25.7 C
ಪುತ್ತೂರು, ಬೆಳ್ತಂಗಡಿ
March 7, 2026
ಧಾರ್ಮಿಕವರದಿ

ಪದ್ಮುಂಜ: ಮಾ.1-6 : ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ – ಹರೀಶ್ ಪೂಂಜ ಪತ್ರಿಕಾಗೋಷ್ಠಿ

ಬೆಳ್ತಂಗಡಿ:  300 ವರ್ಷಗಳ ಇತಿಹಾಸವುಳ್ಳ 500 ಅಡಿ ಎತ್ತರದ ಎಕಶಿಲೆ ಮೇಲೆ ದಂಪತಿ ಸಮೇತ ( ಶಿವ- ಪಾರ್ವತಿ) ನೆಲೆಸಿರುವ ತಾಲೂಕಿನ ಪದ್ಮುಂಜದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ  ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ  ಡಾ॥ ಡಿ. ವೀರೇಂದ್ರ ಹೆಗ್ಗಡೆಯವರು  ಮಾರ್ಗದರ್ಶನ ದೊಂದಿಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.1 ರಿಂದ 6 ರವರೆಗೆ ನಡೆಯಲಿರುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಸೋಮವಾರ ಮಲೆಂಗಲ್ಲು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅನುವಂಶೀಯ ಆಡಳಿತ ಮೊಕ್ತೇಸರಾದ ಚಿದಾನಂದ ರಾವ್ ಕೊಲ್ಲಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ, ಕಾರ್ಯದರ್ಶಿ ಜಿತೇಶ್ ಜೈನ್, ಕೋಶಾಧಿಕಾರಿ ರಕ್ಷಿತ್ ಪಣೆಕ್ಕರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠ್ಠಲ ಶೆಟ್ಟಿ ಕೊಲ್ಲೊಟ್ಟು, ಕಲಶ ಸಮಿತಿ ಸಂಚಾಲಕಿ ಶಾರದಾ ಆರ್ ರೖ ಮುಗೆರೋಡಿ ಹಾಗೂ ಪ್ರಚಾರ ಸಮಿತಿ ಸಂಚಾಲಕ ಪ್ರದೀಪ್ ಶೆಟ್ಟಿ ಮಲೆಂಗಲ್ಲು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೊತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಗೌಡ ಮುಚ್ಚೂರು ಸ್ವಾಗತಿಸಿದರು.

Related posts

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

Suddi Udaya

ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ಸಭೆ

Suddi Udaya

ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮ ಸಭೆ

Suddi Udaya

ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅಂತರಿಕ ಕಚ್ಚಾಟ ಬಹಿರಂಗ: ಬೂತುಗಳಲ್ಲಿ ಹಣ ಸಮರ್ಪಕವಾಗಿ ನಿರ್ವಹಣೆಯಾಗಿಲ್ಲ ಎಂದು ಹೇಳಿದ ಕಾರ್ಯಕರ್ತನನ್ನು ತಡೆದ ಬಂಗೇರ: ಬಂಗೇರ ಮಾತನ್ನು ವಿರೋಧಿಸಿ, ಸಭೆಯಿಂದ ಹೊರ ನಡೆದ ಪತ್ರಕರ್ತರು

Suddi Udaya

ಮಚ್ಚಿನ ಸ.ಪ್ರೌ. ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ

Suddi Udaya

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya
error: Content is protected !!