22.6 C
ಪುತ್ತೂರು, ಬೆಳ್ತಂಗಡಿ
September 16, 2026
ಕ್ರೀಡಾ ಸುದ್ದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ರಂಜನ್‌ ಜಿ. ಗೌಡ ನೇತೃತ್ವದ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಕಂಬಳ ಉದ್ಘಾಟನೆ

ಬಂಗಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬಂಗಾಡಿ ಕೊಲ್ಲಿ ನೇತ್ರಾವತಿ ನದಿ ಕಿನಾರೆಯ ವಿಶಾಲ ಪ್ರದೇಶದ ಕಂಬಳ ಕ್ರೀಡಾಂಗಣದಲ್ಲಿ ನಡೆಯುವ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ರವರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಚಾಲನೆ ನೀಡಿದರು.

ಕೊಲ್ಲಿ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಕೊಕ್ಕರ್ಣೆ, ಪ್ರಶಾಂತ್ ಕೆ ಎಸ್, ಉಪಾಧ್ಯಕ್ಷ ಸೂರಜ್ ವಲಂಬ್ರ, ರವಿ ಚಕ್ಕಿತ್ತಾಯ, ಹಿರಿಯರಾದ ಕೃಷ್ಣಪ್ಪ ಪೂಜಾರಿ, ಹಿರಿಯ ಪತ್ರಕರ್ತ ಅಶ್ರಫ್ ಆಲಿ ಕುಂಜಿ , ಖಾಜೂರು ಆಡಳಿತ ಮಂಡಳಿಯ ಹಿರಿಯರಾದ ಬದ್ರುದ್ದೀನ್ ಕಾಜೂರು , ಡಾ.ಎಂ.ಎಂ ದಯಾಕರ್, ವಿಘ್ನೇಶ್ ಪ್ರಭು ಆಲಂದಡ್ಕ ಧಾರ್ಮಿಕ ದತ್ತಿ ಇಲಾಖೆ ಮಾಜಿ ಸದಸ್ಯ ಮುಕುಂದ ಸುವರ್ಣ, ಪ್ರಕಾಶ್ ಅಜೆಕಾರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಂಬಳ ಸಮಿತಿ ಉಪಾಧ್ಯಕ್ಷರುಗಳಾದ ಸೀತಾರಾಮ, ಹಾರ್ತಾಜೆ, ತುಂಗಪ್ಪ ಪೂಜಾರಿ, ಕಾಜೂರು, ವಿನಯಚಂದ್ರ, ಪಡೆಂಕಲ್ಲು, ಹಸೈನಾ‌ರ್ ಬಾವಲಿಬನ, ಕಿಶೋರ್ ಹೂರ್ಜೆ, ಕಾರ್ಯದರ್ಶಿಗಳಾದ ಭರತ್‌ ಕುಮಾರ್ ಬಂಗಾಡಿ, ಆನಂದ ಗೌಡ, ಮೈರ್ನೋಡಿ, ಮಧುಕರ ಸುವರ್ಣ, ಕೋಶಾಧಿಕಾರಿಗಳಾದ ಖಾಸಿಂ, ಮಲ್ಲಿಗೆಮನೆ, ಯಶೋಧರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ಕುಳೆಂಜಿರೋಡಿ, ವಿವಿಧ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಶೋರ್ ವಲಂಬ್ರಸ್ವಾಗತಿಸಿದರು. ಸ್ವಾಗತ ಸಮಿತಿ ಉಪಾಧ್ಯಕ್ಷ ವಿನಯ ಕುಮಾರ್ ಸೇನರಬೆಟ್ಟು ವಂದಿಸಿದರು.

Related posts

ಸಂವಿಧಾನ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ನಡೆಸಿದ ಜಿಲ್ಲಾಮಟ್ಟದ ಸ್ಪರ್ಧ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗ ಪರಮೇಶ್ವರಿ ಯಕ್ಷಗಾನ ಸಂಘ ಹಾಗೂ ದಿ. ಹೊನ್ನಪ್ಪ ಗೌಡರ ಅಭಿಮಾನಿ ಬಳಗದಿಂದ ಯಕ್ಷಗಾನ ತಾಳಮದ್ದಳೆ ಮತ್ತು ನುಡಿ ನಮನ ಕಾರ್ಯಕ್ರಮ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ

Suddi Udaya

ರಾಜ್ಯದ ಜೈನ ಸಮುದಾಯದ ಕುಂದು ಕೊರತೆಗಳ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಜೊತೆ ಸಮಾಲೋಚನಾ ಸಭೆ

Suddi Udaya

ಉಜಿರೆ: ಗುರಿಪಳ್ಳ ಅಂಬಡೆಬೆಟ್ಟು ನೂತನ ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ಜಾತ್ರಾ ಮಹೋತ್ಸವ, ಆಮಂತ್ರಣ ದಶಮಾನೋತ್ಸವ ಸಂಭ್ರಮ: ಉದ್ಯಮಿ ಮೋಹನ್ ಕುಮಾರ್‌ರವರಿಂದ ಅಮ್ಯೂಸ್‌ಮೆಂಟ್ ಉದ್ಘಾಟನೆ

Suddi Udaya
error: Content is protected !!