September 6, 2026
Uncategorized

ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ಭವ್ಯ ಮೆರವಣಿಗೆಯೊಂದಿಗೆ ಹಸಿರು ಹೊರೆಕಾಣಿಕೆ ಸಮರ್ಪಣೆ

ಉರುವಾಲು: ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿರುವ ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾರಿಂಜದಲ್ಲಿರುವ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ಸ್ವಾಮಿ ದೇವರ ಸಾನಿಧ್ಯದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದಗಳೊಂದಿಗೆ ಫೆ.20ರಿಂದ 22ರ ವರೆಗೆ ನಡೆಯಲಿರುವ ದೇವರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಶುಕ್ರವಾರ(ಫೆ.೨೦) ಚಾಲನೆ ನೀಡಲಾಯಿತು.

ವೇಣೂರು ಕುಂಞಡಿ ವೇದಮೂರ್ತಿ ಶ್ರೀ ಕೆ.ಲಕ್ಷ್ಮೀ ನಾರಾಯಣ ಕಾರಂತರ ಅವರ ನೇತೃತ್ವದಲ್ಲಿ ದೇವರ ಪ್ರಾಥನೆ ನಡೆಸುವುದರೊಂದಿಗೆ ವಿವಿಧ ವೈದಿಕ, ಧಾರ್ಮಿಕ, ಸಂಸ್ಕೃತಿ ಕಾರ್ಯಕ್ರಮಗಳು ನೆರವೇರಿತು.
ಬೆಳಗ್ಗೆ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ, ಸ್ವಸ್ತಿ ವಾಚನ, ಸಾಮೂಹಿಕ ಪ್ರಾರ್ಥನೆ ತೋರಣ ಮುಹೂರ್ತ ಉಗ್ರಾಣ ಮುಹೂರ್ತ, ಭಜನೆ, ಪಂಚಗವ್ಯ, ಖನನಾದಿ, ಸಪ್ತಶುದ್ಧಿ, ಸ್ವಸ್ತಿಪುಣ್ಯಾಹವಾಚನ, ಗಣಪತಿ ಹವನ, ಶಿಲ್ಪಿಗಳಿಂದ ಆಲಯ ಪರಿಗ್ರಹ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಹೊರೆಕಾಣಿಕೆ ಮೆರವಣಿಗೆ:
ದೇವಸ್ಥಾನದ ಮುಖ್ಯದ್ವಾರದ ಬಳಿ ಭವ್ಯ ಹೊರೆಕಾಣಿಕೆ ಮೆರೆವಣಿಗೆಗೆ ಸಂಜೆ ಉಪ್ಪಿನಂಗಡಿ ಮಾಣಿಮಾರ್ ಸಚಿನ್ ಬೇಕ್ ಆ್ಯಂಡ್ ಐಸ್‌ಕ್ರೀಮ್ ಸಿಇಒ ಸಚಿನ್ ಎ.ಎಸ್. ಚಾಲನೆ ನೀಡಿದರು. ಬಳಿಕ ವಿವಿಧೆಡೆಯಿಂದ ಆಗಮಿಸಿದ ಹಸಿರು ಹೊರೆಕಾಣಿಕೆ ಇಳಂತಿಲದ ವಾಣಿಶ್ರೀ ಭಜನಾ ಮಂದಿರದ ಬಳಿ ಸಂಗಮಗೊಂಡು ಭವ್ಯ ಮೆರವಣಿಗೆ ಮೂಲಕ ಬ್ಯಾಂಡ್, ವಾದ್ಯಗಳ ವಾದನದೊಂದಿಗೆ ಹಲವಾರು ವಾಹನಗಳಲ್ಲಿ ಹಸಿರು ಹೊರೆಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಸಾಗಿತು.

