July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶ

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶವು ಮಾ.1ರಂದು ಬದ್ಯಾರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಬೆಳ್ತಂಗಡಿ ವಲಯ ಮಟ್ಟದ ಧರ್ಮಗುರುಗಳಾದ ವಂ.ಫಾ.ವಾಲ್ಟರ್ ಡಿಮೆಲ್ಲೊ, ಬೆಳ್ತಂಗಡಿ ವಲಯದ ನಿರ್ದೇಶಕ ವಂ.ಫಾ.ಆಬೆಲ್ ಲೋಬೊ, ಬದ್ಯಾರ್ ಚರ್ಚಿನ ಧರ್ಮಗುರು ವಂ.ಫಾ. ರೋಶನ್ ಕ್ರಾಸ್ತಾ, ವಲಯ ಅಧ್ಯಕ್ಷೆ ಗ್ರೇಸಿ ಲೋಬೊ, ವಲಯ ಕಾರ್ಯದರ್ಶಿ ಲೀನಾ ಕ್ರಾಸ್ತ , ಬದ್ಯಾರ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಸಂಯೋಜಕರು, ಕೇಂದ್ರೀಯ ಸಮಿತಿ ಉಪಾಧ್ಯಕ್ಷೆ ಲಿನೆಟ್ ಕ್ಯಾಸ್ಟೆಲಿನೊ, ಕಾರ್ಯದರ್ಶಿ ವಾಯ್ಲೆಟ್ ಪಿರೇರಾ, ಬದ್ಯಾರ್ ಮಹಿಳಾ ಘಟಕದ ಅಧ್ಯಕ್ಷೆ ರೈನಾ ಲೋಬೊ, ಬದ್ಯಾರ್ ಚರ್ಚಿನ ಧರ್ಮ ಭಗಿನಿ ಸಿ.ಜಾನೆಟ್ ರೇಗೊ ಉಪಸ್ಥಿತರಿದ್ದರು.

12 ಚರ್ಚ್ ಘಟಕದ 550 ಮಹಿಳೆಯರು ಭಾಗ ವಹಿಸಿದ್ದರು.ಕಾರ್ಯದರ್ಶಿ ಲೀನಾ ಕ್ರಾಸ್ತಾ ಅಳದಂಗಡಿ ಇವರು ವಾರ್ಷಿಕ ವರದಿ ವಾಚಿಸಿದರು. ಹೂಗುಚ್ಚ ತಯಾರಿಕೆ ಸ್ಪರ್ಧೆ ಏರ್ಪಡಿಸಲಾಗಿತ್ತು.

12 ಘಟಕದವರಿಂದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಯಿತು. ಬೆಳ್ತಂಗಡಿ ವಲಯ ಸಂಘಟನೆಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಇದರ ಲಾಂಛನವನ್ನು ಬಿಡುಗಡೆ ಮಾಡಿ ಉದ್ಘಾಟಿಸಲಾಯಿತು.

ವಲಯ ಅಧ್ಯಕ್ಷೆ ಗ್ರೇಸಿ ಲೋಬೊ ಬೆಳ್ತಂಗಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸೆಲಿನ್ ಕ್ರಾಸ್ತ ಅಳದಂಗಡಿ ಮತ್ತು ಸುನೀತಾ ಫೆರ್ನಾಂಡಿಸ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ವಲಯಉಪಾಧ್ಯಕ್ಷೆ ವೀಣಾ ಫೆರ್ನಾಂಡಿಸ್ ಉಜಿರೆ ವಂದಿಸಿದರು

Related posts

ತೋಟತ್ತಾಡಿ ಗ್ರಾಮದ ದಡ್ಡುಗೆ ಲೋಕೋಪಯೋಗಿ ಸಚಿವರ ಭೇಟಿ: ಸ್ಥಳೀಯರ ಅಹವಾಲು ಸ್ವೀಕಾರ

Suddi Udaya

ಬಂಗೇರ ಬ್ರಿಗೇಡ್ ಪಡಂಗಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಾಗೂ ವಿಜಯ ದಶಮಿ ಉತ್ಸವ ಪ್ರಯುಕ್ತ ಸಭಾ ಕಾರ್ಯಕ್ರಮ

Suddi Udaya

ಡಾ|| ಹೆಗ್ಗಡೆಯವರಿಂದ ಹುಣ್ಸೆಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಡಿ.6-8 ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ, ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆ

Suddi Udaya

ಕಸ್ತೂರಿ ರಂಗನ್ ವರದಿ ಸಚಿವರ ಹೇಳಿಕೆಗೆ ದ.ಕ ಮಲೆಕುಡಿಯ ಸಂಘ ತೀವ್ರ ಆಕ್ಷೇಪ

Suddi Udaya
error: Content is protected !!