September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ, ಮತ್ತು ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿ, ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ಫೆ. 19 ರಂದು ಎಸ್.ಡಿ.ಎಂ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಆಸ್ಪತ್ರೆ, ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಉದ್ದೇಶ ಅತಿಸ್ಥೂಲ (Obesity) ಸಮಸ್ಯೆಯನ್ನು ಔಷಧ ರಹಿತ, ವೈಜ್ಞಾನಿಕ ಹಾಗೂ ಸಮಗ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಯ ಮೂಲಕ ನಿಯಂತ್ರಿಸುವುದು. ಕಾರ್ಯಕ್ರಮದಲ್ಲಿ ಚಿಕಿತ್ಸಾ ಆಹಾರ ಪದ್ಧತಿ, ಯೋಗಾಭ್ಯಾಸ, ಜಲಚಿಕಿತ್ಸೆ, ಮಣ್ಣು ಚಿಕಿತ್ಸೆ, ಉಪವಾಸ ಚಿಕಿತ್ಸೆ ಹಾಗೂ ಜೀವನಶೈಲಿ ಪರಿವರ್ತನೆ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸಾಧಕರನ್ನು ಉದ್ದೇಶಿಸಿ ಮಾತನಾಡಿ, ಅತಿಸ್ಥೂಲ ನಿಯಂತ್ರಣ ಚಿಕಿತ್ಸಾ ಶಿಬಿರಕ್ಕೆ ಮಾಹಿತಿಯನ್ನು ನೀಡಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ. ಬಿಂದು ಶ್ರೀಧರ್ ಕಾರ್ಯಕ್ರಮದ ಚಿಕಿತ್ಸಾ ಕ್ರಮಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು.
ಕಾರ್ಯಕ್ರಮವನ್ನು ಆಹಾರ ಮತ್ತು ಪೋಷಣಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಡೀನ್ ಡಾ. ಗೀತಾ ಬಿ. ಶೆಟ್ಟಿ ಸಂಯೋಜಿಸಿದ್ದು. ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ವರ್ಷದ ಎಂ.ಡಿ (ಡಯಟ್ ಅಂಡ್ ನ್ಯೂಟ್ರಿಷನ್) ವಿದ್ಯಾರ್ಥಿನಿ ಡಾ. ಭಾಷಿಣಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಯೋಗಿಕ ತರಗತಿಗಳು, ತಜ್ಞರ ಉಪನ್ಯಾಸಗಳು, ನೈಸರ್ಗಿಕ ಚಿಕಿತ್ಸೆಗಳು ಹಾಗೂ ವೈಯಕ್ತಿಕ ಆಹಾರ ಸಲಹೆಗಳು ನಡೆಯಲಿವೆ.

Related posts

ಬೆಳ್ತಂಗಡಿ: ಜೆಪಿ ಅಟ್ಯಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಭೇಟೆ – ಕೊವಿ ಸಹಿತ ಮೂವರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಅರಣ್ಯ ಇಲಾಖೆ

Suddi Udaya

ವೇಣೂರು ಐಟಿಐ ಕಾಲೇಜಿನಲ್ಲಿ ಯುವ ಮತ್ತು ಭವಿಷ್ಯದ ಮತದಾರರೊಂದಿಗೆ ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ ಸಂವಾದ

Suddi Udaya

ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ರವರ ನೇತೃತ್ವದಲ್ಲಿ ಮುದರಂಗಡಿಯಲ್ಲಿ ಸನ್ಮಾನ

Suddi Udaya

ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ಶೇಖರ್ ಗೌಡ ದೇವಸ ಸವಣಾಲು ನೇಮಕ

Suddi Udaya
error: Content is protected !!