ಅಪರಾಹ್ನ ೩ರಿಂದ ಪಶುದಾನ ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತು ಕಲಶಪೂಜೆ, ರಕ್ಷಾ ಕಲಶಪೂಜೆ, ವಾಸ್ತುಬಲಿ, ದಿಕ್ಷಾಲ ಬಲಿ, ವಾಸ್ತುಕಲಶಾಭಿಷೇಕ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಾರ್ಯಾಲಯವನ್ನು ಜರ್ನಾಧನ ಪೂಜಾರಿಕಡ್ತಿಲ ಹಾಗೂ ಉಗ್ರಾಣವನ್ನು ಕಣಿಯೂರು ರೈತಬಂಧು ಆಹಾರೋಧ್ಯಮ ಮಾಲಕ ಶಿವಶಂಕರ್ ನಾಯಕ್, ಕರಾಯ ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಶೆಟ್ಟಿ ಮ್ಮೆರ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು.

ಕ್ಷೇತ್ರದ ಮುಖ್ಯ ಮಹಾದ್ವಾರವನ್ನು ಉಪ್ಪಿನಂಗಡಿ ಶ್ರೀ ಮಾತ ಸಚಿನ್ ಉದ್ಘಾಟಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ, ಕಾರ್ಯಾಧ್ಯಕ್ಷ ಸುನೀಲ್ ಅಣವು, ಕಾರ್ಯದರ್ಶಿ ಸುಂದರ ಶೆಟ್ಟಿ ಎಂಜಿರಪಲ್ಕೆ, ಕೋಶಾಧಿಕಾರಿ ಗೋಪಾಲಕೃಷ್ಣ ಗೌಡ ಅಲೈಮಾರು, ಉರುವಾಲು ಕಾರಿಂಜ ಶ್ರೀ ವನಶಾಸ್ತಾರ ಶ್ರೀ ವೀರಭದ್ರ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಕೊರಗಪ್ಪ ಪೂಜಾರಿ ಕಾರಿಂಜ, ಕಾರ್ಯದರ್ಶಿ ಧರ್ಣಪ್ಪ ನಾಯ್ಕ ಆನಡ್ಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಅಧ್ಯಕ್ಷ ದಾಸಪ್ಪ ಗೌಡ ನಾಗಶ್ರೀ, ಕೋಡ್ಯಡ್ಕ, ಕಾರ್ಯಾಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ, ಸತೀಶ್ ಸಾಲ್ಯಾನ್ ಪಿಲಿಕಲ್ಲು, ಕೋಶಾಧಿಕಾರಿ ದುಗ್ಗಪ್ಪ ಗೌಡ ಮಣೆಗಾರಮಜಲು, ಹೊರೆಕಾಣಿಕೆ ಸಮಿತಿ ಸಂಚಾಲಕ ಪ್ರಭಾಕರ ಗೌಡ, ಪ್ರಮುಖರಾದ ರವಿ ಇಳಂತಿಲ, ಬಾಲಕೃಷ್ಣ ಮೊಗ್ರು ಸಹಿತ ಮುತ್ತಿತರರು ಉಪಸ್ಥಿತರಿದ್ದರು. ರಾತ್ರಿ ಗೆಂದಗಿಡಿ ನಾಟಕ ಪ್ರದರ್ಶನ ಗೊಂಡಿತು.

Related posts

ಚಾರ್ಮಾಡಿ ಸ.ಹಿ.ಉ.ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಕ್ವಿಜ್ ಸ್ಪರ್ಧೆ: ನಾರಾವಿಯ ಸಂತ ಅಂತೋನಿ ಪದವಿ ಕಾಲೇಜಿಗೆ ಪ್ರಶಸ್ತಿ

Suddi Udaya

ದೇಶಭಕ್ತಿ ಗೀತೆ ಸ್ಪರ್ಧೆ: ಉಜಿರೆ ಶ್ರೀ. ಧ. ಮಂ ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಪಟ್ರಮೆ: ಬಲ್ಲಿದಡ್ಡ ನಿವಾಸಿ ಸುರೇಶ್ ಗೌಡ ಆತ್ಮಹತ್ಯೆ ಶಂಕೆ

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ: ಭಾಷಣ ಸ್ಪರ್ಧೆಯಲ್ಲಿ ಕು. ಕನ್ನಿಕಾರಿಗೆ ದ್ವಿತೀಯ ಸ್ಥಾನ

Suddi Udaya

ಪುತ್ತೂರು ಅಕ್ಷಯ ಕಾಲೇಜಿನ ಅಟರ್ನಸ್- 2024 ಫೆಸ್ಟ್ ನಲ್ಲಿ ವಾಣಿ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!