ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ದೇವರ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ.12ರಿಂದ ಪ್ರಾರಂಭಗೊಂಡು ಫೆ.16ರವರೆಗೆ ನಡೆಯಲಿದೆ.

ಇಂದು ( ಫೆ.13) ಬೆಳಿಗ್ಗೆ ಗಣಹೋಮ, ಉಷಃ ಪೂಜೆ, ಬಿಂಬಶುದ್ದಿ, ಸಾನಿಧ್ಯ ಕಲಶಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾಪೂಜೆ, ತಂತ್ರಬಲಿ, ಉತ್ಸವಬಲಿ ಹಾಗೂ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು ಯಶೋಧರ ವಳಸರಿ, ಆಡಳಿತ ಮಂಡಳಿಯವರು, ಅರ್ಚಕರು, ವಿಲಯದವರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ರಾತ್ರಿ ರಂಗ ಪೂಜೆ, ಉತ್ಸವ ಬಲಿ, ನೃತ್ಯ ಬಲಿ, ಶ್ರೀ ಶಾರದ ಆರ್ಟ್ಸ್ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಪೌರಾಣಿಕ ನಾಟಕ ಭಜರಂಗ ಬಲಿ ನಡೆಯಲಿದೆ.











