32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮುಗೇರಡ್ಕ ದೈವಸ್ಥಾನ ವತಿಯಿಂದ ಅಲೆಕ್ಕಿ ಶಿಶುಮಂದಿರಕ್ಕೆ ಧನ ಸಹಾಯ

ಬೆಳ್ತಂಗಡಿ : ಮೊಗ್ರು ಗ್ರಾಮದ ಮೂವರು ದೈವಗಳ ದೈವಸ್ಥಾನ ಮುಗೇರಡ್ಕದ ವತಿಯಿಂದ  ಮೊಗ್ರು ಗ್ರಾಮದ ಅಲೆಕ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಶಿಶು ಮಂದಿರದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು  ಎಂದು ರೂ. 50000 ದೇಣಿಗೆಯನ್ನು ನೀಡಲಾಯಿತು.

ಮುಗೇರಡ್ಕ ಜಾತ್ರೆಯು ಈ ವರ್ಷ ಜನವರಿ ತಿಂಗಳಲ್ಲಿ ನಡೆದು ಫೆಬ್ರವರಿ ತಿಂಗಳ ಸಂಕ್ರಮಣ ದಿನ ಸ್ವಯಂ ಸೇವಕರಿಗೆ ಅಭಿನಂದನೆ ಮತ್ತು ಲೆಕ್ಕಾಚಾರ ವರದಿ ಮಂಡನೆ ಸಂದರ್ಭದಲ್ಲಿ ಅಲೆಕ್ಕಿ ಶಿಶು ಮಂದಿರದ ಸೇವೆಯನ್ನು ಮನಗಂಡು ಇನ್ನೂ ಹೆಚ್ಚಿನ ಸನಾತನ ಹಿಂದೂ ಸಂಸ್ಕಾರ ಶಿಕ್ಷಣ ನೀಡಲು ಅನುಕೂಲವಾಗಲು ಈ ಮೊತ್ತವನ್ನು ದೈವದ ಪ್ರಸಾದ ಎಂದು ದೈವಸ್ಥಾನ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಗುತ್ತು ಮನೆ ದೇವಸ್ಯ ರಾಮಣ್ಣ ಗೌಡ ಅಂತರ ಮನೋಹರ್, ಸುಧಾಕರ್ ನ್ಯಾಮರ್, ಬಾಬು ಗೌಡ ಮುಗೇರಡ್ಕ, ಚಂದ್ರಹಾಸ ದೇವಸ್ಯ,ಎರ್ಮಲ  ರಾಮಣ್ಣ ಗೌಡ,ಉಮೇಶ್ ಪರಕಜೆ, ಜಿನ್ನಪ್ಪ ಗೌಡತಿಗೆ, ಕೇಶವ ಜಾಲ್ನಡೆ, ಹಾಗು  ಜೈ ಶ್ರೀರಾಮ ಶಿಶು ಮಂದಿರದ ಅಧ್ಯಕ್ಷರು ಆದ ಅಶೋಕ್ ಬಿ, ರಮೇಶ್ ನೆಕ್ಕರಾಜೆ ಭರತ್ ಜಾಲ್ನಡೆ, ವರುಣ್ ನೆಕ್ಕರಾಜೆ ಮೊದಲದವರು ಉಪಸ್ಥಿತರಿದ್ದರು.

ಅಲೆಕ್ಕಿ ಶಿಶು ಮಂದಿರದ ನಿರ್ಮಾಣ ಸಮಯದಲ್ಲಿ ಇದೇ ರೀತಿಯ ದೊಡ್ಡ ಮೊತ್ತದ ದೇಣಿಗೆ, ಶಿಶು ಮಂದಿರಕ್ಕೆ LED tv ಮತ್ತು DTH ಕೊಡುಗೆ ಹಾಗೇನೇ ಅನ್ನಯಜ್ಞ ಕ್ಕೆ ಪೂರಕವಾಗಿ ದೈವದ ಗದ್ದೆ ನೀಡಿದ ಮತ್ತು ಈ ವರ್ಷ ನೀಡಿದ ದೇಣಿಗೆಗೆ  ದೈವಸ್ಥಾನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅಶೋಕ್ ಬರುoಗುಡೆಲ್ ಅಧ್ಯಕ್ಷರು ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಈ ಸಂದರ್ಭದಲ್ಲಿ ತಿಳಿಸಿದರು.

Related posts

ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದು ಹಿಂದಕ್ಕೆ ಕಳುಹಿಸಿದ ಪೊಲೀಸರು

Suddi Udaya

ಬೆಳ್ತಂಗಡಿ: 51 ನಾಯಿ ಮರಿಗಳು, 32 ಬೆಕ್ಕು ಮರಿಗಳ ದತ್ತು ಸ್ವೀಕಾರ

Suddi Udaya

ಎಸ್ ಡಿ ಯಂ ಆಂ.ಮಾ. ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ನಡೆಯುವ ಕರಾಟೆ ತರಬೇತಿ ವಿದ್ಯಾರ್ಥಿಗಳಿಗೆ ಬೆಲ್ಟ್ ಪ್ರಮೋಷನ್ ಪರೀಕ್ಷೆ

Suddi Udaya

ನೆರಿಯ: ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

Suddi Udaya

ಡಿ. 23-24: ಗುರುವಾಯನಕೆರೆ ಎಕ್ಸೆಲ್ ಪಿ ಯು ಕಾಲೇಜಿನಲ್ಲಿ “ಎಕ್ಸೆಲ್ ಪರ್ಬ”

Suddi Udaya

ಜೆ ಇ ಇ ಮೈನ್ಸ್ – 2: ಎಕ್ಸೆಲ್ ಗುರುವಾಯನಕೆರೆ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

Suddi Udaya
error: Content is protected !!