
ಬಳಂಜ: ಬೊಳ್ಳಾಜೆ-ಡೆಂಜೋಲಿ- ಗರ್ಡಾಡಿ ರಸ್ತೆಯು ರೂ 2.00 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಶಾಸಕ ಹರೀಶ್ ಪೂಂಜರವರು ಕಾಮಗಾರಿಯನ್ನು ಫೆ 16ರಂದು ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಈ ರಸ್ತೆಯ ಕಾಮಗಾರಿ ಪ್ರಾರಂಭಗೊಂಡಿದೆ.ಐದೂವರೆ ಮೀಟರ್ ಅಗಲದ ವ್ಯವಸ್ಥಿತ ರಸ್ತೆ ನಿರ್ಮಾಣವಾಗಲಿದ್ದು ಶೀಘ್ರದಲ್ಲಿ ಉದ್ಘಾಟನೆ ನಡೆಸಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ಈ ರಸ್ತೆಯು ತೀರ ಹದಗೆಟ್ಟಿದ್ದು ಇದನ್ನು ದುರಸ್ತಿಗೊಳಿಸಬೇಕೆಂಬುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿತ್ತು. ಈ ಭಾಗದಲ್ಲಿ ನೂರಾರು ಮನೆಗಳಿದ್ದು ದಿನನಿತ್ಯ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕೃಷಿಕರು ಬೇರೆ ಕಡೆಗೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದರು. ಇದೀಗ ರಸ್ತೆ ಕೆಲಸ ಪ್ರಾರಂಭಗೊಂಡಿದ್ದರಿಂದ ಈ ಪ್ರದೇಶದ ಜನರಿಗೆ ಪ್ರಯೋಜನವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕರುಣಾಕರ ಹೆಗ್ಡೆ,ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಜೈಮಾತ,ಬಳಂಜ ಗ್ರಾ.ಪಂ ನಿಕಟಪೂರ್ವಾಧ್ಯಕ್ಷೆ ಶೋಭಾ ಕುಲಾಲ್, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಪೂಜಾರಿ,ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್, ಗರ್ಡಾಡಿ ಶಕ್ತಿಕೇಂದ್ರದ ಅಧ್ಯಕ್ಷ ದಿನಕರ ಕುಲಾಲ್, ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ, ರಂಜಿತ್ ಪೂಜಾರಿ ಮಜಲಡ್ಡ,ವಸಂತ ಶೆಟ್ಟಿ ರಾಮನಗರ, ಹರೀಶ್ ವೈ,ಕೃಷ್ಣಪ್ಪ ಪೂಜಾರಿ ಗರ್ಡಾಡಿ, ಸಂದೇಶ್ ಪೊನ್ನೆದಕಲ, ದಿನೇಶ್ ಕೋಟ್ಯಾನ್ ಕುದ್ರೋಟ್ಟು,ವಸಂತ ಪೂಜಾರಿ,ಪದ್ಮನಾಭ ಕುಲಾಲ್,ಸುದೀಶ್ ಅಂತರ,ಪ್ರಣೀತ್ ಹೇರ ಮೊದಲಾದವರು ಉಪಸ್ಥಿತರಿದ್ದರು.











