25.4 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ನಾವೂರು ಬಡೆಕ್ಕಾವು ದೈವ ಕಂಬಳ ಮುಹೂರ್ತ

ನಾವೂರು ಬಡೆಕ್ಕಾವು ಗುತ್ತು ಗ್ರಾಮದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮುಹೂರ್ತ
ಮಾ.14 ರ ಮೀನಾ ಸಂಕ್ರಮಣದಂದು ಅರ್ಚಕ ಅನಂತರಾಮ ಉಪಾಧ್ಯಾಯ ಪೌರೋಹಿತ್ಯದಲ್ಲಿ ನೆರವೇರಿ ತುಳುನಾಡಿನ ದೈವದ ಕಂಬಳಕ್ಕೆ ಮತ್ತು ತುಳುವರ ಧಾರ್ಮಿಕ ನಂಬಿಕೆಗೆ ಅವಿನಾಭಾವ ಸಂಬಂಧವಿದೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕಂಬಳ ಮಹತ್ವವನ್ನು ಪಡೆದುಕೊಂಡಿದ್ದು ಈ ಕಾಲಘಟ್ಟದಲ್ಲಿ ದೈವ ಸೇವೆ ಎಂದು ಕಂಬಳ ನಡೆಯುತ್ತಿರುವುದು ಬಹಳ ಅಪರೂಪ
ಇಲ್ಲಿಯ ಸಂಸ್ಕೃತಿ ಮತ್ತು ದೈವರಾದನೆ ಹಾಗೂ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಜಾನಪದ ಕಲೆಯನ್ನು ಉಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಹಾಗೂ ಈ ಕಂಬಳ ಮುಹೂರ್ತವನ್ನು ಸಾಂಕೇತಿಕವಾಗಿ ನಡಗುತ್ತು ಧನಂಜಯ ಅಜ್ರಿ ನೆರವೇರಿಸಿದರು.

ಪ್ರಮುಖರಾದ ವಿಜಯ ಕುಮಾರ್ ಕಂಗಿನ ಮನೆ, ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ರಕ್ಷಿತ್ ಅಜಿಲ ಬಡೆಕ್ಕಾವು, ಸತೀಶ್ ದಂಪತಿಗಳು ಬೊಳ್ಳೂರುಗುತ್ತು, ಜಿನೇಂದ್ರ ಕುಮಾರ್ ಈದು, ಶಾಂತಪ್ರಸಾದ್ ಬಂಟ್ವಾಳ, ವಸಂತ ಪೂಜಾರಿ ಇಡ್ಯಾಲ, ಜಾರಪ್ಪ ಮೂಲ್ಯ ಕಾರ್ಮಿನಡ್ಕ, ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ, ಊರಿನ ಎಲ್ಲಾ ಭಕ್ತರು ಚಾಕರಿಯವರು ಗುತ್ತು ಬರ್ಕೆಯವರು, ದೈವದ ಪರಿಚಾರಕರು ವಿನಯದವರು ಪರ ಊರಿನವರು ಉಪಸ್ಥಿತರಿದ್ದರು. ವರದಿ: ರತ್ನಾಕರ ನಾವೂರು

Related posts

ಬಳಂಜ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಮುಂಡಾಜೆ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮಾದಕ ವ್ಯಸನ ಮುಕ್ತ ಹಾಗೂ ಆರೋಗ್ಯ ನೈರ್ಮಲ್ಯದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಯುವಕ ಸಾವು

Suddi Udaya

ನಾವೂರು: ನಿoರ್ದಿ ಬಳಿ ರಸ್ತೆಗೆ ಬಿದ್ದ ಮರ ಗ್ರಾ.ಪಂ. ನಿಂದ ತೆರವು ಕಾರ್ಯ

Suddi Udaya

ಉಜಿರೆ ಹಳೆಪೇಟೆ ನವೀಕೃತ ಶಾಲೆ ಹಸ್ತಾಂತರ

Suddi Udaya

ಬೆಳ್ತಂಗಡಿ: ವಾಣಿ ಪ.ಪೂ. ಕಾಲೇಜಿನ ಎನ್. ಎಸ್. ಎಸ್. ವಿದ್ಯಾರ್ಥಿ ತೇಜಸ್ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya
error: Content is protected !!