26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳು

ಕೆನರಾ ಬ್ಯಾಂಕಿನಿಂದ ದ.ಕ ಹಾಲು ಒಕ್ಕೂಟಕ್ಕೆ ದ್ರುವಸಾರಜನಕ ಜಾಡಿ ಕೊಡುಗೆ

ಬೆಳ್ತಂಗಡಿ: ರಾಸುಗಳಲ್ಲಿ ಗರ್ಭಧಾರಣೆ ಫಲಿತಾಂಶವನ್ನು ಹೆಚ್ಚಿಸಲು ಸಹಾಯಕವಾಗುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್, ಪ್ರಾದೇಶಿಕ ಕಚೇರಿಯಿಂದ ದ.ಕ ಹಾಲು ಒಕ್ಕೂಟದ ಕೃತಕ ಗರ್ಭಧಾರಣಾ ಕೇಂದ್ರಗಳಿಗೆ ದ್ರವಸಾರಜನಕ ಜಾಡಿಗಳನ್ನು ಬ್ಯಾಂಕಿನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ಮಾ.13ರಂದು ಹಸ್ತಾಂತರಿಸಲಾಯಿತು.

ದ.ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಮಾತನಾಡಿ ಕೆನರಾ ಬ್ಯಾಂಕಿನ ಈ ಕೊಡುಗೆಯು ಹೈನುಗಾರ ರೈತರಿಗೆ ಪ್ರಯೋಜನಕಾರಿಯಾಗಿದೆ. ಕೆನರಾ ಬ್ಯಾಂಕಿನ ಉದಾರ ಕೊಡುಗೆಗೆ ಬ್ಯಾಂಕಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥೆ ಲತಾ ಪಿ ಕುರುಪ್ ಮಾತನಾಡಿ ಬ್ಯಾಂಕ್ ತನ್ನ ಆದಾಯದಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಹಂಚಲು ಹರ್ಷಿಸುತ್ತದೆ ಹಾಗೂ ಗ್ರಾಮೀಣ ಭಾಗದ ರೈತರಿಗೆ ಈ ಕೊಡುಗೆಯು ಬಹಳಷ್ಟು ಉಪಯುಕ್ತವಾಗುವುದು ತಮಗೆ ತೃಪ್ತಿಯನ್ನು ನೀಡಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಉದಯ ಕೋಟ್ಯಾನ್ , ನಿರ್ದೇಶಕರುಗಳು, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಮತ್ತು ವ್ಯವಸ್ಥಾಪಕ ಡಾ| ರವಿರಾಜ್ ಉಡುಪ ಉಪಸ್ಥಿತರಿದ್ದರು. ಕೆನರಾ ಬ್ಯಾಂಕಿನ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಕೃತಕ ಗರ್ಭಧಾರಣ ಕಾರ್ಯಕರ್ತರಿಗೆ ಸಾಂಕೇತಿಕವಾಗಿ ದ್ರವಸಾರಜನಕ ಜಾಡಿಗಳನ್ನು ಹಸ್ತಾಂತರಿಸಲಾಯಿತು.

Related posts

ನಿಡ್ಲೆ: ಬರೆಂಗಾಯ ನಿವಾಸಿ ಪ್ರಭಾಕರ ಆಚಾರ್ಯ ನಿಧನ

Suddi Udaya

ಮಚ್ಚಿನ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಪರಿಸರ ದಿನಾಚರಣೆ

Suddi Udaya

ಹೆದ್ದಾರಿ ಕಾಮಗಾರಿ ವಾಹನಕ್ಕೆ ಬೈಕ್ ಡಿಕ್ಕಿ: ಸವಾರನಿಗೆ ಗಾಯ

Suddi Udaya

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

Suddi Udaya

ಬೆಳಾಲು: ದಿ| ದಿನೇಶ್ ಪೂಜಾರಿ ಉಪ್ಪಾರು ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಅನಂತೋಡಿ ವೃತ್ತ ಲೋಕಾರ್ಪಣೆ

Suddi Udaya

ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ

Suddi Udaya
error: Content is protected !!