ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿದ್ಯಾರ್ಥಿ ವೇತನ ವೃದ್ಧಾಪ್ಯ ಪಿಂಚಣಿ, ಮರಣ ಮತ್ತು ಇತರ ಸಹಾಯಧನಗಳ ಪಾವತಿ ಆಗದ ದೂರಿನ ಕುರಿತು ಕಾರ್ಮಿಕರ ಕುಂದು ಕೊರತೆ ಸಭೆಯನ್ನು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿತ್ತು. ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಹಾಗೂ ಬೆಳ್ತಂಗಡಿ ಪ್ರಭಾರ ಕಾರ್ಮಿಕ ನಿರೀಕ್ಷಕರಾದ ವೀರೇಂದ್ರ ಕಂಬಾರ್ ಉಪಸ್ಥಿತರಿದ್ದರು.

ಹಲವಾರು ಕಾರ್ಮಿಕರು ವ್ರದ್ಧಾಪ್ಯ ಪಿಂಚಣಿ, ಮದುವೆ , ಮರಣ ಸಹಾಯಧನ, ಕುಟುಂಬ ಪಿಂಚಣಿ ಹಾಗೂ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಬರದಿರುವ ಕುರಿತು ಕಾರ್ಮಿಕರು ಶಾಸಕರಲ್ಲಿ ದೂರು ನೀಡಿದರು. ಈ ಸಂದರ್ಭ ವಿವರವಾಗಿ ಶಾಸಕರು ಈ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಪರಿಹಾರವನ್ನು ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಬಿಎಂಎಸ್ ನ ರಾಜ್ಯ ಕಾರ್ಯದರ್ಶಿ ಜೈ ರಾಜ್ ಸಾಲಿಯಾನ್ ಕಾನರ್ಪ, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ತಾಲೂಕು ಅಧ್ಯಕ್ಷ ಉದಯ ಬಿಕೆ, ತಾಲೂಕು ಸಂಯೋಜಕ ಶಾಂತಪ್ಪ ಕಲ್ಮಂಜ, ಬಿಎಂಎಸ್ ಪ್ರಮುಖರಾದ ಗಣೇಶ್ ಪೂಜಾರಿ ಪೆರಾಡಿ, ಉದಯ್ ಕುಮಾರ್ ಉಜಿರೆ ಹಾಗೂ ಇನ್ನಿತರ ಕಾರ್ಮಿಕರು ಉಪಸ್ಥಿತರಿದ್ದರು.











