಿ: ಟ್ರಸ್ಟ್ ನ ಪ್ರಯತ್ನ | ಶಾಸಕರ ಸಾಥ್ | ಸರಕಾರದ ನಿರ್ಧಾರ

Suddi Udaya

ಕೊಕ್ಕಡ ಬಾರ್ ನಲ್ಲಿ ಇಬ್ಬರ ಮೇಲೆ ಹಲ್ಲೆ: ಪ್ರಕರಣ ದಾಖಲು

Suddi Udaya

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ, ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ, ವೈಭವದ ಶೋಭಾಯಾತ್ರೆ, ಕುಣಿತಾ ಭಜನೆ

Suddi Udaya

ಮಲವಂತಿಗೆ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya
error: Content is protected !!