September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಬಿಹಾರದ ಆರೋಪಿಯನ್ನು ಹೆಡೆಮುರಿ ಕಟ್ಟಿದ ವೇಣೂರು ಪೊಲೀಸರು

ಬೆಳ್ತಂಗಡಿ : ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ಚಿನ್ನವನ್ನು ಪಡೆದು ರಾಸಾಯನಿಕ ಬಳಸಿ ಕರಗಿಸಿ ತೆಗೆದುಕೊಂಡುಹೋಗಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ವೇಣೂರು ಪೊಲೀಸರು 18 ದಿನದಲ್ಲಿಯೇ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಮಹಿಳೆಯೊಬ್ಬರ ಮನೆಗೆ ಸೇಲ್ಸ್ ಮ್ಯಾನ್ ರೂಪದಲ್ಲಿ ಆಗಮಿಸಿ ಚಿನ್ನ ದ ಒಡವೆಗಳನ್ನು ತೊಳೆದಯ ಪಾಲಿಶ್ ಮಾಡಿಕೊಡುವ ನೆಪದಲ್ಲಿ ಚಿನ್ನವನ್ನು ಫೆ.10 ರಂದು ಪಡೆದು ಕರಗಿಸಿ ವಂಚನೆ ಮಾಡಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ಆರೋಪಿ ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ತ್ರಿವೇಣೆಗಂಝ್ ತಾಲೂಕಿನ ರಘನಾಥಪುರ ಗ್ರಾಮದ ವಾರ್ಡ್ ನಂಬರ್ 5 ರ ನಿವಾಸಿ ಸೂರಜ್ ದೇವ್ ಮಂಡಲ್ ಮಗನಾದ ಚಂದನ್ ಕುಮಾರ್(30) ಎಂಬಾತನನ್ನು ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಮತ್ತು ಸಬ್ ಇನ್ಸ್‌ಪೆಕ್ಟರ್ ಓಮನ ಎನ್ ನೇತೃತ್ವದ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಸಾಕ್ಷಿದಾರಗಳನ್ನು ಕಲೆ ಹಾಕಿ ಮಂಗಳೂರು ನಗರದ ಮೂಡಬಿದಿರೆ ತಾಲೂಕಿನ ಗಂಟಲ್ಕಟ್ಟೆ ಎಂಬಲ್ಲಿ ಫೆ.28 ರಂದು ಮಧ್ಯಾಹ್ನ 2 ಗಂಟೆಗೆ ಬಂಧಿಸಿದ್ದಾರೆ.

ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದ ಪಣಿಲಾಜೆ ರುಕ್ಮಿಣಿ ಶೆಟ್ಟಿ ಗಾರ್ ಎಂಬವರ ಮನೆಗೆ ಫೆ.10 ರಂದು ಅಪರಿಚಿತ ವ್ಯಕ್ತಿಯೊಬ್ಬ ಸೇಲ್ಸ್ ಮ್ಯಾನ್ ರೂಪದಲ್ಲಿ ಬಂದು ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ಹೇಳಿದಾಗ ಕುಕ್ಮಿಣಿಯವರು ಮನೆಯ ಲಾಕರ್ ನಲ್ಲಿದ್ದ 25 ಸಾವಿರ ಮೌಲ್ಯದ ಲಕ್ಷ್ಮೀ ಪೆಂಡೆಂಟ್ ಇರುವ 2.3/4 ಪವನ್ ಚಿನ್ನವನ್ನು ಕೊಟ್ಟಾಗ ಮಗ್ ಒಂದರಲ್ಲಿ ನೀರನ್ನು ತೆಗೆದುಕೊಂಡು ಬಂದು ಬ್ರೇಷ್ ಮೂಲಕ ತೊಳೆಯುವಂತೆ ನಟಿಸಿ ಪೇಪರ್ ಒಂದರಲ್ಲಿ ಚಿನ್ನವನ್ನು ವಾಪಸ್ ಕಟ್ಟಿ ಫ್ಯಾನ್ ಗಾಳಿಗೆ ಇಟ್ಟು ಒಣಗಿಸುವಂತೆ ಹೇಳಿ ಕೊಟ್ಟು ಹೋಗಿದ್ದು‌‌.ಬಳಿಕ ಬಿಚ್ಚಿ ನೋಡಿದಾಗ ಅರಶಿನ ಪುಡಿಯಂತೆ ಕಾಣುವ ಯಾವುದೋ ಅದರದಲ್ಲಿ ಚಿನ್ನದ ಸರದ ಸಣ್ಣ ಸಣ್ಣ ತುಂಡುಗಳು ಹಾಗೂ ತ್ರಾಮ ಬಣ್ಣಕ್ಕೆ ತಿರುಗಿದ ಲಕ್ಷ್ಮೀ ಪೆಂಡೆಂಟ್ ಮಾತ್ರವೇ ಇತ್ತು. ಆರೋಪಿ ಯಾವುದೋ ರಾಸಾಯನಿಕ ವಸ್ತು ಬಳಸಿ ಚಿನ್ನವನ್ನು ಕರಗಿಸಿ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ವೇಣೂರು ಪೊಲೀಸ್ ಠಾಣೆಯಲ್ಲಿ ಫೆ.10 ರಂದು ದೂರು ನೀಡಿದ್ದು ಅದರಂತೆ ಪೊಲೀಸರು ತನಿಖೆ ನಡೆಸಿ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಮಾರ್ಗದರ್ಶನದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಮತ್ತು ಸಬ್ ಇನ್ಸ್‌ಪೆಕ್ಟರ್ ಓಮನ.ಎನ್ ನೇತೃತ್ವದ ಸಿಬ್ಬಂದಿ ಎಎಸ್ಐ ವೆಂಕಟೇಶ್ ನಾಯ್ಕ್, ಎಎಸ್ಐ ಬೆನ್ನಿಚ್ಚನ್ , ಕೃಷ್ಣ, ಕೇಶವತಿ, ಬಸವರಾಜ್, ಮೋಹನ್, ರಾಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಚಂಡಿಕಾ ಹೋಮ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಬಿಸಿಯೂಟ ಸಿಬ್ಬಂದಿಗಳ ಮುಷ್ಕರದ ಹಿನ್ನಲೆ: ವಿದ್ಯಾರ್ಥಿಗಳಿಗೆ ಮನೆಯಿಂದಲೇ ಊಟದ ವ್ಯವಸ್ಥೆ ಕಲ್ಪಿಸಿದ ಸಮಾಜಸೇವಕ ಸಂತೋಷ್ ನಿನ್ನಿಕಲ್ಲು

Suddi Udaya

ಎಸ್ ಕೆ ಎಸ್ ಎಸ್‌ ಎಫ್ ಮದ್ದಡ್ಕ ಶಾಖೆಯ ವತಿಯಿಂದ ಕುವೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಣೆ

Suddi Udaya

ಕುವೆಟ್ಟು: ಶಕ್ತಿನಗರದ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ

Suddi Udaya

ಮಾರ್ಗ ಮಧ್ಯೆ ಕೈಕೊಡುವ ಕೆ.ಎಸ್.ಆರ್.ಟಿ.ಸಿ : ಒಂದೇ ದಿನದಲ್ಲಿ ಆರು ಕಡೆಗಳಲ್ಲಿ ಕೆಟ್ಟು ನಿಂತ ಸಾರಿಗೆ ಬಸ್

Suddi Udaya

ರಾಜ್ಯ ಮಟ್ಟದ ಸ್ಕೂಲ್ ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ : ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿನಿ ಪ್ರಥಮ

Suddi Udaya
error: Content is protected !!