22.6 C
ಪುತ್ತೂರು, ಬೆಳ್ತಂಗಡಿ
September 16, 2026
Uncategorized

ರಮ್ಜಾನ್ ಹಬ್ಬದ ಪ್ರಯುಕ್ತ ವೇಣೂರು ಆರಕ್ಷಕ ಠಾಣೆಯಲ್ಲಿ ಶಾಂತಿ ಸಭೆ

ವೇಣೂರು; ರಮ್ಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ವೇಣೂರು ಆರಕ್ಷಕ ಠಾಣ ಉಪನಿರೀಕ್ಷಕ ಶ್ರೀ ಅಕ್ಷಯ ಡವಗಿ ರವರ ಅಧ್ಯಕ್ಷತೆಯಲ್ಲಿ ಮಾ 14 ರಂದು ನಡೆಯಿತು.

ವೇಣೂರು ಠಾಣಾ ವ್ಯಾಪ್ತಿಯ ಮಸೀದಿ ಆಡಳಿತ ಸಮಿತಿ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗನ್ನುದ್ದೇಶಿಸಿ ಮಾತಾಡಿದ,ಠಾಣಾಧಿಕಾರಿ,ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಿ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ವಿನಂತಿಸಿದರು.ನಮ್ಮ ಠಾಣಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಅತ್ಯಂತ ಶಾಂತಿಯಿಂದ ಹಬ್ಬ ಹರಿದಿನಗಳ ಆಚರಣೆಯ ಇತಿಹಾಸವಿದ್ದರೋ,ಮುಂಜಾಗೃತಾ ಕ್ರಮವಾಗಿ ಈ ಸಭೆಯನ್ನು ಕರೆಯಲಾಗಿದ್ದು ಬಂದು ಸಲಹೆ ಸೂಚನೆ ನೀಡಿದ್ದಕ್ಕೆ ವಂದನೆಗಳು ಮುಂದೆಯೂ ನಿಮ್ಮಲ್ಲರ ಸಹಕಾರ ಇರಲಿ ಎಂದು ಹಬ್ಬಕ್ಕೆ ಶುಭ ಹಾರೈಸಿದರು.

ಎ ಎಸ್ ಐ, ಶ್ರೀ ವೆಂಕಟೇಶ್ ಮತ್ತು ಸಿಬಂದಿ ವರ್ಗ,ಪತ್ರಕರ್ತ ಎಚ್ ಮಹಮ್ಮದ್ ವೇಣೂರು,ಪಡ್ಡoದಡ್ಕ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಪೆರಿಂಜೆ ಮದರಸ ಸಮಿತಿ ಅಧ್ಯಕ್ಷ ಅಶ್ರಫ್ ಗಾಂಧಿನಗರ,ಪುಲಾಬೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಲಿಯಬ್ಬ,ಕರಿಮನೇಲು ಶಾಂತಿ ನಗರ ಮದರಸ ಸಮಿತಿ ಅಧ್ಯಕ್ಷ ಪಿ.ಎಚ್ ಅಶ್ರಫ್ ,ಇಸ್ಮಾಯಿಲ್ ಉಳ್ತೂರು ಕೆಪಿ ಬಸೀರ್ , ಪುತ್ತುಮೋನು ಕಾಶಿಪಟ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Related posts

ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರಸಂಗಮ ಉದ್ಘಾಟನೆ

Suddi Udaya

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ವಿಶೇಷ ಆಫರ್ ಹಾಗೂ ಆಕರ್ಷಕ ಉಡುಗೊರೆ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರ ವಿತರಣೆ

Suddi Udaya

ಬಜಿಲ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ

Suddi Udaya

ವಗ್ಗ: ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya

ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Suddi Udaya
error: Content is protected !!