September 6, 2026
ಸಮಸ್ಯೆ

ಚಾರ್ಮಾಡಿ: ಕಕ್ಕಿಂಜೆ-ಬೆಂದ್ರಾಳ ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿಗೆ ಗ್ರಾಮಸ್ಥದ ಆಗ್ರಹ

ಚಾರ್ಮಾಡಿ: ಕಕ್ಕಿಂಜೆ-ಬೇಂದ್ರಾಳಕ್ಕೆ ಹೋಗುವ ರಸ್ತೆಯ ಮಧ್ಯೆ ರೆಜಿನ ನರ್ಸರಿ ಬಳಿ ಒಣಗಿರುವ ಅಕೇಶಿಯಾದ ಮರಗಳು ಅಪಾಯದ ಸ್ಥಿತಿಯಲ್ಲಿದ್ದು ಇದರ ತೆರವಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಮರಗಳು ಯಾವುದೇ ಸಂದರ್ಭದಲ್ಲೂ ರಸ್ತೆಗೆ ಬೀಳುವ ಸಂಭವವಿದ್ದು, ಮಾ.5ರಂದು ಇದೆ ರಸ್ತೆಯಲ್ಲಿ ವಾಹನವೊಂದು ಸಂಚರಿಸುವಾಗ ಒಣಗಿರುವ ಮರದ ಕೊಂಬೆ ವಾಹನದ ಮೇಲೆ ಬಿದ್ದಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾನೆ.

ಈ ಬಗ್ಗೆ ಸ್ಥಳೀಯರೊಬ್ಬರು ವಲಯ ಅರಣ್ಯ ಅಧಿಕಾರಿಗೆ ತಿಳಿಸಿದ್ದು, ಅವರು ಅರಣ್ಯ ಇಲಾಖೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲಿಸಿ ಮೆಸ್ಕಾಂ ಇಲಾಖೆ ವಿದ್ಯುತ್ ತಂತಿಗಳನ್ನು ತೆರವು ಮಾಡಿ ಕೊಡಬೇಕು ಎಂದು ತಿಳಿಸಿದ್ದರು. ಆದರೆ ಮೆಸ್ಕಾಂ ಇಲಾಖೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸ್ಥಳೀಯರಾದ ನಝೀರ್ ಆರೋಪಿಸಿದ್ದಾರೆ.

Related posts

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

Suddi Udaya

ಮಾಲಾಡಿ ಸೋಣಂದೂರಿನಲ್ಲಿ ಗಾಳಿ ಮಳೆಗೆ ಮನೆ, ಕೃಷಿಗೆ ತೀವ್ರ ತರಹದ ಹಾನಿ: ಕೋಟ್ಯಾಂತರ ರೂ. ನಷ್ಟಮಾಲಾಡಿ ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್‌ರವರ ನೇತೃತ್ವದಲ್ಲಿ ಕಾರ್ಯಾಚರಣೆ

Suddi Udaya

ಕೊಕ್ಕಡ ಬೆಳೆ ವಿಮೆ ಸಮಸ್ಯೆ – ಟಾಟಾ ಎಐಜಿ ಉತ್ತರ

Suddi Udaya

ಬಂದಾರು ಗ್ರಾಮದ ಮೈರೋಲ್ತಡ್ಕ ಚಾಕೋಟೆದಡಿ ನಿವಾಸಿ ಶೇಖರ ಗೌಡ ಅವರ ಮನೆಗೆ ವಿಪರೀತ ಗಾಳಿಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಪಡ್ಡಂದಡ್ಕ ರಸ್ತೆ ದುರಸ್ಥಿ ಆಗ್ರಹಿಸಿ ಹೊಸಂಗಡಿ ಪಂಚಾಯತ್‌ಗೆ ಎಸ್‌ಡಿಪಿಐ ನಿಂದ ಮನವಿ

Suddi Udaya

ಕಾಡಾನೆ ದಾಳಿ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತ ಪರಿಹಾರ ನೀಡಲು ಉದ್ಯಮಿ ಗಣೇಶ್ ಕಲಾಯಿ ಒತ್ತಾಯ

Suddi Udaya
error: Content is protected !!