September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ

ಕಳಿಯ: ಗೇರುಕಟ್ಟೆಯ ಕ್ಷೀರ ಸಂಗಮ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು ಮಂಗಳೂರು ವಲಯ ಪುತ್ತೂರು ತಾಲೂಕು ಇದರ ವತಿಯಿಂದ ನಡೆಯುತ್ತಿರುವ ಯೋಗ ತರಬೇತಿ ಶಾಖೆಯಲ್ಲಿ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜರುಗಿತು.

ಮುಖ್ಯ ಶಿಕ್ಷಕಿ ಪ್ರೇಮಲತ ಗಣೇಶ್ ನಿತ್ಯ ಯೋಗ ಅಭ್ಯಾಸ ಮತ್ತು ಅಗ್ನಿಹೋತ್ರ ಕಾರ್ಯಕ್ರಮ ನಡೆಸಿಕೊಟ್ಟರು. ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ ಎಲ್ ಅಗ್ನಿಹೋತ್ರದ ನೇತೃತ್ವ ವಹಿಸಿದ್ದರು. ಯೋಗ ಬಂಧುಗಳಾದ ಅಶೋಕ,ನಿತಿನ್ ,ವಸಂತ, ವಿಜಯ, ಶಿವಣ್ಣ,ಕೇಶವ, ಗಣೇಶ, ಸುಕೇಶ್ ,ಸತೀಶ , ವಿಖ್ಯಾತ , ಜಗದೀಶ , ಪದ್ಮಲತ, ಅರುಣ ಭಾಗವಹಿಸಿ ಯೋಗ ಅಭ್ಯಾಸದಿಂದ ಪಡೆದ ಅನುಭವಗಳನ್ನು ತಿಳಿಸಿದರು.

ಯೋಗ ಕೇಂದ್ರದಲ್ಲಿ ನಿತ್ಯವೂ ಭಾಗವಹಿಸಿ ಶಾಖೆಯನ್ನು ನಿರಂತರವಾಗಿ ನಡೆಯುವಂತೆ ಮುಖ್ಯ ಶಿಕ್ಷಕರು ಮಾರ್ಗದರ್ಶನ ನೀಡಿದರು. ಕಳೆದೊಂದು ವರ್ಷದಲ್ಲಿ ಯೋಗ ಕೇಂದ್ರವನ್ನು ನಡೆಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಹಶಿಕ್ಷಕ ಸುಕೇಶ್ ಸ್ವಾಗತಿಸಿ, ಸತೀಶ್ ಭಂಡಾರಿ ನಾಳ ವಂದಿಸಿದರು. ಸಂಚಾಲಕರು ಮತ್ತು ವರದಿ ಪ್ರಮುಖರಾದ ವಿಜಯಣ್ಣ ಮತ್ತು ಕೇಶವಣ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದದಲ್ಲಿ ಅಮೃತ ಫಲಹಾರವನ್ನು ನಡೆಸಲಾಯಿತು.

Related posts

ಬೆಳಾಲು ಗ್ರಾಮ ಪಂಚಾಯತ್ ಜನಸ್ಪಂದನ ಸಭೆ

Suddi Udaya

ಧರ್ಮಸ್ಥಳ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶಾಲಾ ಪ್ರವೇಶ ದ್ವಾರದ ಉದ್ಘಾಟನೆ

Suddi Udaya

ಕೂಟ ಮಹಾ ಜಗತ್ತು ಬಂಟ್ವಾಳ ಅಂಗಸಂಸ್ಥೆಯ ಮಹಿಳಾ ವೇದಿಕೆಯ ರಜತ ಸಂಭ್ರಮ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ರಬ್ಬರ್ ಬೆಳೆಗಾರರಿಗೆ ಪ್ರೋತ್ಸಾಹ ಧನ ಅಥವಾ ಬೆಂಬಲ ಬೆಲೆ ನೀಡುವ ಕುರಿತು ಸಂಸದರ ಮೂಲಕ ಕೇಂದ್ರ ಕೃಷಿ ಸಚಿವರಿಗೆ ರಬ್ಬರ್ ಸೊಸೈಟಿಯಿಂದ ಮನವಿ

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya
error: Content is protected !